ಡಿಜಿಟಲ್ ಕಾಂಗ್ರೆಸ್ ಸದಸ್ಯತ್ವ ಕಾರ್ಯಕ್ರಮ
ಲೋಕದರ್ಶನ ವರದಿ
ಬ್ಯಾಡಗಿ 26: ಹಾವೇರಿ ಜಿಲ್ಲೆ ರಾಜ್ಯದಲ್ಲಿಯೇ ಪಕ್ಕಾ ಕಾಂಗ್ರೆಸ್ ಜಿಲ್ಲೆ. ಇಲ್ಲಿ ಒಳ ಜಗಳದಿಂದ ಕಾಂಗ್ರೆಸ್ ಪಕ್ಷ ಹಾಳಾಗಲು ಕಾರಣವಾಗಿದೆ. ಅಲ್ಲದೇ ಕಾಂಗ್ರೆಸ್ನವರಿಂದಲೇ ಪಕ್ಷ ಸೋಲುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಜಯಮಾಲಾ ಕಳವಳ ವ್ಯಕ್ತಪಡಿಸಿದರು.
ಬ್ಯಾಡಗಿ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಏರಿ್ಡಸಿದ್ದ ಡಿಜಿಟಲ್ ಕಾಂಗ್ರೆಸ್ ಸದಸ್ಯತ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ಯಾಡಗಿಗೆ ಬಸವರಾಜ ಶಿವಣ್ಣನವರ ಹಾಗೂ ಎಸ್.ಆರ್.ಪಾಟೀಲ ಎರಡು ಕಣ್ಣಿದ್ದಂತೆ ಒಂದು ಕಣ್ಣಿಗೆ ನೋವಾದರು ಸಹಿಸಲಾಗದು. ಎಲ್ಲರೂ ಒಗ್ಗೂಡಿಕೊಂಡು 2023ರ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ನಮ್ಮ ಸದಸ್ಯರನ್ನು ಆಯ್ಕೆಮಾಡಿ ವಿಧಾನಸಭೆಗೆ ಕಳಿಸುವ ಮಹತ್ತರ ಜರಿವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಲ್ಲರೂ ಒಂದಾಗಿ ನಡೆದರೆ ಜಿಲ್ಲೆಯಲ್ಲಿ ಆರು ಸಿಟು ನಮ್ಮವೆ. ಬಿಜೆಪಿಯವರ ಟಾರ್ಗೆಟ್ ಬಡವರ ಮೇಲೆ ಅವರಿಗೆ ಶ್ರಿಮಂತರು ಅಂದ್ರೆ ಇಷ್ಟ. ಬೇಟಿ ಬಚಾವೋ ಬೇಟಿ ಪಡಾವೋ ಎಲ್ಲಿ ಹೊಯಿತು ಎಂದು ಪ್ರಶ್ನಿಸಿದರು.
ಈ ದೇಶಕ್ಕೆ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಅಂತಾ ಬುದ್ದಿಗೆಡಿಗಳು ಕೇಳುತ್ತಿದ್ದಾರೆ. ಕಾಂಗ್ರೇಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಪಕ್ಷ. ಶಿಕ್ಷಣ, ಆಸ್ಪತ್ರೆ ರಸ್ತೆ ಸೇರಿದಂತೆ 130 ವರ್ಷಗಳ ಕಾಲ ಭಾರತವನ್ನು ಸರ್ವಧರ್ಮಗಳ ಬಿಡಾಗಿ ಕಟ್ಟಿದ ಪಕ್ಷ ನಮ್ಮದು. ಸುಳ್ಳು ಯಾವತ್ತಿಗೂ ಸುಳ್ಳೆ, ಸತ್ಯ ಯಾವತ್ತಿಗೂ ಸತ್ಯ. ಪ್ರತಿಯೊಬ್ಬರ ಹೃದಯದಲ್ಲಿ ಪ್ರತಿ ಮನೆಗಳಲ್ಲಿ ಕಾಂಗ್ರೇಸ್ ಪಕ್ಷ ಇದೆ. ಇದು ನಾಯಕರಿಗೆ ತಿಳಿಯುತ್ತಿಲ್ಲ. ನಾಯಕರು ಯಾವಾಗ ಪ್ರತಿ ಮನೆಗೆ ಹೋಗಿ ಅವರ ಕಷ್ಟಗಳನ್ನು ಕೇಳುತ್ತಾರೆ ಆಗ ಚುನಾವಣೆ ಸಂದರ್ಭದಲ್ಲಿ ಸುಲಬವಾಗಿ ಗೆಲುವು ಸಾದಿಸಲು ಸಾಧ್ಯ. ನಿಮ್ಮಬಳಿ ಕಾಂಗ್ರೆಸ್ನ ಋಣ ಇಲ್ಲವೇ....? ಅಧಿಕಾರವನ್ನು ಅನುಭವಿಸಿದವರು ಸದಸ್ಯತ್ವ ಮಾಡಿಸಿ. ಪಕ್ಷ ಸತ್ತರೆ ನಾವು ಸತ್ತಂತೆ..... ಪಕ್ಷವನ್ನು ಮುಜುಗುರಕ್ಕೆ ತರಬೇಡಿ. ಪಕ್ಷಕ್ಕೆ ನಮ್ಮ ಅವಶ್ಯಕತೆ ಇಲ್ಲ ನಮಗೆ ಪಕ್ಷದ ಅವಶ್ಯಕತೆ ಇದೆ. ನಾಯಕರು ಒಂದೆ ಮನಸ್ಸಿನಿಂದ ಕೇಲಸ ಮಾಡಿದರೆ 2023ರಲ್ಲಿ ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ಗೆದ್ದೆಗೆಲ್ಲುತ್ತದೆ ಎಂದರು.
ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಹುಟ್ಟಿಕೊಂಡ ಪಕ್ಷ ನಮ್ಮದು. ಬ್ರಿಟಿಷರನ್ನು ಹೊಡೆದೊಡಿಸಿ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ನಮ್ಮದು. ಭ್ರಷ್ಟ ಹಾಗೂ ಜ್ಯಾತಿವಾದಿಗಳ ಬಿಜೆಪಿಯನ್ನು ಹಿಮ್ಮೆಟ್ಟಿಸುಯ ಕಾರ್ಯವನ್ನು ಮಾಡಲು ಕಾರ್ಯಕರ್ತರ ಅಗತ್ಯವಿದೆ. ಭಾವನಾತ್ಮಕ ವಿಚಾರದಿಂದ ಬದುಕು ಕಟ್ಟಿಕೊಂಡಂತ ದೇಶ ನಮ್ಮದು. ಜಾತಿವಾದಿಗಳಿಂದ ದೇಶವನ್ನು ರಕ್ಷಿಸಬೇಕಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ಇದ್ದಾರೆ. ಅವರನ್ನು ಮುಟ್ಟುವಂತ ಕೇಲಸವಾಗಬೇಕು. ದುಷ್ಠ ಶಕ್ತಿಗಳನ್ನು ಹತ್ತಿಕ್ಕಲು ಮುನ್ನುಗ್ಗಬೇಕು. ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಹಿಡಿಯಬೇಕೆನ್ನುವ ಹಂಬಲದಲಿಲ್ಲ. ಜನರ ಕಷ್ಟಗಳನ್ನು ಬಗೆಹರಿಸುವ ಕಾರ್ಯ ನಮ್ಮದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ವಿಕ್ಷಕರಾದ ಜಯಸಿಂಹ, ಮುಖಂಡರಾದ ಎಸ್.ಆರ್.ಪಾಟೀಲ, ಬೀರ್ಪ ಬಣಕಾರ, ಮಲ್ಲಿಕಾರ್ಜುನ ಕರಲಿಂಗಣ್ಣನವರ, ದಾನಪ್ಪ ಚೂರಿ, ದಾನಪ್ಪ ತೋಟದ, ಶಂಕ್ರಗೌಡ್ರ ಪಾಟೀಲ, ದುರ್ಗೇಶ ಗೊಣೇಮ್ಮನವರ, ಶಂಕರ ಕುಸಗೂರ, ಮಂಜುನಾ ಬೋವಿ ಸೇರಿದಂತೆ ಇನ್ನಿತರರು ಇದ್ದರು.