ಕಾಗವಾಡ

ಜುಗೂಳ ಗ್ರಾಮ ಪಂಚಾಯತಿಯಿಂದ ಭಜನಾ ಸಾಮುಗ್ರಿ ವಿತರಣೆ

ಜುಗೂಳ ಗ್ರಾಮ ಪಂಚಾಯತಿಯಿಂದ ಭಜನಾ ಸಾಮುಗ್ರಿ ವಿತರಣೆ

ಕಾಗವಾಡ 09: ನಮ್ಮ ಗ್ರಾಮೀಣ ಕಲೆ-ಸಂಸ್ಕೃತಿಗಳು ಉಳಿಸಿ, ಪೋಷಿಸುವ ಜವಾಬ್ದಾರಿಯು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗ್ರಾಮೀಣ ಭಜನಾ ಮಂಡಳಗಳು ನಮ್ಮ ಸಾಂಸ್ಕೃತಿ, ಧಾರ್ಮಿಕ ಪರಂಪರಗಳನ್ನು ಸಾರುವ ಮಾಧ್ಯಮಗಳಾಗಿವೆ ಎಂದು ಸಿಬಿಕೆಎಸ್‌ಕೆ ನಿರ್ದೇಕರು ಹಾಗೂ ಜುಗೂಳ ಪಿಕೆಪಿಎಸ್ ಅಧ್ಯಕ್ಷರಾದ ಅಣ್ಣಾಸಾಬ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ. 

ಅವರು ಸೋಮವಾರ ದಿ.08 ರಂದು ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ವತಿಯಿಂದ ಸುಮಾರು 27 ಸಾವಿರ ಗ್ರಾಮ ಪಂಚಾಯತಿ ಅನುದಾನದಲ್ಲಿ ಜೈ ಭೀಮ ಭಜನಾ ಮಂಡಳಿಗೆ ಭಜನಾ ಸಾಮುಗ್ರಿಗಳನ್ನು ವಿತರಿಸಿ, ಮಾತನಾಡುತ್ತಿದ್ದರು. ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಅನೇಕ ಗ್ರಾಮೀಣ ಕಲೆ, ಕ್ರೀಡೆಗಳನ್ನು ನಾವೆಲ್ಲರೂ ಬೆಳೆಸಿ ಪೋಷಿಸಬೇಕಾಗಿದೆ. ಇಂದಿನ ಯುವ ಪೀಳಿಗೆ ಆಧುನಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿಯನ್ನು ಮರೆತು ಅಡ್ಡದಾರಿಗೆ ಹೋಗುತ್ತಿದ್ದು, ಭಕ್ತಿಯ ಸಾರ ಸಾರುವ ಮೂಲಕ ದೇವರ ಧ್ಯಾನಕ್ಕೆ ಪ್ರೇರೇಪಿಸುವ ಭಜನೆಗಳು ಭಜನಾ ಮಂಡಳಗಳ ನಡೆಸಿಕೊಂಡು ಬರುತ್ತಿವೆ. ಅಂತಹ ಭಜನಾ ಮಂಡಳಗಳನ್ನು ಪೋಷಿಸುವ ಕಾರ್ಯವಾಗಬೇಕಿದೆ ಎಂದರು.  

ಇನ್ನೂ ಜೈ ಭೀಮ ಭಜನಾ ಮಂಡಳದವರು ಭಜನಾ ಹಾಡುಗಳನ್ನು ಹಾಡಿ, ರಂಜಿಸಿದರು. ಅಣ್ಣಾಸಾಬ ಪಾಟೀಲ, ಗ್ರಾ.ಪಂ. ಅಧ್ಯಕ್ಷ ಕಾಕಾಸಾಬ ಪಾಟೀಲ, ಮುಖಂಡರಾದ ಮಹಾದೇವ ಕಾಂಬಳೆ, ಸುರೇಶ ಪಾಟೀಲ, ಆನಂದ ಕುಲಕರ್ಣಿ, ಅವಿನಾಶ ಪಾಟೀಲ, ನೀತೀನ ಪಾಟೀಲ, ಭರತ ಅಳತೆ, ರಾಜು ಪಾಟೀಲ, ದಾದಾ ಅಂಬಿ, ಚಿದಾನಂದ ತಾರದಾಳೆ ಸೇರಿದಂತೆ ಜೈ ಭೀಮ ಭಜನಾ ಮಂಡಳದವರು ಉಪಸ್ಥಿತರಿದ್ದರು. 


ಸುದ್ದಿ ಓದಿ