ಗುಳೇಗುಡ್ಡ

ಆಸ್ತಿಕರ ಪಾವತಿಗೆ ರಿಯಾಯತಿ

ಆಸ್ತಿಕರ ಪಾವತಿಗೆ ರಿಯಾಯತಿ

ಗುಳೇದಗುಡ್ಡ 4: ಪಟ್ಟಣದಲ್ಲಿ 2021-22 ನೇ ಸಾಲಿನ ಮನೆಗಳ ಆಸ್ತಿಕರ, ವಾಣಿಜ್ಯ ಕರ ಪುರಸಭೆಗೆ ಪಾವತಿಸಿ ರಿಯಾಯತಿಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮುಖ್ಯಾಧಿಕಾರಿ ಚಿದಾನಂದ ಮಠಪತಿ  ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, 2021-22 ನೇ ಸಾಲಿನ ಸ್ವಯಂ ಘೋóಷಿತ ಆಸ್ತಿ ತೆರಿಗೆಯನ್ನು ಏಪ್ರೀಲ್ ತಿಂಗಳಿಂದ  ಮನೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ಖಾಲಿ ಜಾಗೆಗಳಿಗೆ ತೆರಿಗೆಯನ್ನು ಪರಿಷ್ಕರಣೆ ಮಾಡಿದೆ. ಹಾಗಾಗಿ ಏಪ್ರಿಲ್ 30 ರೊಳಗೆ ಆಸ್ತಿಕರ, ಮನೆ ಕರ ಪಾವತಿಸಿದರೆ ಶೇ.5 ರಷ್ಟು ರಿಯಾಯತಿ ನೀಡಲಾಗುವುದು. ಮತ್ತು ಮೇ ಹಾಗೂ ಜೂನ್ ತಿಂಗಳಲ್ಲಿ ಆಸ್ತಿ ತೆರಿಗೆ ಭರಣಾ ಮಾಡಿದವರಿಗೆ ದಂಡ ಇಲ್ಲದೆ ಕರ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ. ಪಟ್ಟಣದ ಆಸ್ತಿ ಮಾಲಿಕರು ಬಾಕಿ ಇರುವ ನೀರಿನ ಕರ, ಆಸ್ತಿ ತೆರಿಗೆ, ಮಳಿಗೆ ಬಾಡಿಗೆ, ಲೈಸನ್ಸ್ ಫೀ ಮೊದಲಾದ ಕರಗಳನ್ನು ಪುರಸಭೆಗೆ ಸಂದಾಯ ಮಾಡಿ ರಿಯಾಯತಿಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮುಖ್ಯಾಧಿಕಾರಿ ಚಿದಾನಂದ ಮಠಪತಿ ತಿಳಿಸಿದ್ದಾರೆ.

ಸುದ್ದಿ ಓದಿ