ದುರ್ವಾಸನೆಯುಳ್ಳ ನೀರನ್ನು ಶುದ್ಧೀಕರಿಸಬೇಕು ಒತ್ತಾಯಿಸಿ ಮನವಿ
ರಾಣಿಬೆನ್ನೂರ 16: ತಾಲೂಕಿನ ಹನುಮನಹಳ್ಳಿ ಹತ್ತಿರ ನಿರ್ಮಾಣಗೊಂಡಿರುವ ಗೋಲ್ಡನ್ ಹ್ಯಾಚರೀಸ್ ಮತ್ತು ಗ್ರೀನ್ ಎನರ್ಜಿ ಬಯೋ ರಿಪೈನ್ರೈಜ್ ಕಂಪನಿಗಳು ಹೊರಸೂಸುವ ರಾಸಾಯನಿಕ ಕಲ್ಮಷಯುಕ್ತ ಮತ್ತು ಕೆಟ್ಟ ದುರ್ವಾಸನೆಯುಳ್ಳ ನೀರನ್ನು ಶುದ್ಧೀಕರಿಸಬೇಕು ಎಂದು ಒತ್ತಾಯಿಸಿ. ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಕಂಪನಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಕಂಪನಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನ ಹನುಮನಹಳ್ಳಿ ಹತ್ತಿರ ಬೃಹದಾಕಾರದಲ್ಲಿ ನಿರ್ಮಾಣಗೊಂಡಿರುವ ಗೋಲ್ಡನ್ ಹ್ಯಾಚರೀಸ್ ಮತ್ತು ಗ್ರೀನ್ ಎನರ್ಜಿ ಬಯೋ ಪ್ರೈ. ಲಿ. ಎಂಬ ಎರಡೂ ಕಂಪನಿಗಳು ಹೊರಸೂಸುವ ರಾಸಾಯನಿಕ ಕಲ್ಮಷಯುಕ್ತ ಮತ್ತು ಕೆಟ್ಟ ದುರ್ವಾಸನೆಯುಳ್ಳ ನೀರನ್ನು ಕಂಪನಿಯವರು ನೇರವಾಗಿ ಕುಮದ್ವತಿ ನದಿಗೆ ಬಿಡುವದರಿಂದ ಈ ನದಿ ತುಂಭದ್ರಾ ನದಿಗೆ ಸೇರುತ್ತದೆ. ತಾಲೂಕಿನ ಮುದೇನೂರ ಗ್ರಾಮದ ಬಳಿ ಜಾಕ್ ವಾಲ್ ಮೂಲಕ ರಾಣಿಬೆನ್ನೂರ ನಗರ, ಬ್ಯಾಡಗಿ ಮತ್ತು ಹಲಗೇರಿ ಗ್ರಾಮಕ್ಕೆ ಕುಡಿಯಿವ ನೀರು ಸರಬರಾಜು ಮಾಡಲಾಗುತ್ತಿದ್ದು ಈ ನೀರನ್ನು ಕುಡಿಯುವ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಆದಕಾರಣ ತಕ್ಷಣ ನೀರನ್ನು ಶುದ್ಧೀಕರಿಸಿ ಬಿಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ರೈತರು ನದಿಯ ನೀರನ್ನು ತಮ್ಮ ಹೊಲಗಳಿಗೆ ಹಾಯಿಸುವುದರಿಂದ ಈ ರಾಸಾಯನಿಕಯುಕ್ತ ನೀರು ನದಿಗಳ ನೀರಿನೊಂದಿಗೆ ಸೇರಿ ರೈತರ ಫಲವತ್ತಾದ ಕೃಷಿ ಭೂಮಿ ಬರಡಾಗುತ್ತಿರುವ ಬಗ್ಗೆ ರೈತರಿಗೆ ಆತಂಕ ಒಂದು ಕಡೆಯಾದರೆ ಈ ದುರ್ವಾಸನೆಯುಳ್ಳ ನೀರಿನಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಎಲ್ಲಾ ಲಕ್ಷ್ಮಣಗಳು ಕಂಡು ಬುರತ್ತಿದ್ದು ಕೃಷಿಕರು, ಕೃಷಿ ಕಾರ್ಮಿಕರು ದುರ್ವಾಸನೆಗೆ ಹೆದರಿ ಕೃಷಿ ಚಟುವಟಿಕೆಯನ್ನೇ ಬಿಟ್ಟು ಗುಳೇ ಹೋಗುವ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿದರು.
ಕೂಡಲೇ ಜಿಲ್ಲಾಡಳಿತ ಪರಿಸರ ಮತ್ತು ವಾಯುಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ಕೂಡಲೇ ಈ ಬಗ್ಗೆ ತುರ್ತುಕ್ರಮ ಜರುಗಿಸಿ ಕಂಪನಿಯವರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಬೇಕು, ಯಾವ ತಪ್ಪೂ ಮಾಡದ ಸ್ಥಳಿಯರು ಕಂಪನಿಯ ಈ ನಡೆಯಿಂದ ಅನಾರೋಗ್ಯಕ್ಕೆ ತುತ್ತಾಗಬೇಕಾಗಿದೆ ಜನರ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮವಾಗದಂತೆ ಈ ಕೂಡಲೇ ಎಚ್ಚರ ವಹಿಸಬೇಕು ಎಂದು ಕಬ್ಬಾರ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಕುಪ್ಪೇಲೂರ ನಾಡಕಚೇರಿಯ ಉಪತಹಶೀಲ್ದಾರ ಎನ್.ಎಸ್. ಕಡೂರ. ಕಂದಾತ ನೀರೀಕ್ಷಕ ಮಂಜುನಾಥ ಕೆಂಚರಡ್ಡಿ, ಪೊಲೀಸ್ ಮಾರುತಿ ಬಣಕಾರ ಆಗಮಿಸಿ ಕಂಪನಿ ಅಧಿಕಾರಿಗಳಿಗೆ ಶುದ್ಧೀಕರಿಸಿ ನೀರು ಬಿಡಲು ತಾಕೀತು ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ಪ್ರಕಾಶ ಸಿರಗೇರಿ, ತಿಪ್ಪಣ್ಣ ಪೂಜಾರ, ಶಿವು ಮುಲ್ಕಿಗೌಡ್ರ, ಹನುಮಂತಪ್ಪ ಹೊಸಪೇಟೆ, ಶಂಕ್ರ್ಪ ದೊಣಗೊಂದಿ, ಶಂಕ್ರಗೌಡ ಗಂಗನಗೌಡ್ರ, ಗುರುಶಾಂತಪ್ಪ ಬಿದರಿ, ಬಸಪ್ಪ ಬಾರ್ಕಿ, ಈರ್ಪ ದ್ಯಾವಣ್ಣನವರ, ಹಾಲೇಶ ಬುಳ್ಳಾಪುರ, ನಾಗಪ್ಪ ಪೂಜಾರ ಸೇರಿದಂತೆ ರೈತರು ಪ್ರತಿಭಟನೆಯಲ್ಲಿ ಇದ್ದರು.