ಶಿಗ್ಗಾವ್

ಸಿಂಪಿ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸುವಂತೆ ಸಿಎಂಗೆ ಮನವಿ

ಸಿಂಪಿ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸುವಂತೆ ಸಿಎಂಗೆ ಮನವಿ

ಲೋಕದರ್ಶನ ವರದಿ

ಶಿಗ್ಗಾವಿ 24: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಾಮದೇವ ಸಿಂಪಿ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸುವಂತೆ ಪಟ್ಟಣದ ನಾಮದೇವ ಸಿಂಪಿ ಸಮಾಜದ ವತಿಯಿಂದ ತಹಶೀಲ್ದಾರರ ಮೂಲಕ ಸಿಎಂ ಬೊಮ್ಮಯಿಯವರಿಗೆ ಮನವಿ ಅರ್ಪಿಸಿದರು.

ಕರ್ನಾಟಕ ರಾಜ್ಯದಲ್ಲಿ ನಾಮದೇವ ಸಿಂಪಿ ಸಮಾಜದ ಸರಿ ಸುಮಾರು 8 ಲಕ್ಷಕ್ಕೂ ಅಧಿಕ ಜನರಿದ್ದು ಈ ಸಮಾಜ ಬಾಂಧವರಿದ್ದರೆ ಹಾಗೂ ಇಲ್ಲಿಯವರೆಗೆ 2ಎ ಮಿಸಲಾತಿಯಲ್ಲಿದ್ದು ನಮಗೆ ಸರ್ಕಾರದ ಯಾವುದೇ ವಲಯಗಳಲ್ಲಾಗಲಿ ನಿಗದು ಮಂಡಳಿಯಾಗಲಿ ಸ್ಥಾಪನೆ ಇಲ್ಲಿಯವರೆಗೂ ಆಗಲಿಲ್ಲ, ಸಾಕಷ್ಟು ಸಲ ಮನವಿ ಮಾಡಿದ್ದರೂ ಸಹ ಯಾವುದೇ ಪಕ್ಷಗಳ ಸರ್ಕಾರವು ಯಾವುದೇ ವಲಯಗಳಾಗಲಿ, ನಿಗಮ ಮಂಡಳಿಯಾಗಲಿ ಸ್ಥಾಪನೆ ಮಾಡಲಿಲ್ಲ ಹಾಗೂ ನಮ್ಮ ನಾಮದೇವ ಸಿಂಪಿ ಸಮಾಜಕ್ಕೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಭದ್ರತೆಗಳನ್ನು ಕೊಡಲಿಲ್ಲ, ನಿಜವಾದ ಅಲ್ಪಸಂಖ್ಯಾತರುಗಳು ನಾವುಗಳೇ ಆಗಿರುತ್ತೇವೆ, ಕಾರಣ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯಗಳು ನಮಗೆ ಸಿಗಲಿಲ್ಲ ಮತ್ತು ನಮ್ಮ ಸಮಾಜಕ್ಕೆ ಇಲ್ಲಿಯವರೆಗೂ ಅನ್ಯಾಯ ಆಗಿರುತ್ತದೆಯೇ ಹೊರತು ನ್ಯಾಯ ದೊರಕಿಸಿ ಕೊಡಲಿಲ್ಲ ಹಾಗೂ ನಮ್ಮ ಸಮಾಜದ ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ಸವಲತ್ತುಗಳು ಇಲ್ಲ. ನಮ್ಮ ಸಮಾಜ ಬಾಂಧವರಲ್ಲಿ ಅತಿ ಹೆಚ್ಚು ಬಡತನ ರೇಖೆಗಿಂತ ಕೆಳಗಿನವರೆ ಇದ್ದಾರೆ. ಈ ಎಲ್ಲಾ ಕಾರಣದಿಂದ ನಾಮದೇವ ಸಿಂಪಿ ನಿಗಮ ಮಂಡಳಿ ಸ್ಥಾಪನೆ ಮಾಡಿ ಸಿಂಪಿ ಸಮಾಜವೂ ಸರ್ವತೋಮುಖ ಅಭಿವೃದ್ಧಿ ಹೊಂದಲು ನ್ಯಾಯವನ್ನು ಒದಗಿಸಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

 ನಾಮದೇವ ಕೇಶವ ಉಂಡಾಳೆ, ಪರಶುರಾಮ ಮಳವಾದೆ, ಸುನೀಲ ಮಾಳವಾದೆ, ಕೇದಾರಪ್ಪ ಬಗಾಡೆ, ರಮೆಶ ಉಂಡಳೆ, ಎನ್ ಕೆ ಗಂಜೀಗಟ್ಟಿ, ಕಮಲಾಕರ ಗಂಜೀಗಟ್ಟಿ, ಮಂಜುನಾಥ ಮುಳೆ, ನಾಮದೇವ ಮಾಳವಾದೆ, ಗಣಪ್ಪ ಬಗಾಡೆ, ದಾಮೋದರ ಮಾಳವಾದೆ, ಪ್ರಕಾಶ ಅತಡಕರ ಸೇರಿದಂತೆ ಇನ್ನೂ ಅನೇಕರು ಇದ್ದರು. 

ಸುದ್ದಿ ಓದಿ