ಹಾಲುಮತ ಸಮುದಾಯ ಎಸ್.ಟಿಗೆ ಸೇರ್ಪಡೆ ಮಾಡಲು ಆಗ್ರಹ
ಘಟಪ್ರಭಾ 03: ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯಕ್ಕಾಗಿ ಕುರುಬರನ್ನು ಎಸ್.ಟಿ ಗೆ ಸೇರ್ಪಡೆ ಮಾಡಬೇಕು ನಿರ್ಲಕ್ಷಿಸಿದರೆ ಸಂಘಟಿತ ಕುರುಬ ಸಮುದಾಯದಿಂದ ರಾಜಕೀಯ ಪಕ್ಷಗಳು ಬಹುದೊಡ್ಡ ಪೆಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರಡಿ ಮೌರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಫೆ.7ರಂದು ಬೆಂಗಳೂರಿನಲ್ಲಿ ನಡೆಯುವ ಕುರುಬರ ಎಸ್.ಟಿ ಮೀಸಲಾತಿ ಸಮಾವೇಶದಲ್ಲಿ 15 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ. ಸಂಕ್ರಮಣದಿಂದ ಕಾಗಿನೆಲೆ ಕನಕಗುರು ಪೀಠದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಹೊರಟ್ಟಿದ್ದು, ಕುರುಬರಿಗೆ ಎಸ್.ಟಿ ಮೀಸಲಾತಿಬೇಕು ಎಂಬ ಕೂಗನ್ನು ಸಂವಾದ, ಜನಾಭಿಪ್ರಾಯ, ಸಭೆಗಳು, ಸಮಾವೇಶ, ಧರಣಿಗಳ ಮೂಲಕ ಬಿಸಿ ಮುಟ್ಟಿಸಿದ್ದು, ಇನ್ನು ಹೋರಾಟ ರೂಪ ಉಗ್ರತೆಯಾಗುವುದು ಅನಿವಾರ್ಯವಾಗಿದೆ ಎಂದರು.
ಆ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವೀರು ಮೋಡಿ, ರಾಮೋಜಿ ಮಾಳಗಿ, ಪ್ರಕಾಶ ಪಾಟೀಲ, ಸಿದ್ದು ದೇವರಮನಿ, ಜ್ಞಾನೇಶ್ವರ ಭಂಗೇರ, ಕಲಗೌಡ ಖಿಲಾರಿ, ಸಿದ್ದು ಮರಡಿ, ಸಿದ್ದು ವಡೇರ, ಬಸವರಾಜ ಸರವರ ಸಂಘಟನೆಯ ಅನೇಕರು ಉಪಸ್ಥಿತರಿದ್ದರು.