ರಾಣೆಬೆನ್ನೂರ

ಧಾರವಾಡ ಕೆಸಿಸಿ ಬ್ಯಾಂಕ್ ಚುನಾವಣೆ: ತಾಲೂಕಿನಿಂದ ಕಾಂಗ್ರೆಸ್ ಘೋಷಿತ ಮಳ್ಳಪ್ಪ ನಿಂಗಜ್ಜನವರ ನಾಮಪತ್ರ ಸಲ್ಲಿಕೆ

ಧಾರವಾಡ ಕೆಸಿಸಿ ಬ್ಯಾಂಕ್ ಚುನಾವಣೆ: ತಾಲೂಕಿನಿಂದ ಕಾಂಗ್ರೆಸ್ ಘೋಷಿತ ಮಳ್ಳಪ್ಪ ನಿಂಗಜ್ಜನವರ ನಾಮಪತ್ರ ಸಲ್ಲಿಕೆ

ರಾಣೇಬೆನ್ನೂರು 22:  ಪ್ರತಿಷ್ಠೆಯ ಕಣವಾಗಿರುವ ಧಾರವಾಡ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್, ಆಡಳಿತ ಮಂಡಳಿಯ  ನಿರ್ದೇಶಕರ ಮಹಾ ಚುನಾವಣೆಯು ಸೆ. 30,2023 ರಂದು ಧಾರವಾಡದಲ್ಲಿ ನಡೆಯಲಿದೆ. ನಡೆಯಲಿರುವ ಚುನಾವಣೆಯು ಒಟ್ಟು ಐದು ವರ್ಷದ ಅವಧಿಯದಾಗಿದ್ದು, ಚುನಾವಣೆ  ಮುನ್ನ ನಡೆಯುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು,   ಆರಂಭದ ದಿನವಾದ ಇಂದು ರಾಣೇಬೆನ್ನೂರು ತಾಲೂಕಿನ ಹಿರೇಮಾಗನೂರು ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ, ಹಿರಿಯ ಸಹಕಾರಿಗಳಾದ ಮಳ್ಳಪ್ಪ ಗೂರಪ್ಪ.ನಿಂಗಜ್ಜನವರ ಅವರು ತಾಲೂಕಿನ 40ಕ್ಕೂ ಹೆಚ್ಚು ಸಹಕಾರಿ ಬಂಧುಗಳೊಂದಿಗೆ ಕೇಂದ್ರ ಸ್ಥಾನಕ್ಕೆ ತೆರಳಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.ಹಿರಿಯ ಸಹಕಾರಿಗಳಾದ ಮಂಜನಗೌಡ ಪಾಟೀಲ್, ರಾಜಣ್ಣ ಚಳಗೇರಿ, ಕಾಂತೇಶ್ ಹಿತ್ತಲಮನಿ, ವೆಂಕಟೇಶ್ ಬಣಕಾರ್, ಕೃಷ್ಣಪ್ಪ ಕಂಬಳಿ,ಕುಶಾಲಪ್ಪ, ಜಗದೀಶ್ ಗೌಡ ಪಾಟೀಲ್  ನೋಟರಿ ಏಕಾಂತ ಮುದಿ ಗೌಡ್ರು ಹನುಮಂತಪ್ಪ ಬ್ಯಾಲದಹಳ್ಳಿ, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.   

 ನಾಮಪತ್ರ ಸಲ್ಲಿಸಲು ತೆರಳುವ ಮುನ್ನ ಇಲ್ಲಿನ ವಾಗಿಶ ನಗರದ ಮಾಜಿ ಸಭಾಪತಿ, ಕೆ. ಬಿ.ಕೋಳಿವಾಡ ಅವರ ಗೃಹ ಸಭಾದಲ್ಲಿ ಸಭೆ ಸೇರಿದ ಸಹಕಾರಿ ಬಂಧುಗಳು, 30 ರಂದು ನಡೆಯುವ ಚುನಾವಣೆಯನ್ನು ಅತ್ಯಂತ ಸಮರ್ಥವಾಗಿ ಎದುರಿಸುವ ಕುರಿತಂತೆ ಕಾಂಗ್ರೆಸ್ ದುರಿಣರು, ಸುಧೀರ್ಘವಾಗಿ  ಸಮಗ್ರವಾಗಿ ಸಮಾಲೋಚಿಸಿದರು.  ಮಾತನಾಡಿದ ಶಾಸಕ  ಪ್ರಕಾಶ್ ಕೋಳಿವಾಡ  ಅವರು, ಕಾಂಗ್ರೆಸ್ ಪಕ್ಷಕ್ಕೆ  ಸಮಾಜದಲ್ಲಿ ನಾಡಿನ ಜನರಲ್ಲಿ ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸಹಕಾರಿ ಬಂಧುಗಳಲ್ಲಿ ಅತ್ಯಂತ ಅಭಿಮಾನ, ಪ್ರೀತಿ ವಿಶ್ವಾಸ ಇದೆ. ಗ್ರಾಮೀಣ ಜನತೆ ಇತಿಹಾಸದಿಂದಲೂ ಕಾಂಗ್ರೆಸ್ ಪಕ್ಷದ ಬಗ್ಗೆ ಎಂದೆಂದಿಗೂ ನಂಬಿಕೆ ಹೊಂದಿದ್ದಾರೆ ಜನರು ಎಂದಿಗೂ ಕಾಂಗ್ರೆಸ್ ಕೈ ಬಿಡುವುದಿಲ್ಲ ಹೀಗಾಗಿ ಕೆಸಿಸಿ ಬ್ಯಾಂಕಿನ ಚುನಾವಣೆ, ಭವಿಷ್ಯದಲ್ಲಿ ಬರುವ ಎಲ್ಲ ಹಂತದ ಚುನಾವಣೆಗಳು ದಿಕ್ಸೂಚಿಯಾಗಿವೆ. ಪಕ್ಷದ ಪರಂಪರೆಯಂತೆ ಎಲ್ಲರೂ ನುಡಿದಂತೆ ನಡೆಯಬೇಕು ನಡೆದು ತೋರಿಸಬೇಕು, ಗೆಲುವಿನ ನಂತರ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತಿಸಬೇಕು, ಮತದಾರರ ಋಣವನ್ನು ತೀರಿಸಲು ಮುಂದಾಗಬೇಕು ಅದುವೇ ನಾವು ಜನರಿಗೆ ನೀಡಿದ ಭರವಸೆ  ಮತ್ತು ಭದ್ರತೆ ಎನ್ನುವುದನ್ನು ಪ್ರತಿಯೊಬ್ಬರೂ ಸಹಕಾರಿಗಳು ಅರ್ಥಮಾಡಿಕೊಂಡು ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಮುಂದಾಗಬೇಕು ಎಂದು ಪಕ್ಷದ ಹಿರಿಯರಿಗೆ ತಾಲೂಕಿನ ಸಹಕಾರಿ ಬಂಧುಗಳಿಗೆ ಕರೆ ನೀಡಿದರು. ತಾಲೂಕಿನ 40ಕ್ಕೂ ಹೆಚ್ಚು ಸೊಸೈಟಿಯ ಸಹಕಾರಿ ಬಂಧುಗಳು, ಸಂಘದಸದಸ್ಯರು ಉಪಸ್ಥಿತರಿದ್ದು ಯಾವುದೇ ವಿವಾದವಿಲ್ಲದೆ ಕಾಂಗ್ರೆಸ್ ಘೋಷಿತ ಅಭ್ಯರ್ಥಿಯಾದ ಮಳ್ಳಪ್ಪ ಗೊರಪ್ಪ ನಿಂಗಜ್ಜನವರ ಅವರನ್ನು ಬೆಂಬಲಿಸಿ ಗೆಲುವಿಗಾಗಿ ಶುಭ ಹಾರೈಸಿದರು 

ಸುದ್ದಿ ಓದಿ