ಸಿಂಧಗಿ

ಬಿಜೆಪಿಯಿಂದಲೇ ಮುಸ್ಲಿಂಮರ ಅಭಿವೃದ್ಧಿ: ಪಠಾಣ

ಬಿಜೆಪಿಯಿಂದಲೇ ಮುಸ್ಲಿಂಮರ ಅಭಿವೃದ್ಧಿ: ಪಠಾಣ
ಸಿಂದಗಿ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಸಿಂದಗಿ19: ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯುರ​‍್ಪ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂಮ ಅವರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಮಾಡಿದ್ದಾರೆ. ಆದ್ದರಿಂದ ಕ್ಷೇತ್ರದ ಮುಸ್ಲಿಂಮರು ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ರಮೇಶ ಭೂಸನೂರ ಅವರನ್ನು ಗೆಲ್ಲಿಸಿ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ ಹೇಳಿದರು. 

ಸೋಮವಾರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದವರು ಅಲ್ಪಸಂಖ್ಯಾತ ಮುಸ್ಲಿಂಮರನ್ನು ಕೇವಲ ಓಟ ಬ್ಯಾಂಕ್ ಮಾಡಿಕಂಡಿದ್ದಾರೆ. ಅವರಿಗಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಮುಖ್ಯವಾಹಿನಿಗೆ ಬರಲು ಬಿಟ್ಟಿಲ್ಲ. ಆದರೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಅಧಿಕಾರ ವಹಿಸಿದ ನಂತರ ಅಲ್ಪಸಂಖ್ಯಾತರಿಗೆ ವಿಶೇಷ ಯೋಜನೆಗಳನ್ನು ರೂಪಿಸಿ 4500 ಕೋಟಿ ರೂ. ನಿಯೋಜನೆ ಮಾಡಿದ್ದಾರೆ. ಪ್ರತಿ ಮದರಸಾದ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ನೀಡಿದ್ದು ಬಿಜೆಪಿ. ಯುಪಿಎಸ್‌ಸಿ ಪರೀಕ್ಷಗಳಿಗೆ ತರಬೇತಿ ನೀಡಲು ವಿಶೇಷ ಯೋಜನೆ ಪ್ರಾರಂಭಿಸಿ 50 ಫಲಾನುಭವಿ ಅಲ್ಪಸಂಖ್ಯಾತರಿಗೆ ತರಬೇತಿ ನೀಡಲಾಗಿದೆ. ಅವರಲ್ಲಿ ಶೇ.80 ಮುಸ್ಲಿಂಮರಾಗಿದ್ದಾರೆ. ಪ್ರತಿ ವಿದ್ಯಾರ್ಥಿಗೆ 7 ಲಕ್ಷ ರೂ. ಖರ್ಚುಮಾಡಿ ತರಬೇತಿ ನೀಡಿದ್ದು ಬಿಜೆಪಿ. ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿ ತರುವ ಮೂಲಕ ಮುಸ್ಲಿಂಮ ಜನತೆಗೆ ಶಿಕ್ಷಣ ನೀಡುವ ಜೋತೆಗೆ ಮುಖ್ಯವಾಹಿನಿಗೆ ತಂದಿದ್ದು ಬಿಜೆಪಿ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂಮರು ಬಿಜೆಪಿಗೆ ಬೆಂಬಲಿಸಿ ಪಕ್ಷ ಸೇರೆ​‍್ಡಯಾಗುತ್ತಿದ್ದಾರೆ ಎಂದು ಹೇಳಿದರು. 

ಬಿ.ಎಸ್‌. ಯಡಿಯುರಪ್ಪ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 168 ಕೋಟಿ ರೂ. ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮಹಿಳೆಯರಿಗೆ ಧನಸಹಾಯ ಮಾಡಿದ್ದಾರೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುವ ಅಲ್ಪಸಂಖ್ಯಾತ ಮಹಿಳೆಯರಿಗೆ 10 ಸಾವಿರ ರೂ ನೀಡಿ ಅದರಲ್ಲಿ 2 ಸಾವಿರ ಸಬ್ಸಿಡಿ ನೀಡಲಾಗಿದೆ. ಹೀಗೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಮತ ನೀಡಿ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. 

ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ರಫೀಕಹ್ಮದ ಪೀರಜಾದೆ, ಜಿಲ್ಲಾಧ್ಯಕ್ಷ ಸೈಯದ ನಿಡೋಣಿ, ರಾಜ್ಯ ಕಾರ‌್ಯಕಾರಿಣಿ ಸದಸ್ಯ ಮಜಹರ ಇನಾಮದಾರ, ಉಪಾಧ್ಯಕ್ಷ ಹಾಜಿ ಮಲಿಕ ಕುರೊಸಿ, ಡಾ.ಕಬುಲಸಾಬ, ಇಚಿಡಿ ತಾಲೂಕಾ ಅಧ್ಯಕ್ಷ ಸಲೀಮ ವಾಲಿಕಾರ, ಮೈಬೂಬ ಬಗಲಿ, ಮಂಡಲ ಅಧ್ಯಕ್ಷ ಈರಣ್ಣ ರಾವೂರ ಅವರು ಪತ್ರಿಕಾ ಗೋಷ್ಠಿಯಲ್ಲಿ ಇದ್ದರು. 

ಸುದ್ದಿ ಓದಿ