ದೃಢ ಸಂಕಲ್ಪ, ಪರಿಶ್ರಮ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ: ತಿಮ್ಮಾಪುರ
Determination and hard work will brighten the future: Thimmapura
ಜಮಖಂಡಿ 12: ಹಿಂದಿನ ಕಾಲದ ಚಿತ್ರಕಲಾ ಕ್ಷೇತ್ರಕ್ಕೆ ಬೇಕಾದ ಅವಕಾಶಗಳು ಮತ್ತು ವೇದಿಕೆಗಳು ಕಡಿಮೆ ಇದ್ದವು. ಆದರೆ ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ನಿತ್ಯ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಅವರು ಚಿತ್ರಕಲೆಗಳಿಗೆ ಜೀವ ತುಂಬುವಂತೆ ನಿಖರ ಪರಿಶ್ರಮ ಪಡುತ್ತಿದ್ದಾರೆ. ಅವರ ಈ ದೃಢ ಸಂಕಲ್ಪ ಮತ್ತು ಪರಿಶ್ರಮ ಅವರ ಭವಿಷ್ಯವನ್ನು ಖಂಡಿತವಾಗಿ ಉಜ್ವಲಗೊಳಿಸುತ್ತದೆ ಎಂದು ಜಯ ವಿಜಯ ಮಹಿಳಾ ವಿವಿಧೋದ್ದೇಶ ಶೈಕ್ಷಣಿಕ ಮಹಾ ಸಂಸ್ಥೆಯ ಅಧ್ಯಕ್ಷೆ ಕವಿತಾ ತಿಮ್ಮಾಪುರ ಹೇಳಿದರು.
ನಗರದ ಮಹೇಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ಎಚ್,ಎಂ, ವಿಶ್ವನಾಥ ಅವರ ಸೇವಾ ನಿವೃತ್ತಿ ನಿಮಿತ್ತ ಚಿತ್ರಕಲಾ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಲೆಯ ಪ್ರತಿ ಚಿತ್ರವೂ ಒಂದು ಕಥೆ ಹೇಳುತ್ತದೆ. ಚಿತ್ರ ನೋಡುತ್ತಿದ್ದಂತೆಯೇ ಅದರ ಹಿಂದಿನ ಭಾವನೆ, ಸಂವೇದನೆ ಕಲಾವಿದನ ಮನೋಭಾವ ಅರ್ಥವಾಗುತ್ತದೆ. ಇಂತಹ ಕಲೆಗಳು ಸಮಾಜದ ಸೌಂದರ್ಯ ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ಎಚ್,ಎಂ, ವಿಶ್ವನಾಥ ಸೇವಾ ನಿವೃತ್ತ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹೇಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ 37 ವರ್ಷಗಳಿಂದ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ವಿಷಯ. ಚಿತ್ರಕಲೆಯ ಮೂಲಕ ಅನೇಕ ವಿದ್ಯಾರ್ಥಿಗಳ ಜೀವನ ರೂಪುಗೊಂಡಿರುವುದನ್ನು ನೋಡುವುದು ನನಗೆ ಸಂತೋಷ ತಂದಿದೆ ಎಂದರು.
ಮುಧೋಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಾನಂದ ಕತ್ತಿ, ನಿವೃತ್ತ ಪ್ರಾಚಾರ್ಯ ಬಾಬು ಜತ್ಕರ ಹಾಗೂ ಹಿರಿಯ ನ್ಯಾಯವಾದಿ ಬಿ,ಸಿ, ಹಿರೇಮಠ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಾಧ್ಯಾಪಕ ಕೆ,ಬಿ, ರಾಠೋಡ, ಜಿ,ವಿ, ಹಂಪಣ್ಣವರ, ಬಿ,ಜಿ, ಚೌಧರಿ ಹಾಗೂ ವಿದ್ಯಾರ್ಥಿಗಳು, ಕಲಾಪ್ರೇಮಿಗಳು ಸೇರಿದಂತೆ ಅನೇಕರು ಇದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 