ಬೇದಬಾವವಿಲ್ಲದೆ ದೇವದಾಸಿಯರಿಗೆ ವೃದ್ದಾಶ್ರಮ ಸೇರಲು ಅವಕಾಶ
ಹೂವಿನಹಡಗಲಿ 27: ಪಟ್ಟಣದ ವಿಜಯನಗರ ಬಡಾವಣೆ 19ನೇ ವಾರ್ಡನಲ್ಲಿ ಮುದುಕಪ್ಪ ಸಾಯಿಲ್ ಹತ್ತಿರ ಕೃಪಾಶ್ರಯ ಟ್ರಸ್ಟ್ ಬೆಂಗಳೂರು ವತಿಯಿಂದ ಮಾಜಿ ದೇವದಾಸಿ ಮಹಿಳೆಯರಿಗಾಗಿ ಜಾತಿ, ಭಾಷೆ, ಕುಲ, ಬೇದಬಾವ ವಿಲ್ಲದೆ ಎಲ್ಲಾ ಜಾತಿ ಜನಾಂಗದವರಿಗಾಗಿ ವೃದ್ದಾಶ್ರಮ ಪ್ರಾರಂಭವಾಗಿದ್ದು ರಾಜ್ಯಾಧ್ಯಕ್ಷರಾದ ರೆವರೆಂಡ್ ಸ್ಯಾಟ್ಸನ್ ಆರ್ಥರ್ ಪಾಲ್ ಉಪಾದ್ಯಕ್ಷರಾದ ಶಿಬಿ ಸ್ಯಾಟ್ಸನ್ ಮತ್ತು ಕೆ ಹಾಲೇಶ್ ನಾಯ್ಕ.ರೂಪಾಬಾಯಿ ಇವರ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಕೂಡ್ಲಿಗಿ ಹೆಚ್.ಬಿ.ಹಳ್ಳಿ.ಹರಪನಹಳ್ಳಿ.ಕೊಟ್ಟೂರು. ಹೊಸಪೇಟೆ ತಾಲೂಕಿನ ಎಲ್ಲಾ ಮಾಜಿ ದೇವದಾಸಿ ಮಹಿಳೆಯರು. ಹಾಗೂ ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯಲು. ಇಚ್ಚಿಸುವವರು ತಮ್ಮ ಸಂಬಂದಿಕರೊಂದಿಗೆ ತಮ್ಮ ಆಧಾರ್ ಕಾರ್ಡ, ಪೋಟೋ, ದೇವದಾಸಿ ದೃಡಿಕರಣ ಪತ್ರ ತೆಗೆದುಕೊಂಡು ಬರಬೇಕೆಂದು ಕೃಪಾಶ್ರಯ ಟ್ರಸ್ಟ್ ನ ಹಡಗಲಿ ತಾಲೂಕು ಶಾಖೆ ಉಸ್ತುವಾರಿಗಳಾದ ಹಲಗಿ ಸುರೇಶರವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9591382199. 9880811917