ಜನ ನಂಬಿಕೆಗಳಿಸಿಕೊಂಡು ಕೆಲಸ ಮಾಡುವ ಇಲಾಖೆ ಅಂಚೆ ಇಲಾಖೆ: ಡಿಸಿ
ಇಂಡಿ 12: ದೇಶದಲ್ಲಿ ಅತ್ಯಂತ ಜನ ನಂಬಿಕೆಗಳಿಸಿಕೊಂಡು ಕೆಲಸ ಮಾಡುವ ಇಲಾಖೆ ಅಂಚೆ ಇಲಾಖೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಮಂಗಳವಾರ ಪಟ್ಟಣದ ಗುರುಭವನದಲ್ಲಿ ಅಂಚೆ ಇಲಾಖೆ ಆಯೋಜಿಸಿದ ಲಕೋಟೆ ಬಿಡುಗಡೆ ಸಮಾರಂಭದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದರು.
150 ವರ್ಷ ಇತಿಹಾಸವಿರುವ ಅಂಚೆ ಇಲಾಖೆ ವ್ಯವಹಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಈ ಇಲಾಖೆ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವ ಉದ್ದೇಶದಿಂದ 1969 ಅ.9 ರಂದು ಅಂತರ ರಾಷ್ಟ್ರೀಯ ಅಂಚೆ ದಿನ ಜಾರಿಗೆ ತರಲಾಗಿದೆ. ಇದು ಕೇವಲ ಪತ್ರ ವ್ಯವಹಾರವಲ್ಲದೆ 1.5 ಲಕ್ಷ ಅಂಚೆ ಕಚೇರಿಗಳಿವೆ. ಅವುಗಳಲ್ಲಿ ಶೇ. 85 ರಷ್ಟು ಗ್ರಾಮೀಣ ಪ್ರದೇಶದಲ್ಲಿರುವದು ವಿಶೇಷ ಎಂದ ಅವರು ಭಾರತದಲ್ಲಿಯ ಸೈನಿಕರು ಮತ್ತು ನಾವಿಕರು ಇನ್ನೂ ವರೆಗೆ ಪತ್ರಕ್ಕಾಗಿ ಕಾಯುತ್ತಿದ್ದಾರೆ.ಪತ್ರ ವ್ಯವಹಾರ ಸರಿಯಾದ ವಿಳಾಸಕ್ಕೆ ತಲುಪಿಸಲು 1972 ರಲ್ಲಿ ಕೋಡ್ ನಂಬರ್ ಜಾರಿಗೆ ತರಲಾಗಿದೆ. 1.5 ಕೋಟಿ ಜನ ಅಂಚೆ ಕಚೇರಿಯಲ್ಲಿ ವ್ಯವಹಾರ ಮಾಡುತ್ತಿದ್ದು 6 ಲಕ್ಷ ಕೋಟಿ ಠೆವಣಿ ಹೊಂದಿದ್ದು ಪ್ರತಿ ವರ್ಷ 2 ಸಾವಿರ ಕೋಟಿ ಲಾಭ ಗಳಿಸುತ್ತಿದೆ ಎಂದರು..
ಪ್ರಗತಿಪರ ರೈತ ಭೀಮು ರಾಠೋಡ ಅವರ ಸಹಕಾರದಿಂದ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯ ಅಡಿಯಲ್ಲಿ ವಿಜಯಪುರ ಜಿಲ್ಲೆ ನಿಂಬೆ ಬೆಳೆ ಬಗ್ಗೆ ನೆನಪಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿತ್ತು. ಪ್ರಧಾನ ಮಂತ್ರಿಗಳ ಈ ಯೋಜನೆಯ ಉದ್ದೇಶವೆಂದರೆ ದೇಶದಲ್ಲಿ ವಿವಿಧ ಜಿಲ್ಲೆಗಳಲ್ಲಿ ವಿವಿಧ ಪ್ರಮುಖ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದ್ದ ಪ್ರಮುಖ ಬೆಳೆಯನ್ನು ಗುರುತಿಸಿ ಅದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿದರೆ ಉತ್ಪನ್ನ್ ಹೆಚ್ಚಿಸಬಹುದು ಎಂದು ನಿರೀಕ್ಷಿಸಿದ್ದಾರೆ. ದೇಶದಲ್ಲಿ ಕನರ್ಾಟಕ ನಿಂಬೆ ಜಿಐಟಿ ಸ್ಟೆಟಸ್ ಪಡೆಯಲಿದ್ದು ಜಾಗತೀಕ ಮಟ್ಟದಲ್ಲಿ ಮಹತ್ವ ಪಡೆದುಕೊಳ್ಳುತ್ತದೆ ಎಂದರು.
ವಿಜಾಪುರ ಜಿಲ್ಲಾ ಸಹಾಯಕ ಅಂಚೆ ಅಧಿಕ್ಷಕ ವಿ.ವಿ.ನಿಂಬರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ, ತಹಸೀಲ್ದಾರ ನಾಗಯ್ಯ ಹಿರೇಮಠ, ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ,ಜಗನು ಮಹಾರಾಜ , ಕಾಸುಗೌಡ ಬಿರಾದಾರ,ಭೀಮು ಶಂಕರ ರಾಠೋಡ,ಜಿ.ಬಿ.ನಾಯಕ,ಎಸ್.ಎಂ.ಬರಗಿಮಠ,ರಮೇಶ ಕಮತೆ,ಸುಭಾಸ ಬಸಳಿಗುಂದಿ,ಶೀಲವಂತ ಉಮರಾಣಿ,ಯಲ್ಲಪ್ಪ ಹದರಿ ಮತ್ತಿತರಿದ್ದರು.