ಕಾಗವಾಡ

ಕೊರೊನಾ ವಾರಿಯಸರ್್ರಿಗೆ ಕೋವಿಡ್-19 ಪರೀಕ್ಷಾ ಕಿಟ್ ವಿತರಣೆ

ಕೊರೊನಾ ವಾರಿಯಸರ್್ರಿಗೆ ಕೋವಿಡ್-19 ಪರೀಕ್ಷಾ ಕಿಟ್ ವಿತರಣೆ

ಕಾಗವಾಡ 05:  ಕೊರೊನಾ ಮಹಾಮಾರಿಯಲ್ಲಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಸೇವೆ ಸಲ್ಲಿಸಿದ್ದ 482 ಆಶಾ ಮತ್ತು ಅಂಗನವಾಡಿ ಕಾರ್ಯಕತರ್ೆಯರಿಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಇವರಿಂದ ಕೋವಿಡ್-19 ಪರೀಕ್ಷಾ ಕಿಟ್ ವಿತರಿಸಲಾಯಿತು.ಶನಿವಾರ ರಂದು ಕಾಗವಾಡ ಮತ್ತು ಶಿರಗುಪ್ಪಿ ಗ್ರಾಮದಲ್ಲಿ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲರ ಮುಖ್ಯ ಉಪಸ್ಥಿತಿಯಲ್ಲಿ ಕೋವಿಡ್-19 ಪರೀಕ್ಷಾ ಕಿಟ್ ವಿತರಿಸಲಾಯಿತು.

ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತಿಯಲ್ಲಿ ಶಿರಗುಪ್ಪಿ, ಜುಗೂಳ, ಮಂಗಾವತಿ, ಶಹಾಪುರ ಗ್ರಾಮಗಳ 40 ಕೊರೊನಾ ವಾರಿಯರ್ಸ್ರಿಗೆ ಮತ್ತು ಕಾಗವಾಡದಲ್ಲಿ 24 ವಾರಿಯರ್ಸ್ರಿಗೆ ಸಂಸದರು ಹಾಗೂ ಸಚಿವರು ಕೋವಿಡ್ ಕಿಟ್ ವಿತರಿಸಿದರು. ತಾಲ್ಲೂಕಿನಲ್ಲಿ 482 ಕೊರೊನಾ ವಾರಿಯರ್ಸ್ರಿದ್ದು, ಇದರಲ್ಲಿ 244 ಅಂಗನವಾಡಿ ಕಾರ್ಯಕತರ್ೆಯರಿದ್ದಾರೆ. ಇಳಿದ ಕಾರ್ಯಕತರ್ೆಯರಿಗೆ ನಾಳೆಯಿಂದ ಕಿಟ್ ವಿತರಿಸುವದಾಗಿ ಕಾಗವಾಡ ಸಿಡಿಪಿಓ ಸಂಜೀವಕುಮಾರ ಸದಲಗೆ ತಿಳಿಸಿದರು.

ಸಚಿವ ಶ್ರೀಮಂತ ಪಾಟೀಲರು ಮಾತನಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಸಚಿವೆ ಶಶಿಕಲಾ ಜೊಲ್ಲೆ ದಂಪತಿಗಳು ಕಳೇದ ಅನೇಕ ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾರಿಯರ್ಸ್ರಿಗೆ ಕೋವಿಡ್-19 ಪರೀಕ್ಷಾ ಕಿಟ್ ನೀಡಿ ವಾರಿಯರ್ಸ್ರಿಗೆ ಸಹಕಾರ ನೀಡಿದ್ದಾರೆ ಎಂದರು.

ಸಂಸದ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಆಶಾ ಮತ್ತು ಅಂಗನವಾಡಿ ಸುಮಾರು 4 ಸಾವಿರ ಕೊರೊನಾ ವಾರಿಯಸರ್್ರಿಗೆ ಕೋವಿಡ್-19 ಪರೀಕ್ಷಾ ಕಿಟ್ ನೀಡುತ್ತಿದ್ದೇವೆ. ಇದರಲ್ಲಿ ಡಿಜಿಟಲ್ ಆಕ್ಸಿಮಿಟರ್, ಥಮರ್ೊಮಿಟರ್, 5 ಮಾಸ್ಕ್ಗಳು, ಸ್ಯಾನಿಟೈಸರ್ ಒಳಗೊಂಡಿದೆಯೆಂದರು.

ಕೋವಿಡ್-19 ಪರೀಕ್ಷಾ ಕಿಟ್ ವಿತರಿಸುವ ಸಮಾರಂಭದಲ್ಲಿ ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ, ಎಇಓ ವೀರಣಗೌಡ ಎಗಣಗೌಡರ, ಸಿಡಿಪಿಓ ಸಂಜೀವಕುಮಾರ ಸದಲಗೆ, ಸಹಾಯಕ ಅಧಿಕಾರಿ ರಾಜಶ್ರೀ ಕಮತೆ, ಶಿರಗುಪ್ಪಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾಂಜಲಿ ಚೌಗುಲೆ, ಉಪಾಧ್ಯಕ್ಷ ಮನೋಜ ವಡ್ಡರ, ಪಿಡಿಓ ಶೈಲಶ್ರೀ ಬಜಂತ್ರಿ, ನ್ಯಾಯವಾದಿ ಅಭಯಕುಮಾರ ಅಕಿವಾಟೆ, ಭಮ್ಮಣ್ಣ ಚೌಗುಲೆ, ರಾಮಗೌಡ ಪಾಟೀಲ, ಕಾಗವಾಡದ ಸಮಾರಂಭದಲ್ಲಿ ರಮೇಶ ಚೌಗುಲೆ, ಪ್ರಕಾಶ ಪಾಟೀಲ, ಅರುಣ ಜೋಶಿ, ಕಾಕಾ ಪಾಟೀಲ, ವಿಠ್ಠಲ ಪವಾರ, ವಿನೋದ ದೇವಣೆ, ಸೇರಿದಂತೆ ಅನೇಕರು ಇದ್ದರು.


ಸುದ್ದಿ ಓದಿ