ಕಾಗವಾಡ

ನಿಶ್ಚಿತ ಪಿಂಚಣಿ ಜಾರಿಗೆ ಒತ್ತಾಯಿಸಿ ಶಿಕ್ಷಕರಿಂದ ಮನವಿ

ನಿಶ್ಚಿತ ಪಿಂಚಣಿ ಜಾರಿಗೆ ಒತ್ತಾಯಿಸಿ ಶಿಕ್ಷಕರಿಂದ ಮನವಿ
ಕಾಗವಾಡ 1 ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ಇವರಿಗೆ ಶಿಕ್ಷಕರು ಮನವಿ ಅರ್ಪಿಸುತ್ತಿರುವಾಗ.

ಕಾಗವಾಡ 06: ರಾಜ್ಯ ಸರಕಾರದ ಶಿಕ್ಷಣ ಇಲಾಖೆ ವತಿಯಿಂದ 2005-06ನೇ ಸಾಲಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಾತಿಗೊಂಡ ಶಿಕ್ಷಕರಿಗೆ ಹಳೆಯ ಶಿಕ್ಷಕರಂತೆ ನಿಶ್ಚಿತ ಪಿಂಚಣಿ ಜಾರಿಗೊಳಿಸಬೇಕೆಂದು ಕಾಗವಾಡ ತಾಲೂಕಿನ ಶಾಲಾ ಶಿಕ್ಷಕರ ಸಂಘಟನೆ ವತಿಯಿಂದ ಕಾಗವಾಡ ಬಿಇಓ ಎಂ.ಆರ್.ಮುಂಜೆ ಅವರಿಗೆ ಶನಿವಾರ ಮನವಿ ಅರ್ಪಿಸಿದರು.

ಮನವಿಯಲ್ಲಿ 2005-06ನೇ ಸಾಲಿನಲ್ಲಿ ಶಿಕ್ಷಕರಾಗಿ ನೇಮಕಾತಿಗೊಂಡ ಕಾಗವಾಡ ತಾಲೂಕಿನ 17 ಶಿಕ್ಷಕರು ನಿಶ್ಚಿತ ಪಿಂಚಣಿಯಿಂದ ದೂರು ಉಳಿದಿದ್ದಾರೆ. ರಾಜ್ಯ ಸರಕಾರಕ್ಕೆ ಹಲವಾರು ಬಾರಿ ಸಂಘಟನೆಗಳ ವತಿಯಿಂದ ಮನವಿ ಅರ್ಪಿಸಲಾಗಿದ್ದು, ಈ ಬಗ್ಗೆ ನಿರ್ಣಯ ಕೈಗೊಂಡಿಲ್ಲಾ. ಇದ್ದರಿಂದ 2005ರ ಪೂರ್ವದಲ್ಲಿ ನೇಮಕಾತಿಗೊಂಡ ಶಿಕ್ಷಕರಿಗೆ ಮಾತ್ರ ನಿಶ್ಚಿತ ಪಿಂಚಣಿ ದೊರೆಯುತ್ತಿದೆ. ಈ ತಾರತಮ್ಯವನ್ನು ದೂರಗೊಳಿಸಿ ಪಿಂಚಣಿ ನೀಡುವ ವ್ಯವಸ್ಥೆಯಾಗಬೇಕೆಂದು ಕೇಳಿಕೊಂಡು ಮನವಿ ಅರ್ಪಿಸಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕಾಗವಾಡ ಶಾಖೆ ಅಧ್ಯಕ್ಷ ಗೌಡಪ್ಪ ಸಡ್ಡಿ ಇವರು ಮನವಿ ಅರ್ಪಿಸಿ, ಶಿಕ್ಷಕರ ಬೇಡಿಕೆ ಸೂಕ್ತವಾಗಿದ್ದು. ಇವುಗಳಿಗೆ ರಾಜ್ಯ ಸರಕಾರ ಸ್ಪಂದಿಸಬೇಕೆಂದರು.

ಕಾಗವಾಡ ಬಿಇಓ ಎಂ.ಆರ್.ಮುಂಜೆ ಮನವಿ ಸ್ವೀಕರಿಸಿ, ಮೇಲಾಧಿಕಾರಿಗಳಿಗೆ ಮನವಿ ಮುಟ್ಟಿಸುವುದಾಗಿ ಹೇಳಿದರು.

ಶಿಕ್ಷಕರಾದ ಟಿ.ಬಿ.ತ್ರೀಕಾಣಿ, ಎಸ್.ಎ.ಸಂಗನ್ನವರ, ಎಸ್.ಎಲ್.ಸನದಿ, ಎನ್.ಎಲ್.ಕಲಾವಂತ, ಐ.ಎಸ್.ಬಾಗೆವಾಡಿ, ಎಚ್.ಯೂ.ಜೀರಗಾಳ, ಜೆ.ಜೆ.ಪಟೇಲ, ಎಸ್.ಎಸ್.ಭಜಂತ್ರಿ, ಬಿ.ಎಲ್.ಭಜಂತ್ರಿ, ಆರ್.ಎ.ಕೋಳಿ, ಟಿ.ಎ.ವಡ್ಡರ, ಬಿ.ಆರ್.ಜಾಧವ, ದೈಹಿಕ ಶಿಕ್ಷಣ ಸಂಯೋಜಕ ಸಿ.ಎಂ.ಸಾಂಗಲೆ, ಎಂ.ಎನ್.ಕಲ್ಲೂರ, ಸೇರಿದಂತೆ ಅನೇಕರು ಇದ್ದರು.

ಸುದ್ದಿ ಓದಿ