ಬೈಲಹೊಂಗಲ

ಬೆಳೆಗಳಿಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪರಣೆ ಪ್ರಾತ್ಯಕ್ಷಿಕೆಗೆ ಚಾಲನೆ

ಬೆಳೆಗಳಿಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪರಣೆ ಪ್ರಾತ್ಯಕ್ಷಿಕೆಗೆ ಚಾಲನೆ

ಲೋಕದರ್ಶನ ವರದಿ 


ಬೈಲಹೊಂಗಲ 21: ತಾಲೂಕಿನ ಆನಿಗೋಳ ಗ್ರಾಮದಲ್ಲಿ  ಕೃಷಿ ಇಲಾಖೆ ಹಾಗೂ ವರ್ಷಾ ಅಸೋಸಿಯೇಟ್ಸ ಇವರ ಸಹಯೋಗದೊಂದಿಗೆ ಪ್ರಪಥಮವಾಗಿ ನೂತನ ಆವಿಷ್ಕಾರ, ಹೊಸ ತಂತ್ರಜ್ಞಾನವಾದ ಬೆಳೆಗಳಿಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪರನೆಯ ಪ್ರಾತ್ಯಕ್ಷಿತೆಗೆ ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ಉಪಕೃಷಿ ನಿರ್ದೇಶಕ ಎಚ್‌.ಡಿ.ಕೋಳೆಕರ ಅವರು ಆಗಮಿಸಿ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. 

ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಬೆಳೆಗಳಲ್ಲಿ ಡ್ರೊನ್ ಸಿಂಪರಣೆಯ ಮಹತ್ವ ಹಾಗೂ ವೈಶಿಷ್ಟತೆಗಳನ್ನು ನೆರೆದಂತ ರೈತರಿಗೆ ತಿಳಿಸಿಕೊಟ್ಟರು. 

    ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಉಪಕೃಷಿ ನಿರ್ದೇಶಕ ಎಚ್‌.ಡಿ.ಕೋಳೆಕರ ಮಾತನಾಡಿ ಸಧ್ಯದ ಬೆಳೆ ಪರಿಸ್ಥಿತಿಯನ್ನು ನಿಭಾಯಿಸುವುದರ ಕುರಿತು ಮತ್ತು ನೂತನ ತಂತ್ರಜ್ಞಾನವಾದ ಡ್ರೋನ ಮೂಲಕ ಕೀಟನಾಶಕ ಸಿಂಪರಣೆ ಬಳಸುವುದರ ಉಪಯೋಗಗಳು ಮತ್ತು ಮುಂದಿನ ದಿನಗಳಲ್ಲಿ ಈ ಒಂದು ತಂತ್ರಜ್ಞಾನ ಅತಿ ಹೆಚ್ಚು ಪ್ರಚಲಿತವಾಗುತ್ತದೆ ಹಾಗೂ ರೈತರಿಗೆ ಕೂಲಿ ಆಳುಗಳ ಅಭಾವವಿದ್ದು ಈ ತಂತ್ರಜ್ಞಾನವನ್ನು ಬಳಸುವುದರಿಂದ ರೈತರು ಈ ತೊಂದರೆಯಿಂದ ಮುಕ್ತರಾಗಬಹುದು ಎಂದು ತಿಳಿಸಿದರು.  

  ವರ್ಷಾ ಅಸೋಸಿಯೇಟ್ಸ ಚಿತ್ರದುರ್ಗ ಸಂಸ್ಥೆಯ ಪ್ರತಿನಿಧಿಗಳು ಮಾತನಾಡಿ ಒಂದು ಎಕರೆಗೆ ಡ್ರೋನ ಮೂಲಕ ಕೀಟನಾಶಕ ಸಿಂಪರಣೆಯ ಖರ್ಚು ವೆಚ್ಚ ಹಾಗೂ ಸಮಯದ ಕುರಿತಾಗಿ ತಿಳಿಸಿದರು. 

   ಕೃಷಿ ಅಧಿಕಾರಿಗಳಾದ ದೀಪಕ. ಕೌಜಲಗಿ,ಎಸ್‌.ಎಫ.ಪೂಜೆರ ಬಿ.ಎಸ್‌.ಅಂಗಡಿ, ವ್ಹಿ.ಪಿ.ಈಟಿ, ಬಿ.ಕೆ.ಜಮಾದರ, ಎಸ್‌.ಎಸ್‌.ಮಾಳಗಿ. ಆತ್ಮ ತಾಂತ್ರಿಕ ವ್ಯವಸ್ಥಾಪಕರಾದ ಚಂದ್ರಕಾಂತ ಮರಡಿ ಆನಿಗೋಳ ಸುತ್ತಮುತ್ತಲಿನ ರೈತರು, ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ