ಇಫ್ತಿಯಾರ್ ಆಹಾರ ಕಿಟ್ ವಿತರಣೆ
ಗುಳೇದಗುಡ್ಡ,ಮೆ.13 ಇಲ್ಲಿನ ಪುರಸಭೆ ಉಪಾಧ್ಯಕ್ಷೆ ಶರೀಫಾ ಮಂಗಳೂರ ಹಾಗೂ ಕುಟುಂಬ ವರ್ಗದವರು ಸೇರಿ ರಂಜಾನ್ ಹಬ್ಬದ ನಿಮಿತ್ಯವಾಗಿ ಇಫ್ತಿಯಾರ್ ಊಟದ ಪಾಕೀಟುಗಳನ್ನು ತಯಾರಿಸಿ ಪಟ್ಟಣದ ಮುಸ್ಲಿಂ ಬಡಜನತೆಯ ಮನೆಮನೆಗೆ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲಾ ್ಲಕಾಂಗ್ರಾಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮುಬಾರಕ ಮಂಗಳೂರ ಮಾತನಾಡಿ, ಕೊರೋನಾ ಮಹಾಮಾರಿಯ ಆಕ್ರಮಣದಿಂದ ಇಡೀ ಜನಜೀವವೇ ಅಸ್ತವ್ಯಸ್ತವಾಗಿದೆ. ಹಬ್ಬಹರಿದಿನಗಳು ಕಳೆಗುಂದಿವೆ. ಪವಿತ್ರ ರಂಜಾನ್ ಹಬ್ಬ ಕಳೆದ ಎರಡು ವರ್ಷಗಳಿಂದ ಸಂಭ್ರಮಿಸದಂತಾಗಿದೆ. ಮನೆಮನೆಯಲ್ಲಿಯೇ ಹಬ್ಬವನ್ನು ಸರಳವಾಗಿ ಆಚರಿಸುವ ದಿನ ಬಂದಿದೆ. ಕೋವಿಡ್ ಎರಡನೆಯ ಅಲೆಯಿಂದ ಸಂಕಷ್ಟದಲ್ಲಿರುವ ಮುಸ್ಲಿಂ ಬಾಂಧವರ ಮನೆಗಳಿಗೆ ತೆರಳಿ ಹಬ್ಬದ ಆಹಾರ ಕಿಟ್ ವಿತರಿಸಬೇಕಾಗಿದೆ. ಪ್ರತಿವರ್ಷ ನಾವು ನಮ್ಮ ಮನೆಯಲ್ಲಿಯೇ ಇಫ್ತಿಯಾರ ಕೂಟ ಮಾಡುತ್ತ್ತಿದೆವು. ಆದರೆ ಎರಡು ವರ್ಷಗಳಿಂದ ಮನೆಮನೆಗೆ ತೆರಳಿ ಆಹಾರ್ ಕಿಟ್ ವಿತರಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಶರೀಫಾ ಮಂಗಳೂರ, ಉಸ್ಮಾನಗಣಿ ಮಂಗಳೂರ, ಸಲೀಂ ಮೋಮಿನ್, ಮಶಾಕ್ ನಾಲತವಾಡ್, ದಶಗೀರ ಶಿರೂರ ಸೇರಿದಂತೆ ಇತರರು ಇದ್ದರು.