ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಣೆ
ಶೇಡಬಾಳ 04: ಕಾಗವಾಡ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಪುಣೆಯ ಪಿಂಪರಿ ಚಿಂಚವಾಡದಲ್ಲಿರುವ ಶಂಕರ ಶೇಠ್ ಕುರಾಡೆ ಸ್ಪೋರ್ಟ್ಸ್ ಪೌಂಢೇಶನ ಮತ್ತು ಮಿತ್ರ ಪರಿವಾರದ ವತಿಯಿಂದ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಕೃಷ್ಣಾ ನದಿಗೆ ಮಹಾಪೂರ ಬಂದಾಗ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ನೆರೆಹಾವಳಿ ಪೀಡಿತರು ಕಾಗವಾಡದಲ್ಲಿನ ಬಾಬಾಗೌಡ ಪಾಟೀಲ ಕನ್ನಡ ಮಾಧ್ಯಮ ಶಾಲೆಯಲ್ಲಿ ದಾದಾರಿ ಪೌಂಢೇಶನ ವತಿಯಿಂದ ಪ್ರಾರಂಭಿಸಲಾಗಿರುವ ಕಾಳಜಿ ಕೇಂದ್ರದಲ್ಲಿ ಸಾವಿರಾರು ಜನರು ಆಶ್ರಯ ಪಡೆದುಕೊಂಡಿದ್ದರು.
ಕಾಗವಾಡದ ದಾದಾರಿ ಪೌಂಢೇಶನದ ಆಶ್ರಯದಲ್ಲಿ ನಡೆದಿರುವ ಕಾಳಜಿ ಕೇಂದ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆ ಪೀಡಿತ ಗ್ರಾಮಗಳ ಜನರು ಆಶ್ರಯ ಪಡೆದುಕೊಂಡಿದ್ದರು. ಅವರಿಗೆ ದಿನಾಲು ಊಟ, ವಸತಿ ವ್ಯವಸ್ಥೆಯನ್ನು, ದನ, ಕರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಸಂಘ ಸಂಸ್ಥೆಗಳು ಈ ಸಾಮಾಜಿಕ ಕಾರ್ಯಕ್ಕೆ ತನ್ನದೇ ಆದ ರೀತಿಯಲ್ಲಿ ಸಹಾಯ ಸಹಕಾರ ನೀಡಿದ್ದವು.
ಅದರಂತೆ ಬುಧುವಾರ ದಿ. 4 ರಂದು ದೂರದ ಪುಣೆಯ ಪಿಂಪರಿಚಿಂಚವಾಡದಲ್ಲಿರುವ ಶಂಕರ ಶೇಠ್ ಕುರಾಡೆ ಸ್ಪೋರ್ಟ್ಸ್ ಪೌಂಢೇಶನ ಮತ್ತು ಮಿತ್ರ ಪರಿವಾರದ ವತಿಯಿಂದ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಲಾಯಿತು.
ಸುಮಾರು 500 ಜನರು ಇದರ ಲಾಭವನ್ನು ಪಡೆದುಕೊಂಡರು.
ಈ ಸಮಯದಲ್ಲಿ ದಾದಾರಿ ಪೌಂಢೇಶನ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ಕಾಕಾಸಾಬ ಪಾಟೀಲ, ರಾಜೇಂದ್ರ ಪಾಟೀಲ ಸೇರಿದಂತೆ ಅನೇಕರು ಇದ್ದರು.