ರಾಣೆಬೆನ್ನೂರ

ಸಹಜ ಸಮೃದ್ಧಿ ಸಂಸ್ಥೆ ಸಹಕಾರದೊಂದಿಗೆ ದೇಶಿ ರಾಗಿ ತಳಿಗಳ ಬೆಳೆ ಕ್ಷೇತ್ರೋತ್ಸವ

ಸಹಜ ಸಮೃದ್ಧಿ ಸಂಸ್ಥೆ ಸಹಕಾರದೊಂದಿಗೆ ದೇಶಿ ರಾಗಿ ತಳಿಗಳ ಬೆಳೆ ಕ್ಷೇತ್ರೋತ್ಸವ

ರಾಣೆಬೆನ್ನೂರು;12 ತಾಲೂಕಿನ ಇಟಗಿ ಗ್ರಾಮದಲ್ಲಿ  ರೇವಣಪ್ಪ ಪೂಜಾರ ಇವರ ಜಮೀನಿನಲ್ಲಿ 20 ದೇಶಿಯ ತಳಿಯ ರಾಗಿ ಬೆಳೆ ಕ್ಷೇತ್ರೋತ್ಸವದಲ್ಲಿ ದೇಶಿ ಬೀಜ ಬೆಳೆಯಲ್ಲಿ ಸಹಬಾಗಿತ್ವ ತಳಿ ಆಯ್ಕೆ ಹಾಗೂ ಪರಿಚಯಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮತಿ ಶಾಂತಮಣಿ ಸಹಾಯಕ ಕೃಷಿ ನಿರ್ದೇಶಕರು ಆರೋಗ್ಯದ ಬಲವರ್ಧನೆಗೆ ಸಿರಿಧಾನ್ಯ ಬಳಸುವಂತೆ ರೈತರಿಗೆ ಕರೆ ನೀಡಿದರು. ರೈತರು ಇಂದು ತಮ್ಮ ಕುಟುಂಬಕ್ಕಾದರೂ ಕೃಷಿಯಲ್ಲಿ ಬದಲಾವಣೆ ಮಾಡಿಕೊಂಡು ಸಾವಯವ ಕೃಷಿ ಪದ್ದತಿ ಯಲ್ಲಿ ಅಳವಡಿಡಿಸಿಕೊಂಡು ಆಹಾರ ಬೆಳೆಗಳು, ತರಕಾರಿ ಸೊಪ್ಪು, ಅಕ್ಕಡಿಕಾಳು ಬೆಳೆಯಲು ರೈತರಿಗೆ ತಿಳಿಸಿದರು.

ಡಾ. ನಾಗಪ್ಪ ಹರಿಜನ ಕೃಷಿ ವಿಜ್ಞಾನಿಗಳು ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರು ರಾಗಿಯಲ್ಲಿ ರೋಗ ನಿರೋಧಕ ಶಕ್ತಿ ಇದ್ದು ಮೌಲ್ಯವರ್ಧನೆ ಮಾಡಿದಲ್ಲಿ ಪೌಷ್ಠಿಕ ಆಹಾರ ಮಕ್ಕಳಿಗೆ ಹಾಗೂ ನಿರಂತರ ಸೇವಿಸಿದಲ್ಲಿ ಮನುಷ್ಯನ ಆರೋಗ್ಯಕ್ಕೆ ತುಂಬಾ ಪ್ರಯೋಜನೆಕಾರಿಯಾಗಿದೆ ಎಂದು ರೈತರಿಗೆ ತಿಳಿಸಿ ರಾಗಿ ಬೆಳೆಯಲು ಕರೆ ನೀಡಿದರು. 

ಹನುಮಂತರೆಡ್ಡಿ ಕೃಷಿ ಪದವಿಧರರು ಕಾರ್ಯಕ್ರಮದಲ್ಲಿ ಬಾಗವಹಿಸಿ ತಮ್ಮ ನುಡಿಗಳಲ್ಲಿ ಸಾಂಪ್ರದಾಯಿಕ ಕೃಷಿಯತ್ತ ರೈತರು ಗಮನಹರಿಸಬೇಕು ಹಾಗೂ ಕಿರುಧಾನ್ಯಗಳನ್ನು ರೈತರು ಎಥೇಚವಾಗಿ ಬೆಳೆದು ಜಮೀನಿನ ಇಳುವರಿ ಹಾಗೂ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಸದಾ ಗಮನಹರಿಸಬೇಕು ಎಂದು ಹೇಳಿದರು. ವನಸಿರಿ ಸಂಸ್ಥೆಯವರು ತುಂಬಾ ದಿನಗಳಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಒಳ್ಳೆಯ ಸಹಕಾರ ಕೊಟ್ಟು ಈ ಪ್ರದೇಶದ ರೈತರಿಗೆ ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಮನವರಕೆ ಮಾಡಿದ್ದಾರೆ. ಇಂತಹ ಅವಕಾಶಗಳನ್ನು ರೈತರು, ರೈತ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುಬೇಕೆಂದು ತಿಳಿಸಿದರು.

  ಪ್ರಾಸ್ತಾವಿಕವಾಗಿ ಮಾತನಾಡಿದ ವನಸಿರಿ ಸಂಸ್ಥೆಯ ನಿರ್ದೇಶಕ  ಎಸ್.ಡಿ.ಬಳಿಗಾರ ಇವರು  ಮಾತನಾಡುತ್ತ ವನಸಿರಿ ಸಂಸ್ಥೆೆಯು ದೇಶೀ ಬೀಜಗಳನ್ನು ರಕ್ಷಣೆ ಮಾಡಲು 3 ಬೀಜ ಬ್ಯಾಂಕಗಳನ್ನು ಸ್ತಾಪನೆ ಮಾಡಲಿದೆ  ಹಾಗೂ ಶೀಘ್ರದಲ್ಲಿ ಸಾವಯವ ರೈತರ ಸಂತೆ ಪ್ರಾರಂಭಿಸಿ ರೈತರಿಗೆ ನೇರ ಮಾರುಕಟ್ಟೆ ಕಲ್ಪಿಸಿ ಯೋಗ್ಯಬೆಲೆ ರೈತರಿಗೆ ದೊರೆಯುವಂತೆ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದರು.

ಕ್ಷೇತ್ರೋತ್ಸವದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ ಹಿರಿಯ ಮುಖ್ಯಸ್ಥರು ಡಾ. ಗುರು ಪ್ರಸಾದ, ಡಾ. ಶಾಂತಕುಮಾರ, ರೇವಣಪ್ಪ ಪೂಜಾರ, ಪೂಜಿತಾ ವಾಸನ್ ಸಂಸ್ಥೆ ಹೈದರಾಬಾದ ಹಾಗೂ ಸುತ್ತಮುತ್ತಲಿನ ಗ್ರಾಮದ 100 ಕ್ಕೂ ಹೆಚ್ಚು  ಜನ ರೈತ/ರೈತ ಮಹಿಳೆಯರು ಪಾಲ್ಗೊಂಡು ಸಿರಿಧಾನ್ಯ ಆಯ್ಕೆ ಪ್ರಕ್ರಿಯೆಯಲ್ಲಿ ಬಾಗವಹಿಸಿ ಮಾಹಿತಿ ತಿಳಿದುಕೊಂಡರು. ವನಸಿರಿ ಸಂಸ್ಥೆಯ  ಜಿ.ಪಿ.ನದಾಫ್ ಸ್ವಾಗತಿಸಿದರು,  ಹನುಮಂತಪ್ಪ ಮಣ್ಣಮ್ಮನವರ ವಂದಿಸಿದರು.

ಸುದ್ದಿ ಓದಿ