ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಒತ್ತಾಯ
ಶಿಗ್ಗಾವಿ 31 : ಪಟ್ಟಣದ ಹಳೆ ಬಸ್ ನಿಲ್ದಾಣದ ಮುಂಬಾಗದಲ್ಲಿರುವ ಜನತಾ ಬಜಾರ್ ಆವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪನೆಗೆ ಒತ್ತಾಯಿಸಿ ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಸ್ಥಳಕ್ಕೆ ನಾಲ್ಕನೇ ದಿನವಾದ ಗುರುವಾರದಂದು ಎಐಐಸಿಸಿ ಸದಸ್ಯ ಹಾಗೂ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮಗೆ ಸಂವಿಧಾನ ನೀಡಿದ ಮಹಾನ್ ವ್ಯಕ್ತಿಯ ಪುತ್ಥಳಿ ನಿರ್ಮಾಣಕ್ಕೆ ಈ ರೀತಿ ಮೀನಾಮೇಶ ಎಣಿಸಿದರೇ ಹೇಗೆ ? ಇದು ಒಳ್ಳೆಯ ಬೆಳವಣಿಗೆಯಲ್ಲ ಇಲ್ಲಿಯ ಶಾಸಕರು ಮತ್ತು ಸಂಸದರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಲ್ಲಿಯೇ ಚುನಾಯಿತರಾಗಿದ್ದಾರೆ ಅದನ್ನು ಮರೆಯಬಾರದು ಅಲ್ಲದೇ ಇಲ್ಲಿ ದಲಿತ ಸಂಘಟನೆಯ ಮುಖಂಡರುಗಳು ಯಾವ ಪಕ್ಷದಲ್ಲಿಯೇ ಇರಿ ಆದರೆ ಅಂಬೇಡ್ಕರ್ ಅವರ ಋಣದಲ್ಲಿದ್ದೀರಿ ಮೂರ್ತಿ ಸ್ಥಾಪನೆಗೆ ಒಗ್ಗಟ್ಟಾಗಬೇಕು ಎಂದು ಮನವಿ ಮಾಡಿದರು.
ಮಹಾನಾಯಕ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪನೆಗೆ ಹೋರಾಟ ಮತ್ತು ಧರಣಿಯಂತಹ ಕೈಗೊಳ್ಳುವ ಮಟ್ಟಕ್ಕೆ ಈ ಕಾರ್ಯವನ್ನು ಒಯ್ಯುವುದು ಸರಿಯಲ್ಲ, ಇಷ್ಟಕ್ಕೂ ಇದು ಸರಕಾರದ ಮತ್ತು ಸಂಭದಿಸಿದ ಅದಿಕಾರಿಗಳ ಕಿವಿಗೆ ಬೀಳದಿರುವುದು ವಿಷಾದದ ಸಂಗತಿಯಾಗಿದೆ ಎಂದು ವಿಷಾದಿಸಿ, ಕೂಡಲೇ ಮೂರ್ತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಹಾಗೂ ಧರಣಿನಿರತ ಹನುಮಂತ ಬಂಡಿವಡ್ಡರ, ಧಲಿತ ಮಹಿಳಾ ಮುಖಂಡೆ ಬಾಬಕ್ಕ ಬಳ್ಳಾರಿ, ವೆಂಕಟೇಶ ಬಂಡಿವಡ್ಡರ ಸೇರಿದಂತೆ ಇತರರು ಇದ್ದರು.