ಶಿಗ್ಗಾವ್

ಜಿತೇಂದ್ರ ಸರಸ್ವತಿ ಸ್ವಾಮೀಜಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಜಿತೇಂದ್ರ ಸರಸ್ವತಿ ಸ್ವಾಮೀಜಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಶಿಗ್ಗಾವಿ 23: ಜಗತ್ ಪ್ರಸಿದ್ಧಿಯಾದ ಹಜರತ್ ಖ್ವಾಜಾ ಗರೀಬ ನವಾಜರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿರುವ ಜಿತೇಂದ್ರ ಸರಸ್ವತಿ ಸ್ವಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೋಳ್ಳುವಂತೆ ಆಗ್ರಹಿಸಿ ಪಟ್ಟಣದ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಬೃಹತ್ ಪ್ರತಿಬಟನೆ ನಡೆಸಿದರು.

ಪಟ್ಟಣದ ಸಂತೆ ಮೈದಾನದಿಂದ ಪ್ರಾರಂಭಗೋಂಡ ಬೃಹತ್ ಪ್ರತಿಬಟನೆ ಜಿತೇಂದ್ರ ಸ್ವಾಮಿಜಿ ವಿರುದ್ಧ ಘೋಷಣೆಗಳನ್ನು ಕೂಗುವಮೂಲಕ ಸಾಗಿಬಂದಿತು. ಮೇರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿಬಂದು ತಹಶೀಲ್ದಾರ ಕಚೇರಿ ಆವರಣಕ್ಕೆ ಬಂದು ತಲುಪಿತು. ನಂತರ ಪ್ರತಿಬಟನಾ ಕಾರರು ಅವಹೇಳನಕಾರಿ ಮಾತನಾಡಿದ ಜಿತೇಂದ್ರ ಸ್ವಾಮಿಜಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ತಹಶೀಲ್ದಾರ ಪ್ರಕಾಶ ಕುದರಿ ಯವರ ಮುಕಾಂತರ ರಾಷ್ಟ್ರಪತಿಯವರಿಗೆ ಮನವಿ ಅರ್ಪಿಸಿದರು.

ಈ ಸಂದರ್ಬದಲ್ಲಿ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಅಬ್ದುಲ್‍ಮಜೀದ ಮಾಳಗಿಮನಿ ಮಾತನಾಡಿ, ಭಾರತದೇಶ ಜಾತ್ಯಾತೀತ ದೇಶವಾಗಿ ಹೊರಹೊಮ್ಮಿದ್ದು, ಇಲ್ಲಿ ಅನೇಕ ದರ್ಮಿಯರು ಸಹೋದರತ್ವ ಬಾವನೆಯಿಂದ ಬಾಳು ಸಾಗಿಸುತ್ತಿದ್ದಾರೆ. ಖ್ವಾಜಾ ಗರೀಬ ನವಾಜರು ಇಡಿ ವಿಶ್ವಕ್ಕೆ ಶಾಂತಿ ಸಂದೇಶಸಾರುವಮೂಲಕ ಮಾನವ ಜನಾಂಗದ ವಳಿತಿಗಾಗಿ ಶ್ರಮಿಸಿದವರಾಗಿದ್ದಾರೆ. ಅಂತಹ ಮಹಾನ ವ್ಯಕ್ತಿಗಳ ಮೇಲೆ ಜಿತೇಂದ್ರ ಸ್ವಾಮಿಜಿಯವರು ಇಲ್ಲ ಸಲ್ಲದ ಮಾತುಗಳನ್ನಾಡಿ ಇಡಿ ವಿಶ್ವದ ಜನತೆಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಭಾರತದೇಶ ಸು ಸಂಸ್ಕೃತ ನಾಡಾಗಿದ್ದು, ಎಲ್ಲ ಜಾತಿ, ಧರ್ಮ, ಸಂಸ್ಕೃತಿಗೆ ಗೌರವಯುತವಾದ ಸ್ಥಾನಮಾನವನ್ನು ನೀಡಿದೆ. ಆದರೆ ಇಂತಹ ಸ್ವಾಮಿಜಿಗಳವರ ಹೇಳಿಕೆಯಿಂದ ಜಾತಿ ಧರ್ಮಗಳಲ್ಲಿ ಕಲಹ ಉಂಟಾಗುವ ಸಾದ್ಯತೆಯಿದ್ದು, ಇಂತಹ ಸ್ವಾಮಿಜಿಗಳ ವಿರುದ್ಧ ಮುಸ್ಲೀಂ ಸಮಾಜ ತಮ್ಮ ಪ್ರಾಣವನು ಲೆಕ್ಕಿಸದೆ ಹೋರಾಡಲು ಸನ್ನದ್ದವಾಗಿದೆ. ಆದ್ದರಿಂದ ಜಿತೇಂದ್ರ ಸರಸ್ವತಿ ಸ್ವಾಮಿಜಿಯವರ ವಿದುದ್ಧ ರಾಷ್ಟ್ರದ್ರೋಹ ಕಾಯ್ದೆಅಡಿ ಬಂದಿಸುವಂತೆ ಆಗ್ರಹಿಸಿದರು.

ಮುಸ್ಲೀಂ ಸಮಾಜದ ಮುಖಂಡರಾದ ಸಾಧಿಕ್ ಮಲ್ಲೂರ, ಅಹಮ್ಮದಬಾಷಾ ಗುಲಾಮ್‍ಮೊದಿನ, ನ್ಯಾಯವಾದಿ ಹನುಮಂತ ಬಂಡಿವಡ್ಡರ, ಮಹಮ್ಮದ ಹನೀಫ್ ಅಂಭೂರ, ಗೌಸ್‍ಖಾನ ಮುನಸಿ, ಮಹಮ್ಮದಜಾಫರ್ ಪಠಾಣ, ಮುಸ್ತಾಕ ತಹಶೀಲ್ದಾರ, ಮುಕ್ತ್ಯಾರ ತಿಮ್ಮಾಪುರ, ತಾಜ್ ತಂಬಾಕವಾಲೆ, ರಬ್ಬಾನಿ ತೊಕಲ್ಲಿ, ಮಲ್ಲಿಕ ಚುಡಿಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ