ಹೊಳಗುಂದಿ ಗ್ರಾಮದ ಊರಮ್ಮದೇವಿ ದೇಗುಲದಲ್ಲಿ ಪ್ರವಚನ
ಹೂ.ಹಡಗಲಿ 07: ಪುರಾಣ ಪ್ರವಚನಗಳಿಂದ ಮಾನಸಿಕನೆಮ್ಮದಿ ನೀಡುತ್ತವೆ. ಆದ್ದರಿಂದ ಶಿವಶರಣರ ಜೀವನ ಚರಿತ್ರೆ ಜತೆ ಅವರ ಆಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ಹಿರೇಹಡಗಲಿ ಹಾಲಸ್ವಾಮಿ ಮಠದ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು ನುಡಿದರು. ತಾಲೂಕಿನ ಹೊಳಗುಂದಿ ಗ್ರಾಮದ ಊರಮ್ಮದೇವಿ ದೇಗುಲದಲ್ಲಿ ವಿಜಯದಶಮಿ ಹಬ್ಬದ ನವರಾತ್ರಿ ಆಚರಣೆ ಹಿನ್ನಲೆಯಲ್ಲಿ ಮರುಳಾರಾದ್ಯ ಶಿವಾಚಾರ್ಯ ಸ್ವಾಮಿಗಳ ಸಾನಿದ್ಯದಲ್ಲಿ ನಡೆಯುವ ಭಾನುವಾರ 4ನೇ ದಿನದ ದೇವಿಪುರಾಣ ಪ್ರವಚನದಲ್ಲಿ ಆಶೀರ್ವಾಚನ ನೀಡಿದ ಶ್ರೀಗಳು ಆಧುನಿಕ ಭರಾಟೆಯಲ್ಲಿ ಒತ್ತಡ ಬದುಕಿನಲ್ಲಿ ಶಾಂತಿ.ನೆಮ್ಮದಿ ಇಲ್ಲದಾಗ ಇಂತಪುರಾಣ ಪ್ರವಚನಗಳು ಯೋಗ ಜತೆಗೆ ಧಾರ್ಮಿಕ ಆಚರಣೆಗಳು ಸಾಮಾಜಿಕ ಸಾಮರಸ್ಯ.ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.
ಪುರಾಣ ಪ್ರವಚನಕಾರ ಸೋಗಿ ಗವಾಹಿ ವ್ಯೆ.ಪಲ್ಲಪ್ಪ.ಕ್ರಿಯಾ ಮೂರ್ತಿ ಹೆಚ.ಎಂ.ಮಲ್ಲಿಕಾರ್ಜುನ ಯ್ಯ. ಊರಮ್ಮ ದೇವಿ ದೇಗುಲ ಕಮಿಟಿ ಅದ್ಯಕ್ಷ ಎನ್.ಎಸ್.ಸುರೇಶ್. ಕಾರ್ಯ ದರ್ಶಿ ಚಾವಡಿ ಮಂಜುನಾಥ್. ಚನ್ನಪ್ಪ. ಎಜಿ.ವೀರನಗೌಡ.ಕೊಟ್ರೇಶ ಕೆ. ಹೆಚ್.ಈರ್ಪ ಇದ್ದರು. ಉಪನ್ಯಾಸ ಕ ಪೂಜಾರ ಬಸವರಾಜ.ಕು.ಎಸ್.ರಕ್ಷಿತ ಶಾನಭೋಗರ.ಯತಿರಾಜ ಕೆ.ಎಸ್. ತಬಲ ಎ.ಚಂದ್ರ್ಪ ಸಂಗೀತ ಸೇವೆ ಗಮನ ಸೆಳೆಯಿತು.