ಬೈಲಹೊಂಗಲ

ಕೊರೊನಾ ರೋಗಿಗಳಿಗೆ ಮಾತ್ರೆಗಳ ಕಿಟ್ ವಿತರಣೆ

ಕೊರೊನಾ ರೋಗಿಗಳಿಗೆ ಮಾತ್ರೆಗಳ ಕಿಟ್ ವಿತರಣೆ

ಬೈಲಹೊಂಗಲ 18: ಸರಕಾರ ತಿಳಿಸಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿ, ಮಾಸ್ಕ ಬಳಸಿ, ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ, ಕ್ಷೇತ್ರದ ಜನತೆ ಭಾರತೀಯ ಜನತಾ ಪಕ್ಷದ ಮೇಲೆ ನಂಬಿಕೆ ಇಡಿ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ ಎಂದು ಯುವ ಉದ್ಯಮಿ ವಿಜಯ ಮೆಟಗುಡ್ಡ ಹೇಳಿದರು. 

ಅವರು ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ಮತಕ್ಷೇತ್ರದ ಕರೊನಾ ರೋಗಿಗಳಿಗೆ ಅವಶ್ಯಕವಾಗಿರುವ ಮಾತ್ರೆಗಳ 2500 (ಎರಡು ಸಾವಿರದ ಐನೂರೂ) ಕಿಟ್ ಗಳನ್ನು ತಯಾರಿಸಿ ಕೋವಿಡ್ ಸೊಂಕು ಕಂಡುಬರವಂತಹ ಜನರಿಗೆ ಉಚಿತವಾಗಿ ಹಳ್ಳಿಗಳಲ್ಲಿರುವ ವೈದ್ಯರ ಹಾಗೂ ನಗರದಲ್ಲಿರುವ ವೈದ್ಯರ ಮೂಲಕ ಮಾತ್ರೆಗಳನ್ನು  ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್ 2ನೇ ಅಲೆಯ ತಿವ್ರತೆಯನ್ನು ಮನಗಂಡು ಇಂದು ಡಾ. ಮಹೇಶ್ ಪಾಟೀಲ್ ಅವರ ಮೂಲಕ ಕಿಟ್ ವಿತರಣೆ ಮಾಡಿ  ಜನರ ರಕ್ಷಣೆ ನಮ್ಮ ಜವಾಬ್ದಾರಿ ನಮ್ಮ ಕುಟುಂಬ ಸದಾ ಜನಸೇವೆಗೆ ಸಿದ್ದ ಎಂದರು. ನೆರೆ ಪರಿಹಾರ ಸಂದರ್ಭ ಆಹಾರದ ಕಿಟ್  ಅಗತ್ಯವಸ್ತುಗಳ ಸೇವೆ, ನಂತರ ಕೋವಿಡ್ ಮೊದಲನೆಯ ಅಲೆಯಲ್ಲಿ ಮಾಸ್ಕ್‌ , ಸ್ಯಾನಿಟೈಸರ್ , ವಿಟಮಿನ್‌-ಸಿ ಮಾತ್ರೆಗಳ ವಿತರಣೆ ಈಗ  ಎರಡನೇ ಅಲೆಯಲ್ಲಿಯೂ ನನ್ನಿಂದ ಏನಾದರೂ ಸೇವೆ  ಆಗಲೇಬೇಕು ಎಂದು  ಈ ಕಿಟ್ ವಿತರಣಾ ಕಾರ್ಯ  ಕೈಗೆತ್ತಿಕೊಂಡಿದ್ದೇನೆ  ಎಂದರು.  

ಮಾಜಿ ಶಾಸಕ ಜಗದೀಶ ಮೆಟಗುಡ ಮಾತನಾಡಿ, ಯುವ-ಉದ್ಯಮಿ ವಿಜಯ ಮೆಟಗುಡ್ ಅವರ ಸಮಾಜಮುಖಿ ಕಾರ್ಯಗಳನ್ನು ಜನ ಕೊಂಡಾಡುತ್ತಿದ್ದಾರೆ ನೆರೆಹಾವಳಿಯ ಸಂದರ್ಭದಲ್ಲಿ ಪ್ರತಿಯೊಬ್ಬ ನಿರಾಶ್ರಿತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಅಗತ್ಯವಸ್ತುಗಳ ಸಹಾಯ ಮಾಡಿದ್ದು ಇವರ ಸರಳತೆಗೆ ಸಾಕ್ಷಿಯಾಗಿ ನಿಂತಿದೆ ಕಳೆದ ವರ್ಷ ಕರೋನಾ ಮಹಾಮಾರಿಯ ಸಂದರ್ಭದಲ್ಲಿ ನಗರ ಜನತೆಯ ಜೋತೆ ಹಳ್ಳಿಯ ಜನರಿಗೂ ಮಾಸ್ಕ್‌ ನೀಡವ ಕಾರ್ಯವನ್ನು  ಬೈಲಹೊಂಗಲ ಮತಕ್ಷೇತ್ರದ ತುಂಬೆಲ್ಲಾ ತಮ್ಮ ಯುವಪಡೆಯನ್ನು ಮುಂದಿಟ್ಟುಕೊಂಡು ಮಾಸ್ಕ, ಸ್ಯಾನಿಟೈಸರ್, ವಿಟಮಿನ್‌- ಸಿ ಮಾತ್ರೆಗಳ ವಿತರಣೆ ಮಾಡಿದ್ದು ಜನರ ಮೇಲಿನ ಇವರ ಪ್ರೀತಿ ಎಂತವರನ್ನು ಹುಬ್ಬೇರಿಸುವಂತೆ ಮಾಡುತ್ತದೆ, ಇವರ ಈ ಮಹತ್ಕಾರ್ಯದಿಂದ ಜನ ಕ್ಷೇತ್ರದಾದ್ಯಂತ ಇನ್ನು ಹೆಚ್ಚು ಹೆಚ್ಚು ಸೇವೆ ಮಾಡುವಂತೆ ಭಗವಂತ ಅವರಿಗೆ ಆಯುಷ್ಯ ಕರುಣಿಸಲಿ ಎಂಬುದು ಈ ಭಾಗದ ಜನರ ಆಶಯವಾಗಿದೆ. 

 ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಪರಸಭೆ ಸದಸ್ಯ ಗುರು ಮೆಟಗುಡ್, ಸಹಕಾರ ಪ್ರಕೋಷ್ಟ ಜಿಲ್ಲಾ ಸಂಚಾಲಕ ಸುನೀಲ ಮರಕುಂಬಿ, ಯುವ ಉದ್ಯಮಿ ಜಯರಾಜ ಮೆಟಗುಡ್, ಪ್ರಪುಲ್ ಪಾಟೀಲ್, ಪ್ರಶಾಂತ ಅಮ್ಮಿನಭಾವಿ, ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕಿಟ್ ವಿತರಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 



ಸುದ್ದಿ ಓದಿ