ಕಾಗವಾಡ

ದೇಶಿ ಆಟಗಳಿಗೆ ಮರುಜೀವ ಕೊಡಬೇಕಾಗಿದೆ: ನಗರಕರ

ದೇಶಿ ಆಟಗಳಿಗೆ ಮರುಜೀವ ಕೊಡಬೇಕಾಗಿದೆ: ನಗರಕರ

ಲೋಕದರ್ಶನ ವರದಿ 

ಕಾಗವಾಡ 20: ಇಲ್ಲಿನ ಶಿವಾನಂದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಸಂಘದ ವತಿಯಿಂದ ಲಗೋರಿ, ಲಿಂಬು ಚಮಚ, ಪುಗಡಿ, ಸಂಗೀತ ಖುರ್ಚಿ, ಜನಪದ ಹಾಡು, ಹಗ್ಗ ಜಗ್ಗಾಟ ಇತ್ಯಾದಿ ದೇಶಿ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. 

ಇಂದಿನ ತಂತ್ರಜ್ಞಾನದ ಯುಗದಲ್ಲಿ ನಾವೆಲ್ಲಾ ಒತ್ತಡದ ಬದುಕಿನಲ್ಲಿ ಬದುಕುತ್ತಿದ್ದೇವೆ. ಯಾರಿಗೂ ಪುರಸೋತ್ತಿಲ್ಲ. ಪುರುಸೊತ್ತು ಇದ್ದರೂ ಆ ಸಮಯವನ್ನು ಸಾಮಾಜಿಕ ಜಾಲತಾಣದೊಂದಿಗೆ ಕಳೆಯುತ್ತಿದ್ದೇವೆ. ಲೈಕು, ಕಮೆಂಟುಗಳಿಗೆ ನಮ್ಮ ಸಮಯವನ್ನು ವ್ಯಯ ಮಾಡುತ್ತಿದ್ದೇವೆ. ಅದಕ್ಕೆ ದೇಶಿ ಆಟಗಳ ಅವಶ್ಯಕತೆ ಇದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ವ್ಹಿ.ಎಸ್‌.ತುಗಶೆಟ್ಟಿಯವರು ಹೇಳಿದರು.  

ಗ್ರಾಮೀಣ ಪ್ರದೇಶದ ಯುವತಿಯರಲ್ಲಿ ಪ್ರತಿಭೆಯಿದೆ. ಅದನ್ನು ಮುನ್ನೆಲೆಗೆ ತರುವುದೇ ಸಂಘದ ಧ್ಯೇಯ, ಅಲ್ಲದೆ ಇಂದಿನ ಯುವ ಜನಾಂಗಕ್ಕೆ ಅದೆಷ್ಟೋ ಗ್ರಾಮೀಣ ಆಟಗಳ ಪರಿಚಯವೇ ಇಲ್ಲ. ಹೀಗಾಗಿ ದೇಶಿ ಆಟಗಳು ನೇಪಥ್ಯಕ್ಕೆ ಸರಿಯುತ್ತಲಿವೆ. ಅವುಗಳಿಗೆ ಮರು ಜೀವ ಕೊಡಬೇಕಾಗಿದೆ ಎಂದು ಸಂಘದ ಕಾರಾ​‍್ಯಧ್ಯಕ್ಷ ಡಾ. ಡಿ.ಡಿ.ನಗರಕರ ಅವರು ಹೇಳಿದರು.  

ಎಲ್ಲಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ವಿದ್ಯಾರ್ಥಿನಿಯರಿಗೆ ದೈಹಿಕ ಶಿಕ್ಷಕ ಆರ್‌.ಎಸ್‌.ನಾಗರೆಡ್ಡಿ, ಉಪಪ್ರಾಚಾರ್ಯ ಡಾ. ಎಸ್‌.ಎ.ಕರ್ಕಿ, ಕಾರ್ಯದರ್ಶಿ ಬಿ.ಎ.ಪಾಟೀಲ, ಡಾ. ಎಸ್‌.ಪಿ.ತಳವಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ