ಕಾಗವಾಡ

ಸರ್ಕಾರದ ಸವಲತ್ತುಗಳಿಂದ ವಂಚಿತರಾದ ದುರ್ಗ ಮರುಗ ಜನಾಂಗ

ಸರ್ಕಾರದ ಸವಲತ್ತುಗಳಿಂದ ವಂಚಿತರಾದ ದುರ್ಗ ಮರುಗ ಜನಾಂಗ

ಮನೋಜ್ ಪಾಟಣಕರ್ 

ಕಾಗವಾಡ: ಮುತ್ತಾತ ತಾತನ ಕಾಲದಿಂದಲೂ ಬಂದ ಸಂಪ್ರದಾಯದಂತೆ ಅವ್ರೇಲ್ಲಾ ಮನೆ ಮನೆಗೂ ದೇವರನ್ನ ತಲೆ ಮೆಲೆ ಹೋತ್ತುಕೊಂಡು ಒಯ್ದು ತಮ್ಮ ಮೈಮೇಲೆ( ಚಾಟಿ ಏಟು) ಚಬಕಾದಿಂದ ಹೊಡೆದೂಕೊಂಡು ಭಕ್ತರು  ದೇವರಿಗೆ ಅಕ್ಕಿ ಹಾಗೂ ಇತರೆ ದವಸ  ಧಾನ್ಯಗಳ ರೂಪದಲ್ಲಿ ನೈವಿಧ್ಯ ಅರ್ಪಿಸಿದ್ದ ದವಸ ಧಾನ್ಯ ಮೇಲೆ ಜೀವನ ನಡೆಸುವ ದುರ್ಗ ಮರುಗ ಜನಾಂಗದ ಜನರು.ಹೀಗೆ ಪುಟ್ಟ ಪುಟ್ಟ ಗುಡಿಸಲಿನಲ್ಲಿ ವಾಸವಿರುವ ಜನರು ಮತ್ತೊಂದು ಕಡೆ ಮಟ ಮಟ ಮಧ್ಯಾಹ್ನದ ಬಿಸಿಲಿನಲ್ಲಿ ಅಡುಗೆ ಮಾಡಿ ತಮ್ಮ ಮಕ್ಕಳಿಗೆ ಊಟ ಬಡಿಸುತ್ತಿರುವ ಪೋಷಕರು ಇವೆಲ್ಲಾ ದೃಶ್ಯ ಕಂಡು ಬಂದಿದ್ದು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಹೊರವಲಯದಲ್ಲಿ ವಾಸವಿರುವ ದುರ್ಗ ಮರುಗ ಜನಾಂಗದ ಜನರು ಇವರಿಗೆ ಸಕರ್ಾರದ ಸವಲತ್ತುಗಳಿಂದ ವಂಚಿತರಾಗಿ ಹೀಗೆ ಉಳಿಯೋದಕ್ಕೆ  ಪ್ರಮುಖ ಕಾರಣ ಇವರಿಗೆ ಸಿಗಬೇಕಿದ್ದ ಜಾತಿ ಪ್ರಮಾಣ ಪತ್ರ ಕಾಗವಾಡ ತಾಲೂಕಿನ ಐನಾಪುರ, ಗ್ರಾಮಗಳಲ್ಲಿ ಶಿಂದೊಳಿ ಸಮುದಾಯಕ್ಕೆ ಸೇರಿದ ದುರ್ಗ ಮರುಗ  ಜನಾಂಗದ ಜನರು ವಾಸವಿದ್ದು .ಅವರಿಗೆ ಕಾಗವಾಡ ತಾಲೂಕಿನಲ್ಲಿ ಜಾತಿ ಪ್ರಮಾಣ ಪತ್ರ ಸಿಗದ ಇರೋ ಕಾರಣ ಸಕರ್ಾರದ ಸವಲತ್ತುಗಳಿಂದ ವಂಚಿತರಾಗಿ ಉಳಿಯುವಂತಾಗಿದೆ.ಮೋಳವಾಡ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಎಂಬ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಸಹ ಇನ್ನೂವರೆಗೋ ಈ ಜನಾಂಗದ ಜನರಿಗೆ ಸಿಕ್ಕಿಲ್ಲ ಜಾತಿ ಪ್ರಮಾಣ ಪತ್ರ.

ವಿದ್ಯಾರ್ಥಿನಿ ಮಾತನಾಡಿ  ನಮಗೆ ಸರ್ಕಾರದಿಂದ ದೊಡ್ಡ ಅನ್ಯಾಯವಾಗುತ್ತಿದೆ ಇದರಿಂದ ಸರ್ಕಾರ ಸವಲತ್ತು ನಮಗೆ ಸಿಗುತ್ತಿಲ್ಲ ಶಿಕ್ಷಣಕ್ಕೂ ಸಹ ಬಹಳಷ್ಟು ತೊಂದರೆಯಾಗುತ್ತಿದೆ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ನಮಗೆ ಜಾತಿ ಪ್ರಮಾಣ ಪತ್ರ ನೀಡುವ ಕೆಲಸಕ್ಕೆ ಮುಂದಾಗಲಿ ಎಂದು ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆಭಾರತಿ ಶಿವಾಜಿ ಶಿಂದೋಳಿಯುವತಿ ಮಾತನಾಡಿ ನಾವು ಬಡವರು  ಮನೆ ಮನೆಗೂ ಹೋಗಿ ಬಿಕ್ಷೆ ಬೇಡಿ ಜೀವನ ನಡೆಸುವ ಜನಾಂಗ ನಮ್ಮದು ಸರ್ಕಾರ ಸವಲತ್ತುಗಳು ನಮಗೆ ಸರಿಯಾಗಿ ಸಿಕ್ಕರೆ ನಮ್ಮ ಜೀವನವನ್ನು ರೂಪಿಸಿಕೊಂಡು ಜೀವನ ನಡೆಸಬೇಕೆಂದರೆ ಇಲ್ಲಿಯ ಅಧಿಕಾರಿಗಳು ನಮಗೆ ಜಾತಿ ಪ್ರಮಾಣ ನೀಡುತ್ತಿಲ್ಲ ಎಂದು ಕಾಗವಾಡ ತಾಲೂಕಿನ ಅಧಿಕಾರಿಗಳ ಮೇಲೆ ಆರೋಪಿಸಿದರು.

ಗೌರಿ ಶಿಂದೋಳಿ.ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಾಗವಾಡ ತಾಲೂಕಿನ ಗ್ರೇಡ್ 2 ತಹಶಿಲ್ದಾರ ರಾಕೇಶ್ ಬುವಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಜನಾಂಗದವರ ಬಗ್ಗೆ 4ತಿಂಗಳನಿಂದ ತನಿಖೆ ನಡೆಯುತ್ತಿದ್ದೆಅವರು 2 ಜಾತಿಗಳನ್ನು ಆಯ್ಕೆ ಮಾಡಿಕೊಂಡಿದ್ದರಿಂದ ನಮಗೆ ಜಾತಿ ಪ್ರಮಾಣ ಪತ್ರ ನೀಡಲು ನಮಗೆ ಗೊಂದಲವಾಗುತ್ತಿದೆ ಕಾಗವಾಡ ತಹಶೀಲ್ದಾರ ಹಾಗೂ ನಾವು ಕೊಂಡಿಕೊಂಡು 8 ದಿನಗಳಲ್ಲಿ ಅವರ ಸಮಸ್ಯೆಯನ್ನ ಇತ್ಯರ್ಥಗೊಳಿಸಲುತ್ತೇವೆ ಎಂದು ಮಾಹಿತಿಯನ್ನು ನೀಡಿದ್ದಾರೆ.ಒಟ್ಟಿನಲ್ಲಿ ನೋಡುವುದಾದರೆ ಸಂವಿಧಾನ ಬದ್ಧವಾಗಿ ಜನಾಂಗಕ್ಕೆ ದೊರೆಯಬೆಕಾಗಿದ್ದ ಜಾತಿ ಪ್ರಮಾಣ ಪತ್ರ ಇನ್ನೂವರೆಗೂ ಸಿಗದೇ ಇರೋದು ವಿಪಯರ್ಾಸವೇ ಸರಿ 

ಸುದ್ದಿ ಓದಿ