ರಾಣೆಬೆನ್ನೂರ

ರೈತರ ಆತ್ಮಹತ್ಯೆಗಳ ಪರಿಹಾರಕ್ಕೆ ಸಮಿತಿ ರಚನೆಗೆ ಆಗ್ರಹ

ರೈತರ ಆತ್ಮಹತ್ಯೆಗಳ ಪರಿಹಾರಕ್ಕೆ ಸಮಿತಿ ರಚನೆಗೆ ಆಗ್ರಹ

ರಾಣೇಬೆನ್ನೂರು 30:  ನಾಡಿನಲ್ಲಿ ಮತ್ತು ಜಿಲ್ಲೆಯಲ್ಲಿ ಕೃಷಿಕರ, ರೈತರ ವಿವಿಧ ಸಮಸ್ಯೆಗಳ ಹಿನ್ನೆಲೆಯಲ್ಲಿ, ನಿತ್ಯವೂ ಅಲ್ಲಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪರಿಣಾಮ  ಕುಟುಂಬಗಳು ದುಡಿಯುವ ಯಜಮಾನನ ಕಳೆದುಕೊಂಡು ಅನಾಥರಾಗುತ್ತಿದ್ದಾರೆ. ಆತ್ಮಹತ್ಯೆಗಳನ್ನು ತಡೆಗಟ್ಟಲು ಸತ್ಯಶೋಧನಾ ಸಮಿತಿ ರಚಿಸಬೇಕಾದ ಅಗತ್ಯವಿದೆ ಎಂದು ಹುಲ್ಲತ್ತಿ ಗ್ರಾಮದ  ವಂದೇ ಮಾತರಂ ಯುವಕ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಜಗದೀಶ್ ಕೆರೋಡಿ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ರೈತ ಆತ್ಮಹತ್ಯೆ ತಡೆಗಟ್ಟಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ.ಯಾವುದೇ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುವಂತಹ ಹೇಡಿಗಳಲ್ಲ ಮತ್ತು ಮಾಡಿದ ಸಾಲಕ್ಕೆ ಎಂದು ಹೆದರುವವರಲ್ಲಾ ಕೃಷಿ ಚಟುವಟಿಕೆಗಾಗಿ ಮಾಡಿದ ಸಾಲ ಸರಿಯಾಗಿ ಮಳೆ ಬಾರದೆ,ಅಥವಾ ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ಹಾಗೂ ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ಕಾಣದೆ ತತ್ತರಿಸಿ ಬಡ್ಡಿರೂಪದ ಸಾಲ,ಹೆಚ್ಚುವರಿಯಾಗಿ ರೈತರ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಮಾನಸಿಕವಾಗಿ ಸಾಮಾಜಿಕವಾಗಿ ಮನನೊಂದು ಅಸಹಾಯಕನಾಗಿ ಆತ್ಮಹತ್ಯೆಗೆ ಶರಣಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದ್ದಾರೆ.  

2023 24 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಕೈಕೊಟ್ಟಿವೆ ಹಾಗೂ ರಸಗೊಬ್ಬರಗಳ ಬೆಲೆ ಏರಿಕೆ, ಕೀಟನಾಶಕಗಳ ಬೆಲೆ ಏರಿಕೆ ಇಳುವರಿ ಬಾರದ ಬೀಜೋಪನೇಗಳು ಮತ್ತು ರೈತರು ಬೆಳೆದ ಯಾವುದೇ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆ ಕಾಣದೆ ರೈತ ಸಮುದಾಯ ಕಂಗಾಲಾಗಿದೆ.ಕುಟುಂಬ ನಿರ್ವಹಣೆ, ದಲ್ಲಾಳಿಗಳ ಹಾವಳಿ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟದ ಸುಳಿಗೆ ಸಿಕ್ಕು ನಲುಗಿ ರೈತ ಅಸಾಯಕನಾಗಿ ವಿಧಿ ಇಲ್ಲದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ನಾಡಿನ ರೈತರನ್ನ ಉಳಿಸಿ ಬೆಳೆಸಿಕೊಳ್ಳುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದ್ಯ ಕರ್ತವ್ಯ ಸರ್ಕಾರಗಳು ರೈತ ಸಮುದಾಯವನ್ನು ಕಡೆಗಣಿಸಿದರೆ ದೇಶವು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಓದ್ಯೋಗಿಕವಾಗಿ ಹಿಂದುಳಿದು ದೇಶವು ದುರ್ಬಲ ರಾಷ್ಟ್ರವಾಗುತ್ತದೆ ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಚೈತನ್ಯಕ್ಕಾಗಿ ರೈತ ಸಂಜೀವಿನಿ ಯಂತಹ ಪ್ರಮುಖ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಜಾರಿಗೆ ತಂದು ರೈತರ ಆತ್ಮಸ್ಥೈರ್ಯವನ್ನು ಹೆಚ್ಚಿಸಿ ರೈತನ ಆತ್ಮ ಹತ್ಯೆಯಂತಹ ಅನಿಷ್ಟ ಪ್ರಕರಣಗಳಗೆ ಅಂತ್ಯ ಹಾಡಬೇಕು. ಸರಕಾರಗಳ ಮುಂದಾಗಬೇಕು ಎಂದು ಜಗದೀಶ್ ಕೆರೋಡಿ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 


ಸುದ್ದಿ ಓದಿ