ಮಹಿಳೆಯರಿಗೆ ಸಕ್ಕರೆ ಕಾಯಿಲೆಯ ಕುರಿತು ಜಾಗೃತಿ ಕಾರ್ಯಕ್ರಮ
ಇಂಡಿ: ಧೂಮಪಾನ ಮತ್ತು ಮದ್ಯಪಾನ ಸೇವನೆ, ಅನುವಂಶೀಯತೆ, ಅನಾರೋಗ್ಯಕರ ಆಹಾರ ಸೇವನೆ, ಅತಿಯಾದ ಉಪ್ಪುಬಳಕೆ, ಎಣ್ಣೆಯಿಂದ ಮಾಡಿದ ಖಾದ್ಯಗಳ ಸೇವನೆ ಮಧುಮೇಹಕ್ಕೆ ಕಾರಣ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಹೇಳಿದರು.
ಶನಿವಾರ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ಧರ್ಮಸ್ಥಳ ಸಂಘದ ಮಹಿಳೆಯರಿಗೆ ಸಕ್ಕರೆ ಕಾಯಿಲೆ (ಡಯಾಬೆಟಿಕ್) ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಆಧುನಿಕ ಜೀವನ ಶೈಲಿಯ ಭರಾಟೆಯಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ ಕೆಲವೊಮ್ಮೆ ನಮ್ಮ ದೇಹದಲ್ಲಿರುವ ಮೆದೋಜೀರಕ ಗ್ರಂಥಿ ಸಾಕಷ್ಟು ಇನಸುಲಿನ್ ತಯಾರಿಸುವದಿಲ.್ಲ ತಯಾರು ಮಾಡುವ ಶಕ್ತಿ ಕಡಿಮೆ ಆಗುತ್ತದೆ. ಹೀಗಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗುತ್ತದೆ ಎಂದರು.
ವಂಶ ಪಾರಂಪರಿಕವಾಗಿ, ಅಸಮತೋಲನ ಆಹಾರ ಸೇವನೆ ಮಾಡುವದರಿಂದ ಅತೀಯಾದ ತೂಕ, ದೈಹಿಕ ಚಟುವಟಿಕೆಗಳು ಕಡಿಮೆಯಾದಾಗ ಅತೀಯಾದ ಮಾನಸಿಕ ಒತ್ತಡ ಈ ಕಾರಣಗಳಿಂದ ಸಕ್ಕರೆ ಕಾಯಿಲೆ ಬರುವ ಸಂಭವವಿರುತ್ತದೆ.
ಹಸಿವು, ಪದೇ ಪದೇ ಮೂತ್ರ ವಿಸರ್ಜನೆ, ತಡವಾಗಿ ಮಾಯುವ ಗಾಯಗಳು, ಕಣ್ಣಿನ ದೃಷ್ಟಿ ಕಡಿಯಾಗುವದು, ದೇಹದ ತೂಕ ಇಳಿಕೆ, ಆಯಾಸ ಆಗುವದು, ಕೈ ಕಾಲುಗಳಲ್ಲಿ ವಿಪರೀತ ದೀರ್ಘಕಾಲದ ಉರಿ ಇವೆಲ್ಲ ಸಕ್ಕರೆ ಕಾಯಿಲೆಯ ಲಕ್ಷಣಗಳು.
ಸಕ್ಕರೆ ಕಾಯಿಲೆಗೆ ಮನೆಯೇ ಮದ್ದು, ಪ್ರತಿ ದಿನ ವ್ಯಾಯಾಮ, ಅಭ್ಯಾಸ ಮಾಡಿಕೊಳ್ಳುವದು, ಕೊಬ್ಬು ಮಿಶ್ರಿತ ಆಹಾರಕ್ಕೆ ವಿದಾಯ, ರಕ್ತದ ಒತ್ತಡ ನಿಯಂತ್ರಣದಲ್ಲಿಟ್ಟುಕೊಳ್ಳುವದು, ಮದ್ಯಪಾನ ಮತ್ತು ತಂಬಾಕನ್ನು ದೂರವಿಡುವದು, ನಿಯಮಿತವಾಗಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಎಲ್ಲ ಮುಂಜಾಗೃತ ಕ್ರಮಗಳನ್ನು ಅನುಸರಿಸಿದರೆ ಸಕ್ಕರೆ ಕಾಯಿಲೆಯಿಂದ ದೂರವಿರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಸಮನ್ವಯ ಅಧಿಕಾರಿ ಶ್ರೀಮತಿ ಜಯಶ್ರೀ, ಸಂಘದ ಮೇಲ್ವೀಚಾರಕಿ ಶ್ರೀಮತಿ ಗೀತಾ ಹಾಗೂ ಮಹಿಳೆಯರು ಉಪಸ್ಥಿತರಿದ್ದರು.