ಕ್ಷೇತ್ರದಿಂದ ಅಯೋದ್ಯೆಗೆ ಹೋರಟ ಭಕ್ತರನ್ನು ಬೀಳ್ಕೊಟ್ಟ: ಬೊಮ್ಮಾಯಿ
ಶಿಗ್ಗಾವಿ 25: ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದಿಂದ ಗದಗ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ಹೊರಟ ಶಿಗ್ಗಾಂವ ಮಂಡಲದ ರಾಮ ಭಕ್ತರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ರಾಮ ಮಂದಿರ ದರ್ಶನ ಅಭಿಯಾನದ ಪದಾಧಿಕಾರಿಗಳು ಬೀಳ್ಕೊಟ್ಟರು. ಶಿವಾನಂದ ಮ್ಯಾಗೇರಿ, ಬಸವನಗೌಡ ಮೇಲಿನಮನಿ, ಬಸವರಾಜ ನಾರಾಯಣಪೂರ, ರೇಣುಕನಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.