ಇಂಡಿ

ಜೆಡಿಎಸ್ ಕಾರ್ಯಕರ್ತರಿಂದ ಹಣ್ಣು ಹಂಪಲು ವಿತರಣೆ

ಜೆಡಿಎಸ್ ಕಾರ್ಯಕರ್ತರಿಂದ ಹಣ್ಣು ಹಂಪಲು ವಿತರಣೆ

ಇಂಡಿ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ 63ನೆಯ ದಿನಾಚರಣೆಯ ಅಂಗವಾಗಿ, ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲರ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ‌್ಯಕರ್ತರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಹಂಚಿ ಹುಟ್ಟು ಹಬ್ಬ ಆಚರಿಸಿದರು. 

ಬಿ.ಡಿ. ಪಾಟೀಲ ಮಾತನಾಡಿ, ಸದಾ ರೈತಪರ ಯುವಕರ ಪರವಾಗಿ ಮಾತನಾಡುವ ಸಾಲ ಮನ್ನಾದ ರೂವಾರಿ ಮಾಜಿಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ 63ನೆಯ ಜನ್ಮದಿನಾಚರಣೆ ಅಂಗವಾಗಿ ಅವರಿಗೆ ದೇವರು ಆಯುರಾರೋಗ್ಯ ದಯಪಾಲಿಸಲಿ, ರಾಜ್ಯದ ರೈತರ ಹಿತ ಕಾಪಾಡುವ ಹಾಗೂ ದೀನ,ದುರ್ಬಲರ ಸೇವೆಯನ್ನು ಸಲ್ಲಿಸುವ ಶಕ್ತಿ ಭಗವಂತ ಅವರಿಗೆ ನೀಡಲಿ ಎಂದು ಪ್ರಾರ್ಥಿಸಿದರು. 

ಅಯೂಬ ನಾಟೀಕಾರ, ಸಿದ್ದು ಡಂಗಾ, ಬಸವರಾಜ ಹಂಜಗಿ, ಮಹಿಬೂಬ ಬೇವನೂರ, ಡಾ. ರಮೇಶ ರಾಠೋಡ, ಡಾ. ರಾಜೇಶ್ ಕೋಳೆಕರ, ಅಯಾಜ್ ಶೇಖ, ಬಾಬು ಕಾಂಬಳೆ, ಬಾಬು ಮೇತ್ರಿ, ಲಕ್ಕಿ ಲಚ್ಯಾಣ, ಭೀಮ ಕೋಳಿ, ಶಾಂತಯ್ಯ ಪತ್ರಿಮಠ, ರಾಹುಲ್ ರಾಠೋಡ, ಮಳಗು ಪೂಜಾರಿ, ರಾಜು ಮುಲ್ಲಾ, ನಿಯಾಝ್ ಅಗರಖೇಡ, ಇರ್ಫಾನ್ ಅಗರಖೇಡ, ರಫೀಕ್ ಸೋಡೆವಾಲೆ, ಮಂಜು ಬಡಿಗೇರ, ಶ್ರೀ ಶೈಲ ಪೂಜಾರಿ, ಮಲ್ಲು ಬಳಗಾರಿ, ನಾಗೇಶ ಹೇಗಡ್ಯಾಳ, ಖಲೀಲ್ ತೋಳನೂರ, ಸುನೀಲ ಬೂತಾಳಿ, ಸಲಿಂ ಮುಲ್ಲಾ, ಬಸವರಾಜ ಯಡಗಿ ಸೇರಿದಂತೆ ಅನೇಕ ಜೆಡಿಎಸ್ ಕಾರ‌್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ