ಅನಧಿಕೃತವಾಗಿ ಆರಂಭಿಸಲಾದ ಶಾಲೆಯನ್ನು ಸ್ಥಳಾಂತರಿಸಲು ಆಗ್ರಹ
ಕಾಗವಾಡ 27: ಅನಧಿಕೃತವಾಗಿ ಮಂಗಸೂಳಿ ಗ್ರಾಮದಲ್ಲಿ ಓಪನ್ ಆದ ಶಾಲೆ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪಟ್ಟಿಯಲ್ಲಿಲ್ಲದ ಈ ಶಾಲೆ ಅನಧಿಕೃತವಾಗಿ ಬೆಳಗಾವಿ ಜಿಲ್ಲೆ ಕಾಗವಾಡ್ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನಡೆಸುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಮೂಲತಃ ಉಗಾರ ಖುರ್ದ್ ಗ್ರಾಮದಲ್ಲಿ ನಡೆಸಬೇಕಿದ್ದ ಶಾಲೆಯನ್ನು ಕಾನೂನು ಬಾಹಿರವಾಗಿ ಮಂಗಸೂಳಿ ಗ್ರಾಮದಲ್ಲಿ ಶ್ರೀ ಗುರು ಆಂಗ್ಲ ಮಾಧ್ಯಮ ಶಾಲೆ ಹೆಸರಿನಲ್ಲಿ ನಡೆಸುತ್ತಿರುವುದು ವಿಷಾದನೀಯ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ ಸಹ ತಲೆಕೆಡಿಸಿಕೊಳ್ಳದ ಶಾಲೆಯ ಆಡಳಿತ ಮಂಡಳಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೂಡಲೇ ಶಾಲೆಯ ಅಡಳಿತ ಮಂಡಳಿಯ ಮೇಲೆ ಸೂಕ್ತ ಕಾನೂನು ವರದಿ ರಚಿಸಿ ಶಾಲೆಯನ್ನು ಸ್ಥಳಾಂತರಿಸಬೇಕು, ಇಲ್ಲವಾದಲ್ಲಿ ಕಾಗವಾಡ ಶಿಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಡಿಎಸ್ಎಸ್ ಮುಖಂಡ ಸಚಿನ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.