ಗುಳೇಗುಡ್ಡ

ವೃತ್ತಿ ಕೌಶ್ಯಲತೆಯಿಂದ ಮಹಿಳೆ ಸ್ವಾವಲಂಬಿಯಾಗಲು ಸಾಧ್ಯ

ವೃತ್ತಿ ಕೌಶ್ಯಲತೆಯಿಂದ ಮಹಿಳೆ ಸ್ವಾವಲಂಬಿಯಾಗಲು ಸಾಧ್ಯ
ಪಟ್ಟಣದಲ್ಲಿ ಮಹಿಳೆಯರಿಗೆ ಟೇಲರಿಂಗ್ ತರಬೇತಿ ಕಿಟ್‍ಗಳನ್ನು ಬಸವರಾಜ ಯಂಡಿಗೇರಿ ವಿತರಿಸಿದರು.

ಗುಳೇದಗುಡ್ಡ 05: ಆಧುನಿಕ ದಿನಮಾನಗಳಲ್ಲಿ ಮಹಿಳೆಯರೂ ಸಹ ವೃತ್ತಿ ಕೌಶಲ್ಯದಲ್ಲಿ ಕ್ರೀಯಾಶೀಲರಾಗುತ್ತಿದ್ದಾರೆ. ಹೀಗೆ ಕ್ರೀಯಾಶೀಲತೆ ರೂಢಿಸಿಕೊಳ್ಳುವುದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಸಾಧ್ಯವೆಂದು  ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಬಸವರಾಜ ಯಂಡಿಗೇರಿ ಹೇಳಿದರು.

ಯುವಶಕ್ತಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಕೇಂದ್ರ ಸರಕಾರದ ಜವಳಿ ಇಲಾಖೆಯ ಸಮರ್ಥ ಯೋಜನೆಯನ್ನು ಆದರ್ಶ ಗಾರಮೇಂಟ್ಸ್ ಆಶ್ರಯದಲ್ಲಿ 81 ದಿವಸದ ಮಹಿಳೆಯರಿಗೆ ಹಮ್ಮಿಕೊಂಡ ಟೇಲರಿಂಗ್ ತರಬೇತಿ ಕಿಟ್ ವಿತರಿಸಿ ಮಾತನಾಡಿದರು. 

ಮಹಿಳೆಯರಲ್ಲಿ ಕಲಿಯುವ ಆಸಕ್ತಿ ಇದ್ದರೆ ವಿವಿದ ವೃತ್ತಿ ಕೌಶಲ್ಯತೆಗಳನ್ನು ಕಲಿತು ಅದರಿಂದ ಆರ್ಥಿಕವಾಗಿ ಮುಂದೆ ಬರಬಹುದು. ಅದಕ್ಕೆ ಸರ್ಕಾರ ಪೂರಕವಾಗಿ ಸಾಕಷ್ಟು ಯೋಜನೆಗಳ ಮುಖಾಂತರ ಹಣ ಖರ್ಚು ಮಾಡುತ್ತಿದೆ. ಮಹಿಳೆಯರು ಅದರ ಪ್ರಯೋಜನ ಪಡೆಯಬೇಕೆಂದರು. 

ಪ್ರಾಚಾರ್ಯ ಶ್ರೀಕಾಂತ ಜೋಶಿ, ಸಂಯೋಜಕ ರಾಜು ಕಟಗೇರಿ, ತರಬೇತಿ ಶಿಕ್ಷಕಿ ದ್ರಾಕ್ಷಾಯಣಿ ವಾಳದಉಂಕಿ, ಶಿವಲೀಲಾ ಮಾನುಟಗಿ, ಕಾರ್ಯಕ್ರಮ ಸಂಯೋಜಕಿ ಭಾರತಿ, ಶಿಲ್ಪಾ ಪರಗಿ, ಬೇನಕಪ್ಪ ಶೇಬಿನಕಟ್ಟಿ ಹಾಗೂ ಇನ್ನಿತರರು ಇದ್ದರು.

ಸುದ್ದಿ ಓದಿ