27 ವಿದ್ಯಾರ್ಥಿಗಳಿಗೆ ಉದ್ಯೋಗದ ನೇಮಕಾತಿ ಆದೇಶ ಪತ್ರ ವಿತರಣೆ
ರಾಣೇಬೆನ್ನೂರ 01: ನಗರದ ಹೊರ ವಲಯದಲ್ಲಿರುವ ಕೆ.ವಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೆಂಗಳೂರಿನ ಚಿನ್ಮಯ ಎಂಟರೈ್ರಜಿಸನವರಿಂದ 27 ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಕ್ಯಾಂಪಸ್ ನಲ್ಲಿ ಏರಿ್ಡಸಿದ್ದ ಉದ್ಯೋಗದ ಕ್ಯಾಂಪಸ್ ಸಂದರ್ಶನದಲ್ಲಿ ಎಸ್ ಎಸ್ .ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಸೇರಿದಂತೆ ಡಿಗ್ರಿ ಪಾಸಾದ 27 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಆಯ್ಕೆಯಾದ ಹಿನ್ನಲೆಯಲ್ಲಿ ಚಿನ್ಮಯ ಎಂಟರ್ ಪ್ರೈಜಿಸ್ ನ ಮುಖ್ಯಸ್ಥ ವೀರೇಶ್ ಅಂಗಡಿಯವರು ಆಯ್ಕೆಯಾದ ಅವರೆಲ್ಲರಿಗೂ ನೇಮಕಾತಿ ಆದೇಶ ವಿತರಿಸಿದರು. ವೃತ್ತಿಶಿಕ್ಷಣ ಪಡೆದವರು ವಿವಿಧ ಕಂಪನಿಗಳಲ್ಲಿ ಅವರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಗಳು ಲಭ್ಯವಿದ್ದು, ಆಸಕ್ತರುಇದರ ಪ್ರಯೋಜನ ಪಡೆಯಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಅಭಿಲಾಷ್ ಕೆ. ಬ್ಯಾಡಗಿ,ಉಪನ್ಯಾಸಕರಾದರವಿ ತಳವಾರ, ಚಿದಂಬರ್ ನಾಡಿಗೇರ, ಫಯಾಜ್ ಅಹ್ಮದ್, ದೇವರಾಜ್ ಪಾಟೀಲ್, ಅಣ್ಣಪ್ಪ. ಡಿ, ಪ್ರಕಾಶ ನಾಗರಜ್ಜಿ, ನವೀನಕುಮಾರ, ಲತಾ. ಜೆ.ಕೆ. ಸಾನು ಐಶ್ವರ್ಯ, ಭಾವನಾ ಬಿ, ಪೂಜಾ. ಎ. ಬಿ, ಅನಿತಾ ಎ.ಟಿ. ಉಷಾ ಎಸ್.ಎಮ, ಡಿ. ಎಸ್, ಪ್ರೀಯಾಂಕ, ಸುಮನ್ ಖಾನುಂ ಸೇರಿದಂತೆ ಚಿನ್ಮಯ ಎಂಟರ್ ಪ್ರೈಜಿಸ್ ನ ಅಧಿಕಾರಿಗಳು, ಕಾಲೇಜಿನ ಸಿಬ್ಬಂದಿಗಳು ಇದ್ದರು.