ಗುಳೇಗುಡ್ಡ

ಆಟೋ ಚಾಲಕರಿಗೆ ಧವಸಧಾನ್ಯ ಕಿಟ್ ವಿತರಣೆ

ಆಟೋ ಚಾಲಕರಿಗೆ ಧವಸಧಾನ್ಯ ಕಿಟ್ ವಿತರಣೆ
ಆಟೋ ಚಾಲಕರಿಗೆ ಹಾಗೂ ಪೆಂಡಾಲ ಕಾರ್ಮಿಕರಿಗೆ ದವಸಧಾನ್ಯದ ಕಿಟ್ ವಿತರಿಸಲಾಯಿತು.

ಗುಳೇದಗುಡ್ಡ 02: ಲಾಕ್‌ಡೌನ್ ಹಿನ್ನೆಲೆಯಲ್ಲಿ  ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಪಟ್ಟಣದ ನೂರು ಜನ ಅಟೋ ಚಾಲಕರು ಮತ್ತು 30 ಜನ ಪೆಂಡಾಲ ಕಾರ್ಮಿಕರಿಗೆ ಪಟ್ಟಣದ ಬಿಜೆಪಿ ಯುವ ಮೋರ್ಚಾದ ಆಶ್ರಯದಲ್ಲಿ ದವಸಧಾನ್ಯದ ಕಿಟ್‌ಗಳನ್ನು ಸೋಮವಾರ ವಿತರಿಸಲಾಯಿತು.  

ಯುವಮೋರ್ಚಾ ಅಧ್ಯಕ್ಷ ರಾಜು ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭುವನೇಶ ಪೂಜಾರ, ತಾಲೂಕಾ ಉಪಾಧ್ಯಕ್ಷ ಮುತ್ತು ಚಿಕ್ಕನರಗುಂದ, ಮಣಿಕಂಠ ಎಣ್ಣಿ, ಚೇತನ ಪಸಾರಿ, ವಿನೋದ ಗೌಡರ, ವಿನಾಯಕ ಕುಪ್ಪಸ್ತ, ಸಂತೋಷ ಕಲಾಲಬಂಡಿ, ಅಕ್ಷಯ ವರ್ಮಾ, ಸೋಮು ತಾಂಡೂರ, ವಿಜಯ ಬಂಕಾಪೂರ, ಶಿವಕುಮಾರ ಬಾದವಾಡಗಿ ಸೇರಿದಂತೆ ಇತರರು ಇದ್ದರು. 

 

ಸುದ್ದಿ ಓದಿ