ರಾಣೆಬೆನ್ನೂರ

ಹಾವೇರಿ ಜಿಲ್ಲೆಯಲ್ಲಿ ನಿಯಂತ್ರಣ ತಪ್ಪಿದ ಡೆಂಗ್ಯೂ: ರವೀಂದ್ರಗೌಡ ಪಾಟೀಲ

ಹಾವೇರಿ ಜಿಲ್ಲೆಯಲ್ಲಿ ನಿಯಂತ್ರಣ ತಪ್ಪಿದ ಡೆಂಗ್ಯೂ: ರವೀಂದ್ರಗೌಡ  ಪಾಟೀಲ

ರಾಣೇಬೆನ್ನುರು 01: ಜಿಲ್ಲೆಯಲ್ಲಿ ವ್ಯಾಪಕವಾಗಿ ಮಾರಣಾಂತಿಕ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲೆಯ ರೋಗಿಗಳು ದಾವಣಗೆರೆ, ಮಣಿಪಾಲ, ಮಂಗಳೂರಿಗೆ ತೆರಳುತ್ತಿದ್ದಾರೆ. ಈಗಾಗಲೆ ಹಾವೇರಿ ಜಿಲ್ಲೆಯ ಸಾವಿರಾರು ರೋಗಿಗಳು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಾವೇರಿ ಜಿಲ್ಲೆಯ ಆರೋಗ್ಯ ಇಲಾಖೆಯವರು ಈ ಪ್ರಕರಣಗಳ ಸಂಖ್ಯೆಯನ್ನು ಗೌಪ್ಯವಾಗಿ ಇಟ್ಟಿರುವುದರ ಜೊತೆಗೆ ಕಾಯಿಲೆ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ಜರುಗಿಸದೆ ಗಾಡ ನಿದ್ರೆಯಲ್ಲಿದ್ದಾರೆಂದು ರೈತ ಮುಖಂಡ ರವೀಂದ್ರಗೌಡ  ಪಾಟೀಲ ಆರೋಪಿಸುವುದರ ಜೊತೆಗೆ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.  

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಎಲ್ಲಾ ತಾಲೂಕಾ ಆರೋಗ್ಯಾಧಿಕಾರಿಗಳೊಂದಿಗೆ ಯುದ್ಯೋಪಾಧಿಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಮರ ಸಾರಬೇಕಾದ ಡಿ.ಎಚ್‌.ಓ ಡಾಽಽ ಜಯಾನಂದರವರೆ ಆಮೆ ನಡಿಗೆಯಲ್ಲಿದ್ದಾರೆ. ನಮಗೂ ಡೆಂಗ್ಯೂಗು ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಇಂಥಹ ನಿರ್ಲಕ್ಷ್ಯತನವೇ ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಸಾವಿರಾರು ಅಮಾಯಕ ಜನರು ಕೊರೊನಾ ಸೊಂಕಿಗೆ ಬಲಿಯಾದರೆಂದು ಕಹಿ ಘಟನೆ ನೆನೆಸಿಕೊಂಡು ಅವರು ನಿರ್ಲಕ್ಷ ವಹಿಸಿದರೆ ಜಿಲ್ಲೆಯ ಎಲ್ಲಾ ತಾಲೂಕಾ ಆರೋಗ್ಯ ಕೇಂದ್ರಗಳಿಗೆ ಬೀಗ ಜಡೆಯಲಾಗುವುದೆಂದು ಪಾಟೀಲರು ಎಚ್ಚರಿಸಿದ್ದಾರೆ. 


ಸುದ್ದಿ ಓದಿ