ಬನ್ನಿ ಮಹಾಕಾಳಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು
ರಾಣೇಬೆನ್ನೂರು 24: ಅಯೋಧ್ಯೆಯಲ್ಲಿ, ರಾಮ ಮಂದಿರದಲ್ಲಿ,ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೊಂಡ, ನಿಮಿತ್ತವಾಗಿ, ಇಲ್ಲಿನ ಮಹಾವೀರ ರಸ್ತೆಯ, ಶ್ರೀ ಬನ್ನಿ ಮಹಾಂಕಾಳಿ ದೇವಿಯ ದೇವಾಲಯದಲ್ಲಿ, ನೂರಾರು ಸುಮಂಗಲಿಯರು, , ಅತ್ಯಂತ ಭಕ್ತಿ ಭಾವದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಬಾಲ ಮಕ್ಕಳನ್ನು, (ಚೈತನ್, ಹೇಮಂತ್ಸಚಿನ್ ಅನುಷಾ ಭೂತೆ ಸಂಗಡಿಗರು.) ಬಾಲ ರಾಮ, ಸೀತಾ ಲಕ್ಷ್ಮಣ, ವೇಷ ಧರಿಸಿ, ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಸಾರ್ವಜನಿಕವಾಗಿ ಪ್ರಸಾದ ವಿತರಿಸಲಾಯಿತು. ಮಹಾಪೂಜಾ ಕಾರ್ಯಕ್ರಮದಲ್ಲಿ ಎನ್.ಎನ್. ಭೂತೆ, ಲಕ್ಷ್ಮೀಬಾಯಿ ಭೂತೆ, ನಾಗರಾಜ್ ಅರ್ಕಾಚಾರಿ, ಮೋಹನ ಧಾವಂಡೆ, ಅರ್ಜುನ್ ಭೂತೆ, ನಂದಿತಾ ಬಣಗಾರ್, ಸುನಿಲ್ ಭೂತೆ, ನಂದಿತಾ ಬಣಗಾರ್, ರೇಖಾ ಮೆಹರವಾಡೆ, ಶಂಕರ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.