ಮಕ್ಕಳಿಗೆ ಶಾಲಾ ಸಾಮಗ್ರಿಗಳ ವಿತರಣೆ
ಕಾಗವಾಡ 03: ತಾಲೂಕಿನ ಜುಗೂಳ ಗ್ರಾಮದ ಸಕಾರಾಮ ಪಾಖರೆ ದಂಪತಿಗಳ ಸಹಯೋಗದಲ್ಲಿ ಗ್ರಾಮದ ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಗ್ರಾಮದ ಸಕಾರಾಮ ಪಾಖರೆ ಅವರು ಪ್ರತಿ ವರ್ಷ ತಮ್ಮ ಮದುವೆಯ ವಾರ್ಷಿಕೋತ್ಸವದಂದು ಗ್ರಾಮದ ಶಾಲೆಗಳ ಮಕ್ಕಳಿಗೆ ಸಹಾಯ-ಸಹಕಾರ ಮಾಡುತ್ತಾ ಬಂದಿರುತ್ತಾರೆ. ಸತತ ಪರಿಶ್ರಮದೊಂದಿಗೆ ತಮ್ಮ ಜೀವನ ರೂಪಿಸಿಕೊಂಡಿರುವ ಸಕಾರಾಮ ಪಾಖರೆ ಅವರು ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.
ಅವರ ಈ ಸಹಕಾರಕ್ಕೆ ಗ್ರಾಮದ ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್ನ ಸದಸ್ಯರು ಸಹಕರಿಸಿ, ಈ ವರ್ಷ ಮಂಗಳವಾರ ದಿ. 02 ರಂದು ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಸಕಾರಾಮ ಪಾಖರೆ ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್ನ ಸಮಾಜ ಮುಖಿ ಕಾರ್ಯಗಳು ಇದೇ ರೀತಿ ಮುಂದುವರೆಯಲಿ ಎಂದು ತಿಳಿಸಿದ್ದಾರೆ. ಶಾಲಾ ಮುಖೋದ್ಯಾಪಕರು ಮಾತನಾಡಿ, ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿದ ಸಕಾರಾಮ ಪಾಖರೆ ದಂಪತಿಗಳಿಗೆ ಮತ್ತು ಸಿದ್ಧಿ ಫೌಂಡೇಶನ್ನ ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಸಮಯದಲ್ಲಿ ಸಕಾರಾಮ ಪಾಖರೆ ದಂಪತಿಗಳು, ಸಿದ್ದಿ ಹುಮ್ಯಾನಿಟಿ ಫೌಂಡೇಶನ್ ಅಧ್ಯಕ್ಷ ಬಾಹುಬಲಿ ಉಪಾಧ್ಯೆ ಹಾಗೂ ಪದಾಧಿಕಾರಿಗಳಾದ ಪ್ರಶಾಂತ ಸಾವಂತ, ಬಾಬಾಸಾಹೇಬ ತಾರದಳೆ, ಸುಧಾಕರ ಸುಂಕೆ, ರಾಜು ಅಮ್ಮನಿಗೆ, ಸುಪಿತ ಗುರುಗೋಳೆ, ಕೇತನ ದಾನೋಳೆ, ಪ್ರತೀಕ್ ಲಾಂಡಗೆ, ವಿಫೂಲ್ ಉಪಾಧ್ಯೆ, ಅಭಿ ಗುರಗೋಳೆ, ರೋಹೀತ ಮೋಳೆ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.