ಕಾಗವಾಡ

ಸಹಾಯ ಮಾಡುವ ಮನೋಭಾವ ಬೆಳೆಯಲಿ: ಪ್ರಭು ಚನ್ನಬಸವಶ್ರೀ

ಸಹಾಯ ಮಾಡುವ ಮನೋಭಾವ ಬೆಳೆಯಲಿ: ಪ್ರಭು ಚನ್ನಬಸವಶ್ರೀ

ಕಾಗವಾಡ 13: ಜೀವನದಲ್ಲಿ ಕಷ್ಟ ಇರುವವರಿಗೆ ಸಹಾಯ ಮಾಡುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಒಬ್ಬರಿಗೊಬ್ಬರು ಸಹಾಯ ನೀಡಿದರೆ ಮಾತ್ರ ಸಹಕಾರ ಸಂಘ ಬೆಳೆಯಲು ಸಾಧ್ಯ. ಆಕಾರ್ಯ ಕೆ.ಪಿ.ಮಗೆಣ್ಣವರ ಕ್ರೇಡಿಟ್ ಸೌಹಾರ್ದ ಬ್ಯಾಂಕ ಮಾಡುತ್ತಿದೆ ಎಂದು ಅಥಣಿ ಮೊಟಗಿಮಠದ ಪ್ರಭು ಚನ್ನಬಸವ ಮಹಾಸ್ವಾಮಿಗಳು ನುಡಿದರು.  

ಅವರು ಶನಿವಾರ ದಿ.13 ರಂಂದು ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ  ಕೆ.ಪಿ.ಮಗೆಣ್ಣವರ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಹಕಾರಿ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭನೆರವೇರಿಸಿ ಮಾತನಾಡುತ್ತಿದ್ದರು. ಸಾಲ ನೀಡುತ್ತಾರೆಂದು ಮೋಜು ಮಸ್ತಿಗಾಗಿ ಸಾಲ ಪಡೆಯದೆ ಒಳ್ಳೆಯ ಉದ್ಯೋಗ, ಕೃಷಿ, ವ್ಯಾಪಾರಕ್ಕಾಗಿ ಸಾಲ ಪಡೆದು ಆರ್ಥಿಕವಾಗಿ ಸದೃಢರಾಗುವದರ ಜೊತೆಗೆ ವೇಳೆಗೆ ಸರಿಯಾಗಿ ಸಾಲ ಮರುಪಾವತಿ ಮಾಡಿದಾಗ ಮಾತ್ರ ಸಂಸ್ಥೆಗಳು ಅಭಿವೃದ್ಧಿಯಾಗುತ್ತವೆ, ಜೊತೆಗೆ ಗ್ರಾಹಕರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಪೂಜ್ಯರು ನುಡಿದರು. 

ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಹಾಗೂ ಬ್ಯಾಂಕಿನ ಸಂಸ್ಥಾಪಕ ಕಲ್ಲಪ್ಪಣ್ಣ ಮಗೆಣ್ಣವರ ಮಾತನಾಡುತ್ತ ಒಂದು ಆರ್ಥಿಕ ಸಂಸ್ಥೆ ಬೆಳೆಯಬೇಕಾದರೆ ಅಲ್ಲಿ ಆಡಳಿತ ಮಂಡಳಿಯ ಪ್ರಾಮಾಣಿಕತೆ, ಶುದ್ಧ ಹಸ್ತದ ಸಿಬ್ಬಂದಿ ಹಾಗೂ ಪ್ರಾಮಾಣಿಕ ಗ್ರಾಹಕರು ಇದ್ದಾಗ ಮಾತ್ರ ಸಂಸ್ಥೆಗಳು ಬೆಳೆಯಲು ಸಾಧ್ಯ. ಆ ಕಾರ್ಯ ನಮ್ಮಲ್ಲಿ ನಡೆಯುತ್ತಿದೆ ಎಂದರು. 

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಜಿನ್ನಪ್ಪ ಶೇಡಬಾಳೆ ವಹಿಸಿದ್ದರು. ದೀಪ ಪ್ರಜ್ವಲನೆಯನ್ನು ದಿಗ್ವಿಜಯಸಿಂಗ್ ಪವಾರ ದೇಸಾಯಿ ನೆರವೇರಿಸಿದರು. ಗಣಕಯಂತ್ರ ಉದ್ಘಾಟನೆಯನ್ನು ಎಪಿಎಂಸಿ ಸದಸ್ಯ ರವೀಂದ್ರ ಪೂಜಾರಿ ಮಾಡಿದರು. ಲಾಕರ್ ಆದಿನಾಥ ದಾನೊಳ್ಳಿ ನೆರವೇರಿಸಿದರು.  

ಅತಿಥಿಗಳಾಗಿ ಸುಧಾಕರ ಭಗತ, ದಲಿತ ಸಂಘರ್ಷ ಸಮಿತಿಯ ಸದಸ್ಯ ಸಂಜಯ ತಳವಲಕರ ಸ್ಥಾನಿಕ ಮಂಸುಳಿ ಶಾಖೆಯ ಅಧ್ಯಕ್ಷ ಸಂಜಯ ಶೆಟ್ಟಿ, ಅರುಣ ಪಾಟೀಲ, ಆದಿನಾಥ ಶೆಟ್ಟಿ, ಪರಶುರಾಮ ಸಾವಂತ, ಮಿರಾಸಾಹೇಬ ಸನದಿ, ಚಾರುದತ್ತ ಶೆಟ್ಟಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ