ಶಿಗ್ಗಾವಿ-ಸವಣೂರ ಕ್ಷೇತ್ರವನ್ನು ಅಭಿವೃದ್ಧಿ ಕೊಂಡೊಯುತ್ತಿರುವ ಸಚಿವ ಬೊಮ್ಮಾಯಿ
ಶಿಗ್ಗಾವಿ 29: ಹಿಂದೂಳಿದ ಕ್ಷೇತ್ರವಾಗಿದ್ದ ಶಿಗ್ಗಾವಿ-ಸವಣೂರ ಕ್ಷೇತ್ರವನ್ನು ಅಭಿವೃದ್ದಿ ಪತದತ್ತ ಕೊಂಡೊಯುತ್ತಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿಯೇ ಮಾದರಿಯಾಗಿದ್ದಾರೆ ಎಂದು ಭಾಜಪ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಗುರುವಾರ ಪಟ್ಟಣದ ಸವಣೂರ ರಸ್ತೆಯಲ್ಲಿ ಶಾಸಕರ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದ ವತಿಯಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹುಟ್ಟು ಹಬ್ಬದ ಅಂಗವಾಗಿ ಕೊರೊನಾ ವಾರಿಯರ್ಸ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಬೊಮ್ಮಾಯಿವಯರು ತಾಲೂಕಿನಲ್ಲಿ ಎಲ್ಲರ ವಿಶ್ವಾಸ ಗಳಿಸಿದವರು, ಅವರು ಎಲ್ಲ ರಂಗಗಳಲ್ಲಿ ತಾಲೂಕನ್ನು ಅಭಿವೃದ್ದಿ ಸಾಗಿಸುತ್ತಿದ್ದು ಜಿಲ್ಲೆಯಲ್ಲಿ ನಮ್ಮ ತಾಲೂಕನ್ನು ಮಾದರಿ ತಾಲೂಕನ್ನಾಗಿಸುವ ಗುರಿಯನ್ನು ಹೊಂದಿದ್ದರೆ ಅವರ ಎಲ್ಲ ಯೋಜನೆಗಳು ಜನಪರವಾಗಿರುತ್ತವೆ ಎಂದರು.
ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಭಾಜಪ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ನರಹರಿ ಕಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ತಾಲೂಕಿನ ಸುಮಾರು 200 ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ದೇವಣ್ಣ ಚಾಕಲಬ್ಬಿ, ಕೊಟ್ರೇಶ ಮಾಸ್ತರ ಬೆಳಗಲಿ. ಫಕ್ಕಿರೇಶ ಕೊಂಡಾಯಿ, ಶರೀಫಸಾಬ ನಧಾಫ್, ಬಸವರಾಜ ನಾರಾಯಣಪೂರ, ರೇಣಕನಗೌಡ ಪಾಟೀಲ್, ಉಮೇಶ ಅಂಗಡಿ, ಪರಶುರಾಮ ಸೊನ್ನದ, ಸುಭಾಷ ಚೌವಾಣ, ಫಕ್ಕಿರಪ್ಪ ಕುಂದುರ, ಕರೆಪ್ಪ ಕಟ್ಟಿಮನಿ, ರಾಜಣ್ಣ ಗಂಜಿಗಟ್ಟಿ, ಶೋಭಾ ಗಂಜಿಗಟ್ಟಿ, ವಿಜಯಲಕ್ಷ್ಮೀ ಮುಂದಿನಮನಿ, ರಮೇಶ ವನಹಳ್ಳಿ, ಯಲ್ಲಪ್ಪ ನರಗುಂದ, ಶಿವರಾಜ ರಾಯಣ್ಣನವರ, ಕಾಶಿನಾಥ ಕಳ್ಳಿಮನಿ, ವಿನಯ ಮುಂಡಗೋಡ, ಸತೀಷ ಚೋಟಪ್ಪನವರ, ಉಷಾ ಬಿಳೆಕುದರಿ, ಸಂಗೀತಾ ವಾಲ್ಮೀಕಿ, ಶರೀಫ ಮಾಕಾಪೂರ, ಮಲ್ಲಿಕಾರ್ಜನ ಹಡಪದ, ಚೇತನ ಕಲಾಲ್ ಸೇರಿದಂತೆ ಭಾಜಪ ಮುಖಂಡರು ಕಾರ್ಯಕರ್ತರು ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದ ಸರ್ವ ಸದಸ್ಯರು ಹಾಗೂ ಆಶಾ ಕಾರ್ಯಕರ್ತರು ಇದ್ದರು.