200ಕ್ಕೂ ಹೆಚ್ಚು ಗಣೇಶ ಮಂಡಳಗಳಿಗೆ ಮೋದಕ ಪ್ರಸಾದ ವಿತರಣೆ
ಶಿರಗುಪ್ಪಿಯ ಡಾ. ಅಮೋಲ ಸರಡೆ ವಿನೂತನ ಭಕ್ತಿ ಮೆರೆದು ಮಾದರಿಯಾದ ವೈದ್ಯ
ಕಾಗವಾಡ 16: ತಾಲೂಕಿನ ಶಿರಗುಪ್ಪಿಯ ದಂತ ವೈದ್ಯ ಡಾ. ಅಮೋಲ ಸರಡೆ ಅವರು ಸದಾ ಒಂದಿಲ್ಲೊಂದು, ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ. ಈಗ ಗಣೇಶ ಹಬ್ಬದ ಪ್ರಯುಕ್ತ ರವಿವಾರ ದಿ. 15 ರಂದು ಶಿರಗುಪ್ಪಿ ಸುತ್ತಮುತ್ತಲಿನ ಪರಿಸರದ ಸುಮಾರು 200 ಸಾರ್ವಜನಿಕ ಗಣೇಶ ಮಂಡಳಗಳಿಗೆ ಭೇಟ್ಟಿ ನೀಡಿ, ಮೊದಕ ಪ್ರಸಾದ ವಿತರಿಸಿ, ಭಕ್ತಿಯ ಪರಾಕಾಷ್ಟೆ ತೋರಿದ್ದಾರೆ.
ಡಾ. ಅಮೋಲ ಸರಡೆ ಅವರು ತಮ್ಮ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಶಿರಗುಪ್ಪಿ ಮತ್ತು ಸುತ್ತಮುತ್ತಲಿನ ಪರಿಸರದ ಗ್ರಾಮಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಈ ಭಾಗದಲ್ಲಿ ಚಿರಪರಿಚಿರಾಗಿದ್ದಾರೆ. ಈಗ ಗಣೇಶ ಹಬ್ಬದ ಪ್ರಯುಕ್ತ ಕಾಗವಾಡ ಹಾಗೂ ಚಿಕ್ಕೋಡಿ ತಾಲೂಕಿನ ಮಂಗಾವತಿ, ಜುಗೂಳ, ಶಹಾಪೂರ, ಶಿರಗುಪ್ಪಿ, ಇಂಗಳಿ, ಹೊಸ ಇಂಗಳಿ, ಮೊಳವಾಡ, ಕುಸನಾಳ, ಉಗಾರ ಬುದ್ರುಕ್ ಗ್ರಾಮದ ಸುಮಾರು ಎರಡನೂರು ಗಣೇಶ ಮಂಡಳಿಗೆ ಭೇಟಿ ನೀಡಿ, ಗಣೇಶನಿಗೆ ಪ್ರಿಯವಾದ ಮೋದಕ ಪ್ರಸಾದವನ್ನು ಪ್ರತಿಯೊಂದು ಮಂಡಳಿಗಳಿಗೆ 51 ಮೊದಕಗಳನ್ನು ವಿತರಿಸಲಾಯಿತು. ಅವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಲಕ್ಷ್ಮಣ ಗುಂಜಾಳೆ, ಕಾಡಗೊಂಡ ಪಾಟೀಲ, ಬಂಡು ಪಾಟೀಲ, ಸಂದೀಪ ಪಾಟೀಲ, ಸುರೇಶ್ ಪಾಟೀಲ, ರೋಹಿತ ಘುಣಕೆ, ರಾಜಗೊಂಡಾ ಪಾಟೀಲ, ದೀಲೀಪ ಪಾಟೀಲ, ಸೋಮನಾಥ ಹೂಗಾರ, ರವಿ ಬೈರಾಗಿ, ಮಹಾವೀರ ಪನದೆ, ಸತೀಶ ಬಿರಾದರ, ದಯಾನಂದ ಕೆರೂರೆ, ಮಿಲನ ಕೋಳಿ, ಉಮರ ಸಯ್ಯದ, ಅಣ್ಣಾಸಾಬ ದಾವಾಡೆ, ರಾಹುಲ ಹರದಾರೆ, ಶಾಂತಿಸಾಗರ ಮಾನಗಾಂವೆ, ಬಾಬಾಸಾಹೇಬ ಧೋತ್ರೆ, ಸಾಗರ ಪೂಜಾರಿ, ಅಭಿಷೇಕ ಸುತಾರ, ಸುನಿಲ ಪಿರಣ್ಣವರ ಸೇರಿದಂತೆ ಅನೇಕ ಯುವಕರು ಗಣೇಶ ಮಂಡಳಿಗೆ ಪ್ರಸಾದ ವಿತರಿಸಲು ಸಹಕಾರ ನೀಡಿದರು.
ಒಟ್ಟಿನಲ್ಲಿ ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿರುವ ಡಾ. ಅಮೋಲ ಸರಡೆ ಅವರು ಈ ಕಾರ್ಯ ಸುತ್ತಮುತ್ತಲಿನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.