ಸಿಂಧಗಿ

ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಣೆ

ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಣೆ


ಲೋಕದರ್ಶನ ವರದಿ 

ಸಿಂದಗಿ 01: ಸರಕಾರಿ ಮತ್ತು ಅನುದಾನಿತ 1 ರಿಂದ 8 ತರಗತಿಯ  ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ರಕ್ತಹೀನತೆ ಹಾಗೂ ಪೋಷಕಾಂಶಗಳ ನ್ಯೂನತೆ ಯನ್ನು ಹೊಗಲಾಡಿಸಲು 2021-22  ನೇ ಸಾಲಿನಲ್ಲಿ  ಮಧ್ಯಾಹ್ನ ಉಪಾಹಾರ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಯನ್ನು ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಹೇಳಿದರು. 


ಬುಧವರಾತ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಅಂಗ ಶಿಕ್ಷಣ ಸಂಸ್ಥೆಗಳಾದ ಎಚ್‌.ಜಿ. ಬಾಲಕರ ಪ್ರೌಢಶಾಲೆ, ಶಾಂತವೀರ ಪಟ್ಟಾಧ್ಯಕ್ಷರ ಕನ್ಯಾ ಪ್ರೌಢಶಾಲೆ ಹಾಗೂ ಎಚ್‌.ಜಿ. ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಸಿ ಅವರು ಮಾತನಾಡಿದರು. 


ಮುಖ್ಯೋಧ್ಯಾಪಕರಾ ಎಸ್‌.ವಾಯ್‌. ಮೇಲಿನಮನಿ, ಎನ್‌.ವಿ. ಆಲಗೂರ, ಮುಖ್ಯಗುರು ಎಲ್‌.ಡಿ. ಜಾದವ, ಶಿಕ್ಷರಾದ ವಿದ್ಯಾ ಕೊಟೆಣ್ಣವರ, ಆರ್‌.ವಾಯ್‌. ಪರೀಟ ಹಾಗೂ ಪಾಲಕರ ಪ್ರತಿನಿಧಿಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ