ಪತ್ರಿಕಾ ವಿತರಕರಿಗೆ, ಹಾಕರ್ಸಗಳಿಗೆ ದಿನಸಿ ಕಿಟ್ ವಿತರಣೆ
ಅಥಣಿ 19: ಕರೋನಾ ಮತ್ತು ಲಾಕ್ ಡೌನದಂತಹ ಸಂಕಷ್ಟ ಮತ್ತು ಆತಂಕದ ಸಮಯದಲ್ಲೂ ಕೂಡ ಮನೆ ಮನೆಗೆ ದಿನ ಪತ್ರಿಕೆಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಿ ಜನ ಮೆಚ್ಚುಗೆ ಪಡೆದ ವಿತರಕರಿಗೆ, ಹಾಕರ್ಸಗಳನ್ನು ಗುರುತಿಸಿ ಅವರಿಗೆ ದಿನಸಿ ಕಿಟ್ಗಳನ್ನು ವಿತರಿಸುವ ಮೂಲಕ ಅಥಣಿ ಕಾಂಗ್ರೆಸ್ ಪಕ್ಷ ಅವರನ್ನು ಗೌರವಿಸುವ ಕಾರ್ಯ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
ಅವರು ಪತ್ರಿಕಾ ವಿತರಕರಿಗೆ, ಹಾಕರ್ಸಗಳಿಗೆ ದಿನಸಿ ಕಿಟ್ ವಿತರಿಸಿ ಮಾತನಾಡುತ್ತಿದ್ದರು.
ರಾಜ್ಯ ಸರಕಾರ ದುಡಿಯುವ ವರ್ಗಕ್ಕೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿತು ಆದರೆ ಪತ್ರಿಕಾ ವಿತರಕರಿಗೆ, ಹಾಕರ್ಸಗಳಿಗೆ ಮಾತ್ರ ಆರ್ಥಿಕ ಸಹಾಯ ಮಾಡುವಂತಹ ಯಾವುದೇ ಯೋಜನೆಯನ್ನು ಅನುಷ್ಠಾನಗೊಳಿಸುದೇ ಇದ್ದುದು ಬೇಸರದ ಸಂಗತಿಯಾಗಿದೆ ಎಂದರು. ಕಾಳಜಿಪೂರ್ವಕವಾಗಿ ಮನೆ ಮನೆಗಳಿಗೆ ಬೆಳಗಿನ ಜಾವ ಭಯದ ವಾತಾವರಣದಲ್ಲಿಯೇ ಪತ್ರಿಕೆಗಳನ್ನು ತಲುಪಿಸುವ ಮೂಲಕ ಸರಕಾರದ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದ್ದಾರೆ ಇಂತಹ ಹಂಚುವ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಯಬೇಕು ಎನ್ನುವ ಕಾರಣದಿಂದ ಕಾಂಗ್ರೆಸ್ ಪಕ್ಷ ಅವರನ್ನು ಗುರುತಿಸಿ ಗೌರವಿಸಿದೆ ಎಂದರು.
ಕಾಂಗ್ರೆಸ್ ಮುಖಂಡ ಅನೀಲ ಸುಣಧೋಳಿ ಮಾತನಾಡಿ, ಕಳೆದ 13 ದಿನಗಳಿಂದಲೂ ನಿರಂತರವಾಗಿ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ ಯವರು ಬಡವರಿಗೆ, ನಿರ್ಗಕತಿಕರಿಗೆ, ನಿರ್ಲಕ್ಷಕ್ಕೊಳಪಟ್ಟವರನ್ನು ಗುರಿತಿಸಿ ತಮ್ಮ ಸ್ವಂತ ಖರ್ಚಿನಲ್ಲಿ ದಿನಸಿ, ಓಷಧ ಕಿಟ್ಟಗಳನ್ನು ವಿತರಿಸುತ್ತಿದ್ದಾರೆ ಇವರ ಕಾರ್ಯ ನಜ ಮೆಚ್ಚುವಂತಹದ್ದು ಎಂದ ಅವರು ಇದೇ ರೀತಿ ಧರೆಪ್ಪ ಠಕ್ಕಣ್ಣವರ, ಅಸ್ಲಂ ನಾಲಬಂದ, ರಾವಸಾಬ ಐಹೊಳೆಯವರು ಕೂಡ ಜನ ಸೇವೆ ಮಾಡಿದ್ದಾರೆ ಎಂದರು.
ರಾಜು ಜಮಖಂಡಿಕರ, ಶ್ರೀಕಾಂತ ಪೂಜಾರಿ, ಸುನೀಲ ಸಂಕ, ಸನೀತಾ ಐಹೊಳೆ, ಸಿದ್ಧಾರ್ಥ ಸಿಂಗೆ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಧರೆಪ್ಪ ಠಕ್ಕಣ್ಣವರ, ರಮೇಶ ಸಿಂದಗಿ, ಅಸ್ಲಂ ನಾಲಬಂದ ಸೇರಿದಂತೆ ಪತ್ರಿಕಾ ವಿತರಕರು ಉಪಸ್ಥಿತರಿದ್ದರು.