ರಾಣೆಬೆನ್ನೂರ

ಡಾ.ಕಡಕೋಳ ಪೋದಾರ್ ಲರ್ನ್‌ ಶಾಲೆಯಲ್ಲಿ ದಂತ ತಪಾಸಣಾ ಶಿಬಿರ

ಡಾ.ಕಡಕೋಳ ಪೋದಾರ್ ಲರ್ನ್‌ ಶಾಲೆಯಲ್ಲಿ ದಂತ ತಪಾಸಣಾ ಶಿಬಿರ

ರಾಣಿಬೆನ್ನೂರ:2 ಮಕ್ಕಳು ಚಾಕಲೇಟ್‌ನಂತಹ ಸಿಹಿ ಪದಾರ್ಥಗಳನ್ನು ಹೆಚ್ಚು ತಿನ್ನುವ್ಯದರಿಂದ ಹಲ್ಲು ಹುಳುಕಾಗುತ್ತವೆ ಇದರಿಂದ ಹಲ್ಲಿನ ಬಾಧೆ ಹೆಚ್ಚುತ್ತದೆ.  ಆದಕಾರಣ ಪಾಲಕರು ಮಕ್ಕಳ ಹಲ್ಲಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ದಂತ ವೈದ್ಯ ಡಾ.ಪ್ರಮೋದ ಉದಗನಿ ಹೇಳಿದರು.  

ಶನಿವಾರ ತಾಲೂಕಿನ ಅಸುಂಡಿ ಗ್ರಾಮದ ಡಾ.ಕಡಕೋಳ ಪೋದಾರ್ ಲರ್ನ್‌ ಶಾಲೆಯಲ್ಲಿ ಡಾ. ಹಾಲಪ್ಪ ಕಡಕೋಳ ಫೌಂಡೇಶನ್ ವತಿಯಿಂದ ಏರಿ​‍್ಡಸಲಾಗಿದ್ದ ದಂತ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಸಿಹಿ ಪದಾರ್ಥಗಳ ಸೇವನೆಯಿಂದ ದಂತ ಕುಳಿಗಳು ಉಂಟಾಗಿ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಮಕ್ಕಳು ಪ್ರತಿದಿನ ಎರಡು ಬಾರಿ ಹಲ್ಲನ್ನು ಉಜ್ಜುವಂತೆ ಪಾಲಕರು ನೋಡಿಕೊಳ್ಳಬೇಕು ಎಂದರು.  

ಡಾ. ಪವನ್ ಉದಗನಿ, ಡಾ. ಬಿ.ಎಸ್‌. ಪಾಟೀಲ, ಡಾ. ಸಂತೋಷ ಸಕ್ರಿ, ಡಾ. ಮಹಾಂತೇಶ ಎಸ್‌.ಎಸ್, ಡಾ. ಮಲ್ಲಿಕಾರ್ಜುನ ಎಚ್‌.ಬಿ, ಡಾ. ಪ್ರಸನ್ನಕುಮಾರ ಕಡಕೋಳ ಶಿಬಿರದಲ್ಲಿ ಮಕ್ಕಳ ದಂತ ತಪಾಸಣೆ ಮಾಡಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಪ್ರಶಾಂತ ಕಡಕೋಳ, ಕವಿತಾ ಕಡಕೋಳ, ಪ್ರಾ. ರೂಪೇಶ ಘಾಟಗೆ ಹಾಗೂ ಶಿಕ್ಷಕ ವರ್ಗ ಉಪಸ್ಥಿತರಿದ್ದರು. 


ಸುದ್ದಿ ಓದಿ