ಇಂಡಿ

ಕಾರ್ಯಕರ್ತರಿಂದ ಹಣ್ಣು ಹಂಪಲು ವಿತರಣೆ

ಕಾರ್ಯಕರ್ತರಿಂದ ಹಣ್ಣು ಹಂಪಲು ವಿತರಣೆ

ಇಂಡಿ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹುಟ್ಟು ಹಬ್ಬದ ಅಂಗವಾಗಿ ಮಂಗಳವಾರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೋಮಶೇಖರ್ ಅವರ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಮಾಡಿ ಹುಟ್ಟುಹಬ್ಬ ಆಚರಿಸಿದರು. 

ಸೋಮಶೇಖರ ದೇವರ, ಅನೀಲಕುಮಾರ ಬಿರಾದಾರ ಮಾತನಾಡಿ ಸರ್ವ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತಿ ಸರ್ವ ಸಮುದಾಯಗಳ ಪ್ರೀತಿಗೆ ಪಾತ್ರರಾದ ಯತ್ನಾಳ ಸಾಹೇಬರು ನೂರಾರು ಕಾಲ ಶುಭವಾಗಲಿ ಎಂದು ಹಾರೈಸಿದರು. ನಂತರ ನೂರಾರು ಅಭಿಮಾನಿಗಳು ಶಾಂತೇಶ್ವರ ದೇವಸ್ಥಾನದಲ್ಲಿ ಯತ್ನಾಳ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ, ತಮ್ಮ ನೆಚ್ಚಿನ ನಾಯಕ ಮುಂದೆ ಮುಖ್ಯಮಂತ್ರಿಗಳಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. 

ಅನಿಲ್‌ಕುಮಾರ್ ಬಿರಾದಾರ, ಪ್ರದೀಪ್ ಉಟಗಿ, ಸಂಗಮೇಶ ಅಳ್ಳಗಿ, ಸುನಿಲ್ ಮಾನೆ, ವಿನೋದ ಹದಗಲ್, ರಾಘು ಕುಡಿಗನೂರ, ಶಂಕರ್ ಹಲವಾಯಿ, ಆನಂದ್ ಬಗಲೇನವರ್, ರಾಜಗುರು ದೇವರ,  ಶರಣು ಜೋಗೂರ, ಬಸವರಾಜ್ ಕಂಬಾರ್, ರವಿ ಹಾದಿಮನಿ, ಸೇರಿದಂತೆ ಮತ್ತಿತರರು ಇದ್ದರು.

ಇಂಡಿ: ಬಸನಗೌಡ ಪಾಟೀಲ್ ಯತ್ನಾಳ್ ಅವರ ಹುಟ್ಟು ಹಬ್ಬದ ಅಂಗವಾಗಿ ಮಂಗಳವಾರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೋಮಶೇಖರ್ ಅವರ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಮಾಡಿ ಹುಟ್ಟುಹಬ್ಬ ಆಚರಿಸಿದರು. 


ಸುದ್ದಿ ಓದಿ