ಗುಳೇಗುಡ್ಡ

ಸಿದ್ಧರಾಮಯ್ಯನವರ ಕ್ಷೇತ್ರದಲ್ಲಿ ವಸತಿ ಶಾಲೆಗೆ ಆಗ್ರಹ

ಸಿದ್ಧರಾಮಯ್ಯನವರ ಕ್ಷೇತ್ರದಲ್ಲಿ ವಸತಿ ಶಾಲೆಗೆ ಆಗ್ರಹ

ಗುಳೇದಗುಡ್ಡ26: ಬಾಗಲಕೋಟೆ ಜಿಲ್ಲೆಯ ಮೂವತ್ತೇಳು ಹಳ್ಳಿಗಳಲ್ಲಿ ಅಲೆಮಾರಿ ತೊಗಲುಗೊಂಬೆ ಶಿಳ್ಳೇಕ್ಯಾತರು ವಾಸವಾಗಿದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದೂ ಶಿಳ್ಳೇಕ್ಯಾತ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕಾಗಿ ಸರ್ಕಾರ ಜಿಲ್ಲೆಯಲ್ಲಿ  ವಸತಿ ಶಾಲೆಯನ್ನು ತೆರೆಯಬೇಕೆಂದು ಶಿಳ್ಳೇಕ್ಯಾತರ ಸಂಘದ ರಾಜ್ಯ ಅಧ್ಯಕ್ಷ  ಡಾ. ಸಣ್ಣವೀರಣ್ಣ ದೊಡ್ಡಮನಿ ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಅವರು ಮಾಧ್ಯಮರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದು ವರ್ಷಗಳಾದರೂ, ಈ ದೇಶದ ನಿರ್ಗತಿಕರಿಗೆ, ಅಲೆಮಾರಿ ಭಿಕ್ಷುಕರ ಮಕ್ಕಳಿಗೆ ಅಕ್ಷರ ಕಲಿಯಲು  ಸಾಧ್ಯವಾಗುತ್ತಲ್ಲ. ಜಾತಿ ಪ್ರಮಾಣ ಪತ್ರ ಪಡೆಯಲೂ ಅಸಹಾಯಕರಾಗಿದ್ದಾರೆ. ತುತ್ತು ಅನ್ನಕ್ಕಾಗಿ ಮೈಲು ದೂರು ಊರೂರು ತಿರುಗುವ  ಅಲೆಮಾರಿಗಳಿಗೆ ಸರಿಯಾದ ಸೂರು ನಮ್ಮನ್ನಾಳುವ ಪ್ರತಿನಿಧಿಗಳು ಇನ್ನೂ ಒದಗಿಸಿರುವುದಿಲ್ಲ. ಅವರ ಬದುಕಿಗೆ ಎರಡಕ್ಷರ ಕಲಿಯಲು ಸಾಧ್ಯವಾಗದಿರುವುದು ನೋವಿನ ಸಂಗತಿ. ಡಾ.ಬಾಬಾಸಾಹೇಬ ಅಂಬೇಡ್ಕರ್ ನೀಡಿರುವ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಸಮರ​‍್ಕವಾಗಿ ಒದಗಿಸಿಲ್ಲ. ಅಸಂಘಟಿತ ಅಲೆಮಾರಿಗಳ ಗೋಳು ಕೇಳದ ನಮ್ಮ ಜನಪ್ರತಿನಿಧಿಗಳು ಇಂತಹ ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಬೇಕು. ಈ ಅಲೆಮಾರಿ ಸಮುದಾಯಗಳ ಮಕ್ಕಳೂ ಓದಿ ದೇಶದ ನಾಗರಿಕರಾಗಲು  ಸರ್ಕಾರ ಮೂಲಭೂತ ಸೌಕರ್ಯ ಕಲ್ಪಿಸಬೇಕು. 

ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿ ಒಳ್ಳೆಯ ಸಾರಿಗೆ ಸೌಲಭ್ಯವಿರುವುದರಿಂದ ಸರ್ಕಾರ ಅಲೆಮಾರಿಗಳ  ಮಕ್ಕಳಿಗೆ ಅಕ್ಷರ ಕಲಿಯಲು ವಸತಿ ಶಾಲೆ ಮಂಜೂರಿ ಮಾಡಬೇಕು.  ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ಧರಾಮಯ್ಯನವರು ಸುಮಾರು 25 ಎಕರೆ ಜಮೀನಿನಲ್ಲಿ ಶೈಕ್ಷಣಿಕ ಸಂಕೀರ್ಣ ನಿರ್ಮಿಸಿ ಅಭಿವೃದ್ಧಿಪಡಿಸಬೇಕೆಂದು ಶಿಳ್ಳೇಕ್ಯಾತ ರಾಜ್ಯ ಸಂಘದ ಅಧ್ಯಕ್ಷ ಡಾ. ಸಣ್ಣವೀರಣ್ಣ ದೊಡ್ಡಮನಿ ಆಗ್ರಹಿಸಿದ್ದಾರೆ. 


ಸುದ್ದಿ ಓದಿ