ಚಳಗೇರಿಯಲ್ಲಿ ಡೆಂಗ್ಯೂ ಪ್ರಕರಣ: ಬಾಲಕನೂರ್ವನ ಸಾವು ರೊಚ್ಚಿಗೆದ್ದ ನಾಗರಿಕರು
ರಾಣೇಬೆನ್ನೂರ 09: ತಾಲೂಕಿನ ಚಳಗೇರಿ ಗ್ರಾಮದ ಹರಿಜನ ಕೇರಿಯ ಲ್ಲಿ ಡೆಂಗ್ಯೂ ಪ್ರಕರಣದಿಂದ, ಬಾಲಕನ ಸಾವು ಕಂಡಿರದಾಗಿ ಆರೋಪಿಸಿದ ಅಲ್ಲಿನ ನಾಗರಿಕರು ಆರೋಗ್ಯ ಇಲಾಖೆ ನೀರೀಕ್ಷತನವೇ ಇದಕ್ಕೆ ಕಾರಣವೆಂದು ಬಲವಾಗಿ ಆರೋಪಿಸಿ, ಸೌಮ್ಯ ಪ್ರತಿಭಟನೆಗೆ ಮುಂದಾಗಿದ್ದ ಘಟನೆ ಸೋಮವಾರ ನಡೆದಿದೆ.
ಸ್ಥಳಕ್ಕೆ ಧಾವಿಸಿದ್ದ, ದೇವರಗುಡ್ಡದ ಸರ್ಕಾರಿ ಆಸ್ಪತ್ರೆಯ ವೈದ್ಯರೊಂದರಿಗೆ ಸ್ಥಳಿಯ ನಾಗರಿಕರು, ಮಾತಿನ ಚಕಮಕಿಯಲ್ಲಿ ಘರ್ಷಣೆಗಿಳಿದಿರುವು ದು, ಕಂಡುಬಂದಿತು. ಚಳಗೇರಿ ಗ್ರಾಮದ 14 ವರ್ಷದ ಬಾಲಕ ಧನುಷ್ ಅಡಿವೆಪ್ಪ ಹೊನ್ನಕ್ಕಳವರ್ ಎಂಬಾತನೇ ಸಾವು ಕಂಡಿರುವುದಾಗಿ, ಹೇಳಲಾಗಿದೆ. ಬಾಲಕನಿಗೆ ಜುಲೈ 1 ರಂದು ಜ್ವರ ಕಾಣಿಸಿಕೊಂಡಿದ್ದು, ಆತನಿಗೆ ಆಯುಷ್ ವೈದ್ಯರಲ್ಲಿ ಚಿಕಿತ್ಸೆಗೊಳಿಸಲಾಗಿದ್ದು, ಅಲ್ಲಿ ಗುಣವಾಗದ ಕಾರಣ ರಾಣೆಬೆನ್ನೂರಿನ ಮಕ್ಕಳ ತಜ್ಞ ವೈದ್ಯರಲ್ಲಿ ತೋರಿಸಿದಾಗ, ಅವರು ದಾವಣಗೆರೆಗೆ ಕರೆದುಕೊಂಡು ಹೋಗಲು ಹೇಳಿದ್ದರಿಂದ ಅಲ್ಲಿ ಬಾಪುಜಿ ಆಸ್ಪತ್ರೆಗೆ ಸೇರಿಸಲಾಗಿದೆ, ಬಾಲಕ ಖುಷಿದು ಬಿದ್ದು ಸಾವು ಕಂಡಿದ್ದಾನೆ. ಎಂದು, ಮಾಧ್ಯಮದವರು ಕುಟುಂಬದ ಸದಸ್ಯರು ಆರೋಪಿಸಿದರು.
ಡೆಂಗ್ಯೂ ಪ್ರಕರಣದಿಂದ ಸಾವು ಕಂಡಿದ್ದು, ತಿಳಿಯಬೇಕಾದರೆ, ಅದರದೇ ಆದ ಪರೀಕ್ಷಾ ಮಾನದಂಡಗಳಿವೆ. ಈಗಾಗಲೇ ವೈದ್ಯಕೀಯ ಪರೀಶೀಲನೆಗೆ ಕಳುಹಿಸಲಾಗಿದೆ. ಮಾಹಿತಿ ಬಂದ ನಂತರ ಸಾವು ಹೇಗಾಯಿತು ಎನ್ನುವುದನ್ನು ತಿಳಿಯಲು ಸಾಧ್ಯವಿದೆ ಎಂದು ಸ್ಥಳಕ್ಕೆ ಧಾವಿಸಿದ ವೈದ್ಯರು ಮಾಧ್ಯಮದವರಿಗೆ ಪ್ರತಿಕ್ರಿಯೆಸಿದರು.