ರಾಣೆಬೆನ್ನೂರ

ತುರ್ತಾಗಿ ಅತಿಕ್ರಮಣ ಜಾಗೆ ತೆರವುಗೊಳಿಸಬೇಕೆಂದು ಆಗ್ರಹ

ತುರ್ತಾಗಿ ಅತಿಕ್ರಮಣ ಜಾಗೆ ತೆರವುಗೊಳಿಸಬೇಕೆಂದು ಆಗ್ರಹ

ರಾಣೇಬೆನ್ನೂರ 11:  ಇಲ್ಲಿನ ಕುರುಬಗೇರಿಯ ಕಾಕಿ ಓಣಿಯಲ್ಲಿ (ಸಿಟಿಎಸ್ ನಂ 3047ರಲ್ಲಿ) ಪ್ರಕಾಶ  ಶೇಖಪ್ಪ ಮೈಲಾರ ಎಂಬುವವರು ಎರಡೂ ಕಡೆಯ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಅನಧಿಕೃತವಾಗಿ ಮನೆ ನಿರ್ಮಿಸಿದ್ದರೂ ಸಹ  ನಗರಸಭೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದು ತುರ್ತಾಗಿ ಅತಿಕ್ರಮಣ ಜಾಗೆ ತೆರವುಗೊಳಿಸಬೇಕು ಎಂದು ನಾಗರೀಕರ ಪರವಾಗಿ ಸಮಾಜ ಸೇವಕ ಶ್ರೀನಿವಾಸ ಡಿ ಕಾಕಿ ಮತ್ತಿತರರು ಆಗ್ರಹಿಸಿದ್ದಾರೆ.    

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಗರಸಭೆಗೆ ಅನೇಕ  ಬಾರಿ ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ಆಕ್ಷೇಪ ವ್ಯಕ್ತಪಡಿಸಿದರೂ ಸಹ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿಯ ಸಂಗತಿಯಾಗದೆ. ಸಾರ್ವಜನಿಕರ ಪರವಾಗಿ ಮನವಿ ಪತ್ರ ಅರ​‍್ಿಸಿದರೂ ಏನೂ ಕ್ರಮ ಕೈಗೊಳ್ಳದ ನಗರಸಭೆ ಅಧಿಕಾರಿಗಳು ದಿವ್ಯ ನಡುವೆ ನಿರ್ಲಕ್ಷ  ತಾಳಿದರೆಂದು  ಸ್ಥಳೀಯ ನಿವಾಸಿಗಳು  ಆತಂಕ ವ್ಯಕ್ತಪಡಿಸಿದ್ದಾರೆ  ಎಂದು ಅವರು ತಿಳಿಸಿದರು. ನಗರಸಭೆಯಿಂದ ಯಾವುದೇ ತೆರನಾದ ಪರವಾನಿಗೆ ಪಡೆಯದೇ ಕಟ್ಟಡ ನಿರ್ಮಿಸಿದ್ದು, ರಸ್ತೆಯ ಇಕ್ಕೆಲಗಳಲ್ಲೂ ಅತಿಕ್ರಮಣ ಮಾಡಿಕೊಂಡಿದ್ದು, ಇಲ್ಲಿನ ರಸ್ತೆಯು ಅತ್ಯಂತ ಕಿರಿದಾಗಿದ್ದು, ಅತಿಕ್ರಮಣ ಮಾಡಿ ನಿರ್ಮಿಸಲಾಗುತ್ತಿರುವ ಕಟ್ಟಡದಿಂದಾಗಿ ದ್ವಿಚಕ್ರ ವಾಹನಗಳು, ಟ್ರ್ಯಕ್ಟರ, ಅಟೋ ಸೇರಿದಂತೆ ಇತರ ವಾಹನಗಳು ಕೂಡ ಸಂಚರಿಸಲು ಪ್ರಯಾಸ ಪಡುವಂತಾಗಿದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪೌರಾಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕು. ತೆರವಾಗಿರುವ ರಸ್ತೆ ಜಾಗ ತೆರವುಗೊಳಿಸಿ ನಾಗರೀಕರ ಹಿತ ಕಾಪಾಡಬೇಕು.  

ಹಳೆ ಮನೆಯನ್ನೇ ಕೆಡವಿ ಹೊಸ ಮನೆ ನಿರ್ಮಾಣವಾಗುವ ಆರಂಭದಲ್ಲಿಯೇ ಮನವಿ ಪತ್ರ ನೀಡಿದರೂ ನಗರಸಭೆ ಕ್ರಮ ಕೈಗೊಂಡಿಲ್ಲ.    ಈ ಬಗ್ಗೆ ಐದಾರು ಬಾರಿ ಪೊಲೀಸ್ ರಿಗೂ ಮಾಹಿತಿ ನಡುವೆ ಡಿದರೂ ಏನೂ ಪರಿಹಾರ ಸಿಕ್ಕಿಲ್ಲ. ಜೊತೆಗೆ ಪ್ರಕಾಶರ ಹೆಂಡತಿ ಉಮಾ ಅಶ್ಲೀಲ ಪದ ಉಪಯೋಗಿಸಿ ಕೂಗಾಡುತ್ತಿದ್ದು, ಇದರಿಂದ ಮಾನಸಿಕ ಚಿತ್ರಹಿಂಸೆ ಆಗುತ್ತಿದೆ.    ನಗರಸಭೆ ಮತ್ತು ಪೊಲೀಸರ ಮೇಲೆ ಇನ್ನೂ ನಂಬಿಕೆ ಇದ್ದು, ಒತ್ತುವರಿ ಜಾಗೆ ತೆರವಾಗದಿದ್ದರೆ ಅನಿವಾರ್ಯವಾಗಿ ನ್ಯಾಯಾಲಯದ ಹಾಗೂ ಲೋಕಾಯುಕ್ತರ ಮೊರೆ ಹೋಗಲು ನಿರ್ಧರಿಸುವುದಾಗಿ ಕಾಕಿಯವರು ಹೇಳಿದರು.     ಶೀಘ್ರವೇ ನಗರಸಭೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದುಶ್ರೀನಿವಾಸ ಕಾಕಿ ಆಗ್ರಹಿಸಿದರು. ಗೋಷ್ಠಿಯಲ್ಲಿ ಶಿವಾನಂದ ಬಗಾದಿ, ಶಿವಶಂಕರ.ಕೆ, ವೆಂಕಟೇಶ ಕಾಕಿ, ಪ್ರಭುಲಿಂಗಪ್ಪ ಹಲಗೇರಿ, ಹನುಮಂತಪ್ಪ, ಅಮಾಸಿ, ಪಾಂಡಪ್ಪ ಸುರಹೊನ್ನಿ, ಹನುಮಂತಪ್ಪ ಕುಲಕರ್ಣಿ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ