ಭೂಮಿ ಹಕ್ಕು ಪತ್ರ ನೀಡಲು ಆಗ್ರಹ
ಧಾರವಾಡ,20: ಧಾರವಾಡ ತಾಲೂಕಿನ ಕಲ್ಲೂರ ಗ್ರಾಮದ ಭೂಹೀನ ರೈತರು ಸರ್ವೆ ನಂ. 374 ರಿಂದ 378ಗಳಲ್ಲಿ ಕೃಷಿ ಭೂಮಿಯನ್ನು ಕಳೆದ 40-50 ವರ್ಷದಿಂದ ಭೂಮಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಸರಕಾರದ ಆದೇಶದಂತೆ ನಮೂನೆ 57 ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಹಿಂದೆ ನಮೂನೆ 50 ಮತ್ತು 53ರಲ್ಲಿಯೂ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದು ಇರುತ್ತದೆ. ಆದರೇ ಈ ವರೆಗೂ ಆ ಅರ್ಜಿಗಳನ್ನು ಪರಶೀಲಿಸಿ ಭೂಮಿ ಹಕ್ಕು ಪತ್ರ ನೀಡಿರುವುದಿಲ್ಲ. ಈ ಹಿನ್ನಲೆಯಲ್ಲಿ ವಿಳಂಭ ಮಾಡದೇ ಇವರ ಅರ್ಜಿಗಳನ್ನು ಪರಶೀಲಿಸಿ ಹಕ್ಕುಪತ್ರವನ್ನು ನೀಡಲು ಜಿಲ್ಲಾಡಳಿತಕ್ಕೆ ಕ್ರಮವಹಿಸುವಂತೆ ಸರಕಾರ ಸೂಚಿಸಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ಪ್ರಾಂತ ರೈತ ಸಂಘ ಧಾರವಾಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ದಾಖಲೆ ಸಮೇತ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಬಿ.ಎಸ್. ಸೊಪ್ಪಿನ, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಮುಖಂಡರಾದ ವಿಠ್ಠಪ್ಪ ಭಂಡಾರಿ, ಮಹಾಬಳೇಶ್ವರ ಸೊಗಲದ ಮುಂತಾದವರಿದ್ದರು.