ಶಿಗ್ಗಾವ್

ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ವಿತರಣೆ

ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ವಿತರಣೆ

ಶಿಗ್ಗಾವಿ 06:  ಪಟ್ಟಣದ ಪುರಸಭೆ ವ್ಯಾಪ್ತಿಯ  ದಿನಪತ್ರಿಕೆ ವಿತರಕರು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಲ್ಲಿಕಿರುಸಾಲ ಸೌಲಭ್ಯ ಪಡೆದುಕೊಳ್ಳುವಂತೆ ಪುರಸಭೆ ಅಧಿಕಾರಿ ಶೈಲಜಾ ಪಾಟೀಲ ಕರೆ ನೀಡಿದರು. 

ಪಟ್ಟಣದ ಪುರಸಭೆಯಲ್ಲಿ ವ್ಯಾಪಾರಿಗಳಿಗೆ ಮತ್ತು ದಿನಪತ್ರಿಕೆ ವಿತರಕರಿಗೆ  ಪುರಸಭೆ, ಕೌಶಲ್ಯಾಭಿವೃದ್ಧಿ ಉದ್ದಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಶ್ರಯದಲ್ಲಿ ದಿನಪತ್ರಿಕೆ ವಿತರಕರಿಗೆ ಆಯೋಜಿಸಿದ್ದ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ವಿತರಣೆ ಕುರಿತು ಮಾಹಿತಿಯನ್ನು ನೀಡಿದರು.  

ದಿನಪತ್ರಿಕೆ ವಿತರಕರು ಜತರಗೆ ಬೀದಿ ಬದಿ ವ್ಯಾಪಾರಿಗಳನ್ನು ಮುಖ್ಯವಾಹಿನಿಗೆ ತರುವ ಹಿನ್ನಲೆಯಲ್ಲಿಕೇಂದ್ರ ಸರಕಾರ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ತಂದಿದ್ದುಇದರ ಸದುಪಯೋಗ ಪಡಿಸಿಕೊಳ್ಳಬೇಕು ಅಲ್ಲದೇಆರ್ತೀಕವಾಗಿ ಸಬಲರಾಗಬೇಕು ಎಂದು ಉದ್ದೇಶವಾಗಿದೆ ಎಂದರು. 

ಪುರಸಭೆ ಅಧಿಕಾರಿ ಸಂತೋಷ ಪಾಟೀಲ, ತಾಲೂಕ ವಿತರಕ ಸಂಘದ ಅಧ್ಯಕ್ಷ ವೀರುಪಾಕ್ಷಪ್ಪ ನೀರಲಗಿ, ಉಪಾಧ್ಯಕ್ಷ ಸುದೀರ ಮೆಳ್ಳಾಗಟ್ಟಿ, ಕಾರ್ಯದರ್ಶಿ ಸುರೇಶ ಯಲಿಗಾರ, ವಿತರಕರಾದ ಎಂ.ವ್ಹಿ.ಗಾಡದ,  ಬಸವರಾಜ ಹೊನ್ನಣ್ಣವರ, ಬಸವರಾಜ ಹಡಪದ, ಮಂಜುನಾಥ ಕಮ್ಮಾರ, ವಿಶ್ವನಾಥ ಬಂಡಿವಡ್ಡರ, ದೇವರಾಜ ಸುಣಗಾರ, ಶಿವು ಕೋಟಗಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ