ದಿಂಡಿ ಉತ್ಸವ, ಪ್ರತಿಭಾ ಪುರಸ್ಕಾರ
ರಾಣಿಬೆನ್ನೂರ 21: ಇಲ್ಲಿನ ಬಸವನಗುಡಿ ನಗರದ ಕೋಟೆ ರಸ್ತೆಯ ವಿಠ್ಠಲ ರುಕುಮಾಯಿ ಮಂದಿರದ ಪಾಂಡುರಂಗ ದೇವಸ್ಥಾನದಲ್ಲಿ ವಿಠ್ಠಲ ರುಕುಮಾಯಿ ದಿಂಡಿ ಉತ್ಸವ ಸಮಿತಿ, ಭಾವಸಾರ ಕ್ಷತ್ರೀಯ ಸಮಾಜ, ಯುವಕ ಮಂಡಳಿ, ಭಜನಾ ಮಂಡಳಿ, ವಿಠ್ಠಲ ರುಕುಮಾಯಿ ಮಂದಿರ ಜೀರ್ಣೋದ್ದಾರ ಸಮಿತಿಯಿಂದ 46 ನೇ ವರ್ಷದ ದಿಂಡಿ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಶ್ರೀಪಾದ ಕುಲಕರ್ಣಿ ಅವರಿಂದ ಸಂತವಾಣಿ ಸಂಗೀತ ಕಾರ್ಯಕ್ರಮ, ನಂತರ ಕನ್ನಡ ಸರಿಗಮಪ 11 ರ ರನ್ನರ್ ಆಪ್ ಹಾಗೂ ಆಕಾಶವಾಣಿ ಕಲಾವಿದರ ತಂಡದಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ನಗರದ ಪ್ರಮುಖ ಬೀದಿಗಳಲ್ಲಿ ವಿಠ್ಠಲ ರುಕ್ಮಿಣಿ ದೇವರ ಮೆರವಣಿಗೆ ನಡೆಸಿದರು. ದೇವರಿಗೆ ಪೂಜೆ ನಂತರ ಭಕ್ತರಿಗೆ ಅನ್ನಸಂತರೆ್ಣ ನಡೆಯಿತು. ಕೀರ್ತನೆ ಹಾಗೂ ಭಜನೆಯೊಂದಿಗೆ ಸಂತ ಪೂಜೆ, ಪಂಡರಿ ಸಂಪ್ರದಾಯ ಭಜನೆ ಕಾರ್ಯಕ್ರಮಗಳು ನಡೆದವು.
ಸಾಗರದ ಶಿವಶಂಕರ ಡೊಯಿಜೊಡೆ, ಹೊಳಲು ದೋಂಡಿವಾ ಟಿಕಾರೆ, ಹುಬ್ಬಳ್ಳಿಯ ವೆಂಕಟೇಶ ಸರ್ವದೆ, ದಾವಣಗೆರೆ ಚಂದ್ರಕಾಂತ ವಾದೋನೆ ಅವರಿಂದ ಪ್ರವಚನ ಮತ್ತು ಕೀರ್ತನೆ ಕಾರ್ಯಕ್ರಮ ನಡೆಸಿಕೊಟ್ಟರು. ಹುಬ್ಬಳ್ಳಿಯ ಆಕಾಶವಾಣಿ ಕಲಾವಿದ ಮತ್ತು ಗೊಂದಳಿ ಕಲಾವಿದ ಗಣೇಶ ಓಂ ಶಿಂಧೆ ಭಾಗವಹಿಸಿದ್ದರು.
ಮೋಟೆಬೆನ್ನೂರು, ಗುತ್ತಲ, ಬಂಕಾಪುರ, ಸವಣೂರು, ಹೂವಿನಹಡಗಲಿ, ಹೊಳಲು, ದಾವಣಗೆರೆ, ಹರಿಹರ, ಹಾವೇರಿ, ಹಾನಗಲ್, ಹುಬ್ಬಳ್ಳಿ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಸಿದರು.
ಆಷಾಢ ಶುದ್ಧ ಏಕಾದಶಿಯ ಅಂಗವಾಗಿ ಏರಿ್ಡಸಿದ ಭಾವಸಾರ ಕ್ಷತ್ರೀಯ ಸಮಾಜದ ದಿಂಡಿ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಉದ್ಘಾಟಿಸಿ ಮಾತನಾಡಿದರು.
ಸಿಪಿಐ ಶಂಕರ್ ಎಸ್.ಕೆ, ಶ್ರೀಪಾದ ಕುಲಕರ್ಣಿ, ಪ್ರವೀಣ ಕೋಪರ್ಡೆ, ಡಾ.ಐಶ್ವರ್ಯ ಮಾಳದಕರ, ಜಗದೀಶ ಗುಜ್ಜರ, ಏಳುಕೋಟೆ ಜಿಂಗಾಡೆ, ಶ್ರೀರಾಮ ಕಾಸರ, ಪರಶುರಾಮ ಸೋಲಾಖೆ, ಉಪಾಧ್ಯಕ್ಷ ಜಗದೀಶ ಪಾಸ್ತೆ, ಮಾರುತಿ ಮಾಳದಕರ, ಕಿರಣ ನವಲೆ, ಕಿರಣ ಜಿಂಗಾಡೆ ಉಪಸ್ಥಿತರಿದ್ದರು.