ಜಮಖಂಡಿ

ಮಾಜಿ ಶಾಸಕ ನ್ಯಾಮಗೌಡ ವಿದ್ಯಾರ್ಥಿನಿ ಆಯುಷಾಗೆ ಸೈಕಲ್ ವಿತರಣೆ

ಮಾಜಿ ಶಾಸಕ ನ್ಯಾಮಗೌಡ ವಿದ್ಯಾರ್ಥಿನಿ ಆಯುಷಾಗೆ ಸೈಕಲ್ ವಿತರಣೆ

ಲೋಕದರ್ಶನ ವರದಿ,

ಜಮಖಂಡಿ26: ತಾಲೂಕಿನ ಆಲಬಾಳ ಗ್ರಾಮದ ದಿ.ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರಿ ಬ್ಯಾಂಕ ಸಹಯೋಗದಲ್ಲಿ ಸೈಕಲ್ ಕ್ರೀಡಾಪಟು ವಿದ್ಯಾಥರ್ಿನಿ ಆಯುಷಾ ಮೋಮಿನ ಅವರಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡ ವಿತರಣೆ ಮಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ. ರಾಜ್ಯಮಟ್ಟಕ್ಕೆ ಅಷ್ಟೇ ಅಲ್ಲದೆ ಜಿಲ್ಲೆಯ ಹಾಗೂ ಹುಟ್ಟಿ ಬೆಳೆದ ಊರಿನ ಕೀತರ್ಿಯನ್ನು ತರುವಂತೆ ಬೆಳಯಬೇಕು. ಕ್ರೀಡೆಯಿಂದ ಶಾರೀರಕವಾಗಿ ದೇಹ ಸದೃಢವಾಗುತ್ತದೆ. ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸಿದರೆ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.

ವರ್ಧಮಾನ ನ್ಯಾಮಗೌಡ, ಬಸುರಾಜ ನ್ಯಾಮಗೌಡ, ಕಲ್ಲಪ ಗಿರಡಿ, ಎ,ಆರ್,ಶಿಂಧೆ, ಭಾಸ್ಕರ ಬಡಿಗೇರ ಸೇರಿದಂತೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಇದ್ದರು.



ಸುದ್ದಿ ಓದಿ