ಎಲ್.ಎಸ್.ಗ್ರೂಪ್ನಿಂದ ಆಶಾ ಕಾರ್ಯಕರ್ತರಿಗೆ ಕಿಟ್ ವಿತರಣೆ
ಕಾಗವಾಡ 11: ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅಭಿಮಾನಿ ಬಳಗ ಪ್ರಾರಂಭಿಸಿದ ಎಲ್.ಎಸ್. ಗ್ರೂಪ್ ವತಿಯಿಂದ ಕಾಗವಾಡದಲ್ಲಿ ಕೊರೋನಾ ಸಮಯದಲ್ಲಿ ಜೀವದ ಹಂಗು ತೊರೆದು ಶ್ರಮಿಸಿದ ಆಶಾ ಕಾರ್ಯಕರ್ತರಿಗೆ ಪರಿಹಾರ ಕಿಟ್ಗಳನ್ನು ದಿ. 10ರಂದು ವಿತರಿಸಲಾಯಿತು.
ಅಥಣಿ ತಾಲೂಕಿನ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಿದ್ಧಾರೂಢ ಕೆಂಪೆ ಮಾತನಾಡುತ್ತ ಎಲ್.ಎಸ್.ಗ್ರೂಪ್ ಅಥಣಿ ತಾಲೂಕಿನಲ್ಲಿ 109 ಶಾಖೆ ಹೊಂದಿದ್ದು, ಕಾಗವಾಡ ತಾಲೂಕಿನಲ್ಲಿ ಇದೇ ಪ್ರಥಮ ಶಾಖೆಯಾಗಿದೆ. ಗ್ರೂಪ್ ವತಿಯಿಂದ ಗ್ರಾಮದಲ್ಲಿ ಯುವಕರಿಗೆ ಯೋಗಾ, ವ್ಯಾಯಾಮ ಶಾಲೆಗಳು ಪ್ರಾರಂಬಿಸುವುದು, ಉಚಿತ ರಕ್ತ ದಾನ ಶಿಬಿರ, ಜಿಮ್ ಸಾಹಿತ್ಯ ನೀಡುವುದು, ಸಹ ಇತರ ಕ್ರೀಡಾ ಚಟುವಟಿಗಳನ್ನು ನೀಡುತ್ತಿದ್ದೇವೆ ಅಲ್ಲದೆ ಯುವಕರ ಕಷ್ಟ- ಸುಖಗಳಿಗೆ ಸ್ಪಂದಿಸಲು ಸಂಘಟನೆ ಕಾರ್ಯಕರ್ತರು ಮುಂದಾಗಿದ್ದಾರೆ ಎಂದರು.
ಕಾಗವಾಡ ಶಾಖೆಯ ಅಧ್ಯಕ್ಷ ಬಸವರಾಜ್ ಮಗದುಮ್, ಉಪಾಧ್ಯಕ್ಷೆ ಸಂಜೆಯ ಕರವ, ಕೃಷಿ ಉತ್ಪನ್ನ ಮಾರುಕಟ್ಟೆ ಸಂಚಾಲಕ ರವೀಂದ್ರ ಪೂಜಾರಿ, ನಿವೃತ್ತ ಪ್ರಾಚಾರ್ಯ ಬಿಎ ಪಾಟೀಲ್, ಬಿಜೆಪಿ ಪಕ್ಷದ ಮುಖಂಡರಾದ ರಮೇಶ್ ಚೌಗುಲೆ, ಕಾಕಾ ಪಾಟೀಲ್, ಶಾನೂರ ನಧಾಫ, ಸಚಿನ್ ಕವಟಗಿ, ಪ್ರಕಾಶ್ ಪಾಟೀಲ್, ರಾಜು ಮಗದುಮ್, ಮಹಾವೀರ ಪಾಟೀಲ್, ಜಿತು ಪಾಟೀಲ್, ಸಚಿನ್ ಪಾಟೀಲ್, ಅನಿಲ್ ಕೋರೆ, ನೇಮಿನಾಥ ಚೌಗುಲೆ, ದೊಡ್ಡಿ ರಾಮ ಮಾಳಿ, ಸೇರಿದಂತೆ ಅನೇಕರಿದ್ದರು