ಅದ್ದೂರಿಯಾಗಿ ಜರುಗಿದ ತಪೋ ಮಂದಿರದ ಧರ್ಮ ಜಾಗೃತಿ ಮೆರವಣಿಗೆ
ರಾಣೇಬೆನ್ನೂರು 17: ನಗರದ ಮೇಡ್ಲೆರಿ ರಸ್ತೆ, ವಿಜಯನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಶಿವಾನಂದ ತಪೋಮಂದಿರ ಲೋಕಾರೆ್ಣ ಸಮಾರಂಭವು ನ. 16ರಂದು ನಡೆಯಲಿದೆ. ಈ ನಿಮಿತ್ತವಾಗಿ ಬುಧವಾರ ಸಂಜೆ ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದಿಂದ, ಮೆರಣಿಗೆ ಹೊರಟು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಜೆ ವಿಜಯನಗರ ಬಡಾವಣೆಯಲ್ಲಿರುವ, ನೂತನ ತಪೋವನ ಮಂದಿರದ ಆವರಣದಲ್ಲಿ ಸಾಂಗತ್ಯಗೊಂಡಿತು. ಭಾರಿ ಜನ ಸಮುದಾಯದೊಂದಿಗೆ ಹೊರಟ ನೆರವಣಿಗೆಯಲ್ಲಿ ಹರ ಗುರು ಚರಮೂರ್ತಿಗಳು, ವಿವಿಧ ಮಠ ಪೀಠಗಳ ಶಿವಾಚಾರ್ಯರು, ಡೊಳ್ಳು ಭಜನೆ, ವೀರಗಾಸೆ, ಸಮಾಳ ಮೇಳ, ಕೋಲಾಟ, ಮೋಜಿನ ಗೊಂಬೆ, ಮತ್ತಿತರೆ ಜನಪದ ಕಲಾ ತಂಡಗಳ ಜೊತೆಗೆ, ನೂರಾರು, ಗ್ವಾರ್ಪಗಳವರು, ಜೋಗಮ್ಮನವರು, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ, ನಾಗರಿಕರು ವಿಶೇಷ ಮೆರವ ನೀಡಿದ್ದರು.ದಿಂಡದಹಳ್ಳಿ ಪಂಚಮಠಾಧ್ಯಕ್ಷ ಷ. ಬ್ರ. ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಸಂಜೆ ಧರ್ಮ ಜಾಗೃತಿ ಸಭೆ ನಡೆಯಿತು. ನಾಡಿನ ಸಾವಿರಾರು ನಾಗರಿಕರು, ಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆಯ ಮುಂಚೂಣಿಯಲ್ಲಿ ಮಾಜಿ ಶಾಸಕ ಅರುಣಕುಮಾರ್ ಪೂಜಾರ, ಶೇಖಣ್ಣ ಹೊಸಗೌಡ್ರ ಪವನ್ ಕುಮಾರ್ ಮಲ್ಲಾಡದ, ಸಿದ್ದಣ್ಣ ಚಿಕ್ಕಬಿದರಿ, ಗಂಗಾಧರ ಕರ್ಜಿಗಿಮಠ, ಮೃತ್ಯುಂಜಯ ಕರ್ಜಗಿಮಠ, ಬಸವರಾಜ ಚಳಗೇರಿ, ಬಸವರಾಜ ಹುಲ್ಲತ್ತಿ, ಪರಮೇಶ್ವರಯ್ಯ ಹಿರೇಮಠ, ಸೇರಿದಂತೆ ಮತ್ತಿತರ ಗಣ್ಯರು, ರಾಜಕೀಯ ನಾಯಕರು, ಸ್ಥಳೀಯ ಸಂಘ, ಮುಖಂಡರು ತಪೋ ಮಂದಿರದ ನೂರಾರು ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.